ಮುಟ್ಟು ಮೈಲಿಗೆಯಲ್ಲಿ
ಹುಟ್ಟಿ ಬಂದಿರಿ ನೀವು
ಮುಡುಚಟ್ಟು ಎಲ್ಯಾದ ಹೇಳಣ್ಣ
ಮುಡುಚಟ್ಟು ಎಲ್ಯಾದ ಹೇಳಣ್ಣ
ಮುಡುಚೆಟ್ಟಿನೊಳುಬಂದು
ಮುಡುಚೆಟ್ಟಿನೊಳುಬಂದು
ಮುಟ್ಟಿ ತಟ್ಟಿ ಅಂತೀರಿ
ಮುಡುಚಟ್ಟು ಎಲ್ಯಾದ ಹೇಳಣ್ಣ
ಮುಟ್ಟು ಮೈಲಿಗೆಯಲ್ಲಿ
ಹುಟ್ಟಿ ಬಂದಿರಿ ನೀವು
ಮುಟ್ಟು ಮೈಲಿಗೆಯಲ್ಲಿ
ಹುಟ್ಟಿ ಬಂದಿರಿ ನೀವು
ಮುಡುಚಟ್ಟೆಲ್ಯಾದ ಹೇಳಣ್ಣ
ಮುಡುಚಟ್ಟೆಲ್ಯಾದ ಹೇಳಣ್ಣ
ಮುಡುಚೆಟ್ಟಿನೊಳುಬಂದು
♬♬♬♬♬♬♬♬♬♬♬♬
ಎಲುವಿನಾಲಯದೋಳು
ಒಳಹೊಕ್ಕು ನೀಕುಂತು
ಓಡಾಡ ಬೇಡ ಕೇಳಣ್ಣ
ಎಲುವಿನಾಲಯದೋಳು
ಒಳಹೊಕ್ಕು ನೀಕುಂತು
ಓಡಾಡ ಬೇಡ ಕೇಳಣ್ಣ
ಎಲವು ತೊಗಲು ಮಲ
ಮೂತ್ರ ಮಾಂಸವು
ಎಲವು ತೊಗಲು ಮಲ
ಮೂತ್ರ ಮಾಂಸವು
ನಿನ್ನಲ್ಲಿ ಕಾಣುತ್ತಾದಣ್ಣ
ಮುಡುಚಟ್ಟು ಎಲ್ಯಾದ ಹೇಳಣ್ಣ
ಮುಡುಚೆಟ್ಟಿನೊಳುಬಂದು
♬♬♬♬♬♬♬♬♬♬♬♬
ಊರಾ ಹೊಲಸನೆ ತಿಂದು
ಗೋರ್ಯಾಡಿಂಡುವ ಎಮ್ಮಿ
ಹಾಲಿನ ಸವಿ ನೀ ನೋಡೋಣ
ಊರಾ ಹೊಲಸನೆ ತಿಂದು
ಗೋರ್ಯಾಡಿಂಡುವ ಎಮ್ಮಿ
ಹಾಲಿನ ಸವಿ ನೀ ನೋಡೋಣ
ಅದರ ಸ್ವಾದ ನೀ ಉಂಡು
ಗುಂಡಾಗಿ ಕುಂತಿದಿ
ಅದರ ಸ್ವಾದ ನೀ ಉಂಡು
ಗುಂಡಾಗಿ ಕುಂತಿದಿ
ಶೀಲಾ ಎಲ್ಲಿ ಉಳಿಯುತ್ತೇಳಣ್ಣ
ಮುಡುಚಟ್ಟು ಎಲ್ಯಾದ ಹೇಳಣ್ಣ
ಮುಡುಚೆಟ್ಟಿನೊಳುಬಂದು
♬♬♬♬♬♬♬♬♬♬♬♬
ಊರ ಬಾವಿಯ ನೀರ
ಯಾರಾದರೂ ತರುವರು
ನಿಮ್ಮ ನೀರ ಬ್ಯಾರೆಯಾವೇನಣ್ಣ
ಊರ ಬಾವಿಯ ನೀರ
ಯಾರಾದರೂ ತರುವರು
ನಿಮ್ಮ ನೀರ ಬ್ಯಾರೆಯಾವೇನಣ್ಣ
ಲಂಡೇನಳ್ಳ ಹೋಗಿ
ನದಿಯ ಕುಡಿದಮ್ಯಾಲ
ಲಂಡೇನಳ್ಳ ಹೋಗಿ
ನದಿಯ ಕುಡಿದಮ್ಯಾಲ
ನೈವೇದ್ಯಕ್ಕೇಗಾದವು
ಹೇಳಣ್ಣ
ಮುಡುಚಟ್ಟು ಎಲ್ಯಾದ ಹೇಳಣ್ಣ
ಮುಡುಚೆಟ್ಟಿನೊಳುಬಂದು
♬♬♬♬♬♬♬♬♬♬♬♬
ಸೂಸಲಾಡುವ ದೇಹ
ಸೂಸಿ ನೀರವ ಮಾಡಿ
ಮಡಿ ಮಾಡಿಕೊಳ್ಳಬೇಕಣ್ಣ
ಸೂಸಲಾಡುವ ದೇಹ
ಸೂಸಿ ನೀರವ ಮಾಡಿ
ಮಡಿ ಮಾಡಿಕೊಳ್ಳಬೇಕಣ್ಣ
ನಮ್ಮ ಧೀರ ಮಹಾಂತೇಶನ
ಮಹಾಂತೇಶನ
ಮಹಾಂತೇಶನ
ನಮ್ಮ ಧೀರ ಮಹಾಂತೇಶನ
ಬಿಡದೆ ಕೊಂಡಾಡಿದರೆ
ಕಡೆತನಕ ಮಡಿಯಾಗುವೆಯಣ್ಣ
ಕಡೆತನಕ ಮಡಿಯಾಗುವೆಯಣ್ಣ
ಮುಡುಚೆಟ್ಟಿನೊಳುಬಂದು
ಮೈಲಿಗೆ
ಮುಡುಚೆಟ್ಟಿನೊಳುಬಂದು
ಮುಟ್ಟಿ ತಟ್ಟಿ ಅಂತೀರಿ
ಮುಡುಚಟ್ಟು ಎಲ್ಯಾದ ಹೇಳಣ್ಣ
ಮುಟ್ಟು ಮೈಲಿಗೆಯಲ್ಲಿ
ಹುಟ್ಟಿ ಬಂದಿರಿ ನೀವು
ಮುಡುಚಟ್ಟೆಲ್ಯಾದ ಹೇಳಣ್ಣ
ಮುಡುಚಟ್ಟೆಲ್ಯಾದ ಹೇಳಣ್ಣ
ಮುಡುಚಟ್ಟು ಎಲ್ಯಾದ ಹೇಳಣ್ಣ
ಮುಡುಚಟ್ಟು ಎಲ್ಯಾದ ಹೇಳಣ್ಣ
ಮುಡುಚಟ್ಟು ಎಲ್ಯಾದ ಹೇಳಣ್ಣ
No comments:
Post a Comment
Write Something about PK Music