ಚಿತ್ರ: ಮಿಡಿದ ಹೃದಯಗಳು
ಸಾಹಿತ್ಯ-ಸಂಗೀತ: ಹಂಸಲೇಖ
ಗಾಯಕರು: SPB & K.S ಚಿತ್ರ
ದೇವಲೋಕ ಪ್ರೇಮಲೋಕ
ನನ್ನ ಮನೆ ಈಗ
ಇಲ್ಲಿ ನಾನು ನನ್ನ ಗಂಡ
ನನ್ನ ಮಗುವೇ
ಪ್ರತೀ ರಾತ್ರಿ ಪ್ರತೀ ಹಗಲು
ಬರೀ ನಗುವೆ
ದೇವಲೋಕ ಪ್ರೇಮಲೋಕ
ನನ್ನ ಮನೆ ಈಗ
ಇಲ್ಲಿ ನಾನು ನನ್ನ ಹೆಂಡತಿ
ನನ್ನಮಗುವೇ
ಪ್ರತೀ ರಾತ್ರಿ ಪ್ರತೀ ಹಗಲು
ಬರೀ ನಗುವೆ
♫♫♫♫♫♫♫♫♫♫♫♫
ಕನಸಿನ ಮಾಲೆ ಕಟ್ಟಿದ ಮೇಲೆ
ನನಸು ಮಾಡಿದೆ
ಮನಸು ನೀಡಿದೆ ಹೃದಯ ಮಿಡಿಸಿದೆ
ಬಡತನ ನಾನು ಹೊಸತನ ನೀನು
ನನ್ನ ವರಿಸಿದೆ ಜೀವ ಬೆರೆಸಿದೆ
ನೋವ ಮರೆಸಿದ
ಕಾವೇರಿ ನನಗಕ್ಕ ನಾ ಕಪಿಲ
ನಿನ್ನಿಂದ ಪಡಕೊಂಡೆ ನಾ ಸಕಲ
ಈ ಜನುಮದಲಿ ಮರುಜನುಮದಲಿ
ನನ್ನಾಳುವ ಪತಿ ನೀನೇ
ಓಯ್ ಕಾವೇರಮ್ಮ
ಯಾವ ಲೋಕದಲ್ಲಿ ಇದಿಯಾ
ದೇವಲೋಕ ಪ್ರೇಮಲೋಕ
ನನ್ನ ಮನೆ ಈಗ
ಇಲ್ಲಿ ನಾನು ನನ್ನ ಗಂಡ
ನನ್ನ ಮಗುವೇ
ಪ್ರತೀ ರಾತ್ರಿ ಪ್ರತೀ ಹಗಲು
ಬರೀ ನಗುವೆ
♫♫♫♫♫♫♫♫♫♫♫♫
ವರುಷಗಳೆಲ್ಲಾ ನಿಮಿಷಗಳಂತೆ
ಉರುಳಿ ಹೋದವು
ನಿನ್ನ ಜೊತೆಯಲಿ ಪ್ರೇಮ ಕಥೆಯಲಿ
ಬಯಕೆಗಳೆಲ್ಲಾ ಹೊಸಚಿಗುರಂತೆ
ಮರಳಿಬಂದವು
ನಿನ್ನ ನಗುವಲಿ ಪ್ರೇಮವರದಲಿ
ಇಲ್ಲಿ ಕೋಪ ಇಲ್ಲಿ ತಾಪ ಅಪರೂಪ
ಅತೀ ಸರಳ
ಅತೀ ವಿರಳ ನಿನ್ನರೂಪ
ಈ ಜನುಮದಲಿ ಮರುಜನುಮದಲಿ
ನನ್ನಾಳುವ ದೊರೆ ನೀನೇ
ಅಮ್ಮ ಯಾವ ಲೋಕದಲ್ಲಿದಿಯಾ?
ದೇವಲೋಕ ಪ್ರೇಮಲೋಕ
ನನ್ನ ಮನೆ ಈಗ
ಇಲ್ಲಿ ನಾನು ನನ್ನಗಂಡ
ನನ್ನ ಮಗುವೇ
ಪ್ರತೀ ರಾತ್ರಿ ಪ್ರತೀ ಹಗಲು
ಬರೀ ನಗುವೆ
ದೇವಲೋಕ ಪ್ರೇಮಲೋಕ
ನನ್ನ ಮನೆ ಈಗ
ಇಲ್ಲಿ ನಾನು ನನ್ನ ಹೆಂಡತಿ
ನನ್ನಮಗುವೇ
ಪ್ರತೀ ರಾತ್ರಿ ಪ್ರತೀ ಹಗಲು
ಬರೀ ನಗುವೆ
No comments:
Post a Comment
Write Something about PK Music