ಚಿತ್ರ: ನಮ್ಮೂರ ಮಂದಾರ ಹೂವೆ
ಕಲಾವಿದರು: ಶಿವರಾಜ್ಕುಮಾರ್,
ರಮೇಶ್ ಅರವಿಂದ್, ಪ್ರೇಮ
ಗಾಯಕರು: ಎಸ್ಪಿಬಿ, ಕೆ ಎಸ್ ಚಿತ್ರಾ
ಸಂಗೀತ: ಇಳಯರಾಜ
ಸಾಹಿತ್ಯ: ಕೆ ಕಲ್ಯಾಣ್
ಮುತ್ತು ಮುತ್ತು ನೀರ ಹನಿಯ
ತಾಂ ತನನನಂ
ಉಲ್ಲಾಸದ ಮೇರೆ ಮೀರಿ
ಧೀಂತನಕಧೀ..
ಮುತ್ತು ಮುತ್ತು ನೀರ ಹನಿಯ
ತಾಂ ತನನನಂ
ಉಲ್ಲಾಸದ ಮೇರೆ ಮೀರಿ
ಧೀಂತನಕಧೀ..
ಆಹಾ ಇಂಥ ಸ್ಪಂದನಕಿಲ್ಲಿ
ಮೂಲ ಋತುಮಾನ..
ಒಹೋ ಇದೇನಿಂಥ ಹೊಸ ಥರ
ಚೈತ್ರ ಋತುಗಾನ
ಮೈಮನವೇ..
ಋತು ಋತುಗಳ ಚೇತನ
ಮುತ್ತು ಮುತ್ತು ನೀರ ಹನಿಯ
ತಾಂ ತನನನಂ
ಉಲ್ಲಾಸದ ಮೇರೆ ಮೀರಿ
ಧೀಂತನಕಧೀ..
♫♫♫♫♫♫♫♫♫♫♫♫
ಋತುಗಳ ಆ ಬಂಡಿಯ ಮೇಲೆ
ಈ ಬಾಳ ಪಯಣವಿದೆ
ಬಾಳಿನ ಈ ಪಯಣಗಳನ್ನು
ಪ್ರೀತಿಯೆ ನಡೆಸುತಿದೆ
ಮಿನುಮಿನುಗೊ ಮಿಂಚುಗಳಂತೆ
ಬಾಳಲ್ಲಿ ತಿರುವು ಇದೆ
ಒಂದೊಂದು ತಿರುವುಗಳಲ್ಲೂ
ಶೃಂಗಾರ ಸರಸವಿದೆ
ಆಹಾ ಎಲ್ಲಾ ಮನಸೂ...
ಆಹಾ ಎಲ್ಲಾ ಮನಸೂ
ಆಹ್ಲಾದಮಯವಿಲ್ಲಿ
ಒ ಹೋ ಹೋ
ಎಲ್ಲ ಹೃದಯ ತುಂಬೊ
ಈ ಸ್ನೇಹ ಜೊತೆಯಲ್ಲಿ
ಇಲ್ಲಿ ತುಟಿಪಿಟಿ ಕೆಂಡದ
ಟಿಟಪಟ ಪುಟಿಯುವ
ತುಂತುರು ಸಡಗರದಲ್ಲಿ ನಾವಿಲ್ಲಿ
ಮುತ್ತು ಮುತ್ತು ನೀರ ಹನಿಯ
ತಾಂ ತನನನಂ
ಉಲ್ಲಾಸದ ಮೇರೆ ಮೀರಿ
ಧೀಂತನಕಧೀ..
ಆಹಾ ಇಂಥ ಸ್ಪಂದನಕಿಲ್ಲಿ
ಮೂಲ ಋತುಮಾನ
ಒಹೋ ಇದೇನಿಂಥ ಹೊಸ ಥರ
ಚೈತ್ರ ಋತುಗಾನ
ಮೈಮನವೇ..
ಋತು ಋತುಗಳ ಚೇತನ
ಮುತ್ತು ಮುತ್ತು ನೀರ ಹನಿಯ
ತಾಂ ತನನನಂ
ಉಲ್ಲಾಸದ ಮೇರೆ ಮೀರಿ
ಧೀಂತನಕಧೀ...
♫♫♫♫♫♫♫♫♫♫♫♫
ತಿರು ತಿರುಗೊ ಭೂಮಿಯಿಂದ
ಎಲ್ಲ ಮನಸು ತಿರುಗುತಿದೆ
ತಿರು ತಿರುಗೊ ಮನಸುಗಳೊಳಗೆ
ಆಸೆಗಳು ತಿರುಗುತಿದೆ
ತಿರುಗಾಡೊ ಮನಸುಗಳೆಲ್ಲ
ಒಂದೆಡೆಯೇ ನಿಲ್ಲುತಿದೆ
ಅದು ನಿಲ್ಲೊ ಜಾಗದ ಹೆಸರು
ಸವಿ ಪ್ರೀತಿ ಅಲ್ಲವೇ
ಒಹೋ ಎಂಥ ಸಮಯಾ...
ಒಹೋ ಎಂಥ ಸಮಯಾ
ಆತ್ಮೀಯವಾಯ್ತಿಲ್ಲಿ
ಒ ಹೋ ಹೋ
ಇಲ್ಲಿ ಎಲ್ಲ ಹೃದಯ
ಬೆಳಕಾಗಿ ಹೋಯ್ತಿಲ್ಲಿ
ಇಲ್ಲಿ ಜುಳುಜುಳು ಹನಿಯಿಸಿ
ಪುಳಕಿಸಿ ಪುಸಯಿಸಿ ಕುಣಿಸೊ
ಸಡಗರದಲ್ಲಿ ನಾವಿಲ್ಲಿ
ಮುತ್ತು ಮುತ್ತು ನೀರ ಹನಿಯ
ತಾಂ ತನನನಂ
ಉಲ್ಲಾಸದ ಮೇರೆ ಮೀರಿ
ಧೀಂತನಕಧೀ
ಆಹಾ ಇಂಥ ಸ್ಪಂದನಕಿಲ್ಲಿ
ಮೂಲ ಋತುಮಾನ
ಒಹೋ ಇದೇನಿಂಥ ಹೊಸಥರ
ಚೈತ್ರ ಋತುಗಾನ
ಮೈಮನವೇ..
ಋತು ಋತುಗಳ ಚೇತನ
ಮುತ್ತು ಮುತ್ತು ನೀರ ಹನಿಯ
ತಾಂ ತನನನಂ
ಉಲ್ಲಾಸದ ಮೇರೆ ಮೀರಿ
ಧೀಂತನಕಧೀ..
No comments:
Post a Comment
Write Something about PK Music