ಮರವಿದ್ದರೇನಯ್ಯ ನೆರಳಿಲ್ಲದನಕ
ನೆರಳಿದ್ದರೇನಯ್ಯ ನೀರಿಲ್ಲದನಕ
ನೀರಿದ್ದರೇನಯ್ಯ ಒರತೆಯಿಲ್ಲದನಕ
ಧನವಿದ್ದರೇನಯ್ಯ ಕೊಡುವ
ಮನವಿಲ್ಲದನಕ
ಮನವಿದ್ದರೇನಯ್ಯ ಜ್ಞಾನವಿಲ್ಲದನಕ
ತನುವಿದ್ದರೇನಯ್ಯ ಪುರಂದರ ವಿಠಲನ
ನೆನೆ ನೆನೆದು ಊಳಿಡಮಾಡದನಕ..
ಆಆಆಆಆಆಆಆ
ಆಆಆಆಆಆಆಆ
ಆಆಆಆಆ ಆಆಆಆಆ
ಒಲ್ಲನೋ ಕೃಷ್ಣ ಕೊಳ್ಳನೋ
ಒಲ್ಲನೋ ಕೃಷ್ಣ ಕೊಳ್ಳನೋ
ಎಲ್ಲ ವಸ್ತುಗಳಿದ್ದು
ತುಳಸಿ ಇಲ್ಲದ ಪೂಜೆ
ಒಲ್ಲನೋ ಕೃಷ್ಣ ಕೊಳ್ಳನೋ
ಒಲ್ಲನೋ ಕೃಷ್ಣ ಕೊಳ್ಳನೋ
♬♬♬♬♬♬♬♬♬♬♬♬
ಸಿಂಧು ಗೋದಾವರಿ
ಗಂಗೆ ಉದಕವಿದ್ದು
ಗಂಧ ಪರಿಮಳ ವಸ್ತುಗಳು ಇದ್ದು
ಚಂದುಳ್ಳ ದಿವ್ಯ ಪಂಚಾಮೃತವಿದ್ದು
ಬೃಂದಾವನದ ಶ್ರೀ ತುಳಸಿ
ಇಲ್ಲದ ಪೂಜೆ
ಒಲ್ಲನೋ ಕೃಷ್ಣ ಕೊಳ್ಳನೋ
ಒಲ್ಲನೋ ಕೃಷ್ಣ ಕೊಳ್ಳನೋ
♬♬♬♬♬♬♬♬♬♬♬♬
ಕಮಲ ಮಲ್ಲಿಗೆ ಜಾಜಿ ಚಂಪಕವಿದ್ದು
ವಿಮಲ ಧೂಪದೀಪ ಕರ್ಪೂರವಿದ್ದು
ಅಮಿತ ಪಂಚಪಕ್ಷ್ಯ
ಅಮೃತಾನ್ನಗಳಿದ್ದು
ಕಮಲನಾಭಗೆ ಪ್ರಿಯ ತುಳಸಿ
ಇಲ್ಲದ ಪೂಜೆ
ಒಲ್ಲನೋ ಕೃಷ್ಣ ಕೊಳ್ಳನೋ
ಒಲ್ಲನೋ ಕೃಷ್ಣ ಕೊಳ್ಳನೋ
♬♬♬♬♬♬♬♬♬♬♬♬
ಪೂಜೆಯ ಮಾಡಿರೊ
ಶ್ರೀ ತುಳಸಿ ದಳದ
ಮೂಜಗದೊಡೆಯ ಮುರಾರಿಯನು
ಪೂಜೆಯ ಮಾಡಿರೊ
ಶ್ರೀ ತುಳಸಿ ದಳದ
ಮೂಜಗದೊಡೆಯ ಮುರಾರಿಯನು
ರಾಜಾಧಿರಾಯಾಯ
ಮಂತ್ರ ಪುಷ್ಪಗಳಿಂದ
ರಾಜಾಧಿರಾಯಾಯ
ಮಂತ್ರ ಪುಷ್ಪಗಳಿಂದ
ರಾಜಾರಾಜ ನಮ್ಮ
ಪುರಂದರವಿಠಲನು
ಒಲ್ಲನೋ ಕೃಷ್ಣ ಕೊಳ್ಳನೋ
ಒಲ್ಲನೋ ಕೃಷ್ಣ ಕೊಳ್ಳನೋ
ಎಲ್ಲ ವಸ್ತುಗಳಿದ್ದು
ತುಳಸಿ ಇಲ್ಲದ ಪೂಜೆ
ಒಲ್ಲನೋ ಕೃಷ್ಣ ಕೊಳ್ಳನೋ
ಒಲ್ಲನೋ ಕೃಷ್ಣ ಕೊಳ್ಳನೋ
No comments:
Post a Comment
Write Something about PK Music