Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ಕರುಣೆ ಇಲ್ಲದ ಧರಣಿಯ ಕಂಡೆ - Karune illada Dharani Kande Lyrics - Asura Kannada Movie - Shivarajkumar

♪ Film: ASURA

♪ Song Name: KARUNE ILLADE ♪ Singers: RAJESH KRISHNAN, NANDITHA
♪ Music: GURUKIRAN ♪ Lyricist: K.KALYAN ♪ Starcast: DR. SHIVARAJKUMAR, DAMINI, RAGHUVARAN, ANANTH NAG ♪ Producer: SANDESH NAGARAJ ♪ Director: S.MAHENDAR ♪ Banner: SANDESH ENTERPRISES FILMS ♪ Record Label: ANAND AUDIO


ಕರುಣೆ ಇಲ್ಲದ ಧರಣಿಯ ಕಂಡೆ

ಕೆಂಡವ ಕಾರುವ ಗಗನವ ಕಂಡೆ

ವಿಷವನು ತೂರುವ ಗಾಳಿಯ ಕಂಡೆ

ಎದೆಯನು ಉರಿಸುವ ಬೆಂಕಿಯ ಕಂಡೆ

ಸುಳಿಯನು ಮುಳುಗಿಸೋ ನೀರನು ಕಂಡೆ

ಬೊಗಸೆಯ ನೀರಲು ಸುಳಿಯನು ಕಂಡೆ

ಹೂವಿನ ಎದೆಯಲಿ ಮುಳ್ಳನು ಕಂಡೆ

ಹಿಮದಲಿ ಜ್ವಾಲಾಮುಖಿಯನು ಕಂಡೆ

ರೆಕ್ಕೆಯ ಬಿಚ್ಚದ ಹಕ್ಕಿಯ ಕಂಡೆ

ಹಾಡಲು ಬಾರದ ಕೋಗಿಲೆ ಕಂಡೆ

ಮುತ್ತೆ ಇಲ್ಲದ ಕಡಲನು ಕಂಡೆ

ಗಂಧವ ಚೆಲ್ಲದ ಹೂಗಳ ಕಂಡೆ

ಜೇನನು ಹೀರದ ದುಂಬಿಯ ಕಂಡೆ

ದಿನಗಳ ನುಂಗುವ ಕ್ಷಣಗಳ ಕಂಡೆ

ದಿಕ್ಕುಗಳಿಲ್ಲದ ದಾರಿಯ ಕಂಡೆ

ದಾರಿಗಳಿಲ್ಲದ ದಿಕ್ಕನು ಕಂಡೆ

ಮೋಡದ ಹನಿಯಲು ಬೆವರನು ಕಂಡೆ

ಗಾಳಿಯ ಎದೆಯಲು ನಡುಕವ ಕಂಡೆ

ಮಳೆಯ ಬಿಲ್ಲಲು ಕೊಳೆಯನು ಕಂಡೆ

ಇಬ್ಬನಿ ಕಣ್ಣಲು ಕಂಬನಿ ಕಂಡೆ

ಗರ್ಭದ ಒಳಗೂ ಅಳುವನು ಕಂಡೆ

ಕೆಚ್ಚಲ ಹಾಲಲು ವಿಷವನು ಕಂಡೆ

ಕಬ್ಬಿನ ಎದೆಯಲಿ ಬೇವನು ಕಂಡೆ

ನಗುವಿನ ಹೆಸರಲಿ ನೋವನು ಕಂಡೆ

ಸಂಬಂಧಗಳಲಿ ಬಂಧನ ಕಂಡೆ

ಬಂಧನ ಬಿಡಿಸುವ ಕಂಪನ ಕಂಡೆ

ಜೀವನಕೊಂದು ಯೌವ್ವನ ಕಂಡೆ

ಯೌವ್ವನಕೊಂದು ಜೀವನ ಕಂಡೆ

ಚಪ್ಪಾಳೆಗಳಲು ಸಿಡಿಲನು ಕಂಡೆ

ಬೆವರಿಳಿಸುವ ಬೆಳದಿಂಗಳ ಕಂಡೆ

ಅಬಡುಗಚ್ಚುವ ನಿದ್ರೆಯ ಕಂಡೆ

ಪಲ್ಲವಿ ಇಲ್ಲದ ಚರಣವ ಕಂಡೆ

ಗಂಡೆದೆಯಲ್ಲು ಗ್ರಹಣವ ಕಂಡೆ

ಸ್ವತಂತ್ರವಿಲ್ಲದ ಗಾಳಿಯ ಕಂಡೆ

ಬಾನೆ ಇಲ್ಲದ ಬಾನಾಡಿ ಕಂಡೆ

ಜಾತಕವಿಲ್ಲದ ಕನಸನು ಕಂಡೆ

ಜ್ಞಾಪಕವಿಲ್ಲದ ನೆನಪನು ಕಂಡೆ

ತೂಕವೇ ಇಲ್ಲದ ಮಾತನು ಕಂಡೆ

ಸಿಡಿಲೆರೆಯುವ ತಿರುಮೌನವ ಕಂಡೆ

ಚೆಲುವಿನ ಮುಖದಲಿ ಕುರೂಪ ಕಂಡೆ

ಒಲವಿನ ವ್ಯಾಘ್ರ ಸ್ವರೂಪ ಕಂಡೆ

ರುಚಿಗಳೇ ಇಲ್ಲದ ಊಟವ ಕಂಡೆ

ಅಭಿರುಚಿ ಕಾಣದ ಪಾಠವ ಕಂಡೆ

ಅಳುವ ವಯಸಲಿ ಆಸೆಯ ಕಂಡೆ

ಆಡೋ ವಯಸಲಿ ಅವನತಿ ಕಂಡೆ

ಕಲಿಯೋ ವಯಸಲಿ ಬಲಿಯನು ಕಂಡೆ

ಒಂಟಿ ತನದಲಿ ಗಾಯವ ಕಂಡೆ

ಜಂಟಿ ತನದಲಿ ಮಾಯವ ಕಂಡೆ

ನವಿಲು ಕಾಣದ ಗರಿಯನು ಕಂಡೆ

ಗುರುವೇ ಇಲ್ಲದೆ ಗುರಿಯನು ಕಂಡೆ

ಸೂರ್ಯನ ಕಣ್ಣಲಿ ತೇವವ ಕಂಡೆ

ಇರುಳಲಿ ಬೆಳಗಿನ ಜಾವವ ಕಂಡೆ

ರಾಜರು ಕಟ್ಟಿದ ಕೋಶವ ಕಂಡೆ

ಕೋಶವ ಮುರಿಯುವ ಶಾಸನ ಕಂಡೆ

ದಾಸರು ಕಾಣದ ಪದವನು ಕಂಡೆ

ಬಡತನಕಿಂತಲೂ ಬಡತನ ಕಂಡೆ

ಧರ್ಮರಾಯನಲು ಸುಳ್ಳನು ಕಂಡೆ

ಅಂಜನೆಯನಲು ಅಹಮ್ಮು ಕಂಡೆ

ತಾಯಿಮಾತಲು ತಪ್ಪನು ಕಂಡೆ

ಭುವನೇಶ್ವರಿಯಲು ಬೇಧವ ಕಂಡೆ

ನೆತ್ತರು ತುಂಬಿದ ಅನ್ನವ ಕಂಡೆ

ಹುಟ್ಟು ಸಾವಿನ ನಂಟನು ಕಂಡೆ

ಧಗೆಯಲಿ ಚಿಗುರಿನ ಸ್ಪರ್ಶ ಕಂಡೆ

ಹಗೆಯಲಿ ಸಲ್ಲದ ಹರುಷ ಕಂಡೆ

ಸಹಿಸುವ ಆಸರೆಯೊಂದು ಕಂಡೆ

ದಹಿಸುವ ಧಮನಿಗಳನ್ನು ಕಂಡೆ

ಸ್ನೇಹದ ಕೋಟಿ ಪವಾಡ ಕಂಡೆ

ದ್ರೋಹದ ಹೊಸ ಮುಖವಾಡ ಕಂಡೆ

ಇಳಿಸಲು ಆಗದ ಹೊರೆಯನು ಕಂಡೆ

ಹಣೆ ಬರಹಕೆ ಪ್ರತಿ ಹೊಣೆಯನು ಕಂಡೆ

ಛಲದ ಮನಸಿಗೆ ಚಾವಡಿ ಕಂಡೆ

ಮನಸ ಕುಗ್ಗಿಸೋ ಲೇವಡಿ ಕಂಡೆ

ಸೋಲುಗಳಲ್ಲೇ ಗೆಲುವನು ಕಂಡೆ

ಗೆಲುವಲೆ ಸೋಲಿನ ರುಚಿಯನು ಕಂಡೆ

ಕಂಗಳ ತಿವಿಯುವ ಕನ್ನಡಿ ಕಂಡೆ

ಬದುಕನೇ ಕಲುಕುವ ಮುನ್ನುಡಿ ಕಂಡೆ

ಇಳಿಜಾರಿನಲ್ಲು ದಿಣ್ಣೆಯ ಕಂಡೆ

ದಿಣ್ಣೆಯಲಿ ಇಳಿಜಾರನು ಕಂಡೆ

ಹೆಳವನ ದಾರಿಯ ವೇಗವ ಕಂಡೆ

ಮೂಗನ ಎದೆಯಲು ರಾಗವ ಕಂಡೆ

ಮೂರ್ಖನ ಕೈಯಲ್ಲಿ ಮಾರ್ಗವ ಕಂಡೆ

ಕಾಲದ ಕೈಯಲ್ಲಿ ಖಡ್ಗವ ಕಂಡೆ

ಜೊತೆಯಲಿ ಬಾಳುವ ಕಥೆಗಳ ಕಂಡೆ

ಕಥೆಯಾಗಿರುವ ಜೊತೆಯ ಕಂಡೆ

ಜೀವನದುದ್ದಕೂ ನೋವನೆ ಕಂಡೆ

ಆದರು ಪ್ರೀತಿಯು ಕಾಣಲಿಲ್ಲ

ಬಯಸಿದ್ದೊಂದು ಸಿಗಲಿಲ್ಲ

ಸತ್ತು ಬದುಕೋ ಬದುಕೇಕಿನ್ನು

ಪ್ರೀತಿಸೊ ಮನದ ಮರಣ ಕಂಡೇ.........

No comments:

Post a Comment

Write Something about PK Music

new1

new2

new5