ಚಿತ್ರ: ಅಪ್ಪು
ಗಾಯನ: ರಾಜ್ ಕುಮಾರ್
ಹಾಡು: ಆ ದೇವರ ಹಾಡು
ಸಂಗೀತ: ಗುರುಕಿರಣ್
ಸಾಹಿತ್ಯ: ಶ್ರೀರಂಗ
ಪುನೀತ್ ರಾಜ್ಕುಮಾರ್, ರಕ್ಷಿತಾ
ಆ ದೇವರ ಹಾಡಿದು
ನಮ್ಮಂತೆ ಎಂದೂ ಇರದು
ನಗುವಿರಲಿ ಅಳುವಿರಲಿ
ಅವನಂತೆಯೇ ನಡೆವುದು
ಆ ದೇವರ ಹಾಡಿದು
ನಮ್ಮಂತೆ ಎಂದೂ ಇರದು
ನಗುವಿರಲಿ ಅಳುವಿರಲಿ
ಅವನಂತೆಯೇ ನಡೆವುದು
♬♬♬♬♬♬♬♬♬♬
ನೋವಲ್ಲು ನೂರು
ಸುಖವುಂಟು ಇಲ್ಲಿ
ಸುಖದಲ್ಲು ನೂರು
ನೋವುಂಟು ಇಲ್ಲಿ
ಈ ಕಾಲದ ಕೈಯ್ಯಲ್ಲಿರೋ
ಗಡಿಯಾರವೇ ನಾನು ನೀನು
ನಡೆಸೋನದೆ ಕೊನೆಯ ಮಾತು
ಆ ದೇವರ ಹಾಡಿದು
ಅದು ಎಂದೋ ಬರೆದಾಗಿಹುದು
ಉಸಿರಿನಲೇ, ಹೃದಯಗಳು
ಉಯ್ಯಾಲೆಯಾಗಿರುವುದು
♬♬♬♬♬♬♬♬♬♬
ಕ್ಷಣಕೊಮ್ಮೆ ಸನಿಹ
ಕ್ಷಣಕೊಮ್ಮೆ ವಿರಹ
ಹಣೆಮೇಲೆ ಕುಳಿತ
ಆ ವಿಧಿಯ ಬರಹ
ಈ ಭೂಮಿಯೇ ಸುರವೀಣೆಯು
ಸ್ವರತಂತಿಯೇ ನಾನು ನೀನು
ನುಡಿಸೋನದೇ ಕೊನೆಯ ಹಾಡು
ಆ ದೇವರ ಹಾಡಿದು
ಅದು ಎಂದೂ ಬದಲಾಗದು
ಭರವಸೆಯೆ ಹೊಸ ಬೆಳಕು
ನಿಜ ಪ್ರೀತಿ ನಿಯಮ ಇದು
ಆ ದೇವರ ಹಾಡಿದು
ನಮ್ಮಂತೆ ಎಂದೂ ಇರದು
ನಗುವಿರಲಿ ಅಳುವಿರಲಿ
ಅವನಂತೆಯೇ ನಡೆವುದು
ಅವನಂತೆಯೇ ನಡೆವುದು
ಅವನಂತೆಯೇ ನಡೆವುದು
No comments:
Post a Comment
Write Something about PK Music