ಒಂದು ಅಮವಾಸ್ಯೆ ಕತ್ತಲು..
ಅಲ್ಲಿ ಯಾರು ಇಲ್ಲ, ಯಾರು
ಕೂಡ ಕಾಣ್ತ ಇಲ್ಲ..
ನನಗೆ ನಾನೆ ಕಾಣ್ತಿಲ್ಲ..
ನಾನು ಎಲ್ಲಿದ್ದೀನಿ ಅಂತ ತಿಳಿಯುವಷ್ಟು
ಕೂಡ ನನಗೆ ಅರಿವು ಇರ್ಲಿಲ್ಲ...
ನನ್ನೊಳಗೆ ನಾನಿದ್ದೀನ ಅಂತ
ನನಗೆ ಗೊತ್ತಿರಲಿಲ್ಲ..
ಆ ಕತ್ತಲೆಯಲ್ಲೂ ಕೂಡ ಒಂದು
ಹುಣ್ಣಿಮೆಯ ಬೆಳಕು ಹರಿಯಿತು.
ಏನೋ ತಿಳಿಯದ ಸಂತೋಷ, ಹರುಷ,
ಸಂಭ್ರಮ..
ಹುಣ್ಣಿಮೆಯ ಚಂದ್ರನಂತೆ ಹೊಳೆಯುತ್ತಿದೆ..
ಏನೆಂದು ತಿಳಿಯಬೇಕೆಂಬ ಹಂಬಲ..
ಯಾಕೆ ಈ ಹಂಬಲ..?
ಈ ಹಂಬಲಕ್ಕೆ ಬೆಂಬಲ ನೀಡೋ
ಒಂದು ಜೀವವೂ ನನ್ನ ಜೊತೆಯಲ್ಲಿರಲಿಲ್ಲ.
ಆ ಹೊಳೆಯುತ್ತಿರುವ ಹುಣ್ಣಿಮೆಯ
ಚಂದ್ರನನ್ನು ಗುರಿಯಿಟ್ಟು ನೋಡಲಾರಂಬಿಸಿದೆ..
ಅಲ್ಲಿ ಹೊಳೆಯಿತ್ತಿರುವುದು
ಚಂದ್ರನಲ್ಲ ಆ ಚಂದ್ರನಷ್ಟೆ ಪ್ರಕಾಶಮಾನವುಳ್ಳ ನನ್ನ ಹುಡುಗಿ..!
ಅವಳು ನನ್ನನ್ನೆ ನೋಡುತ್ತ
ಕಿರುನಗೆಯನ್ನು ಬೀರುತ್ತ ಕರೆದಂತಾಗುತ್ತಿತ್ತು.
ನನಗೆ ಹೋಗಿ ಅವಳನ್ನು ತಬ್ಬಿ
ಮುದ್ದಾಡಬೇಕೆನಿಸುತ್ತಿತ್ತು.
ಆದರೆ ಅವಳ ಹತ್ತಿರ ಹೋಗುವಷ್ಟು
ಶಕ್ತಿ ನನ್ನಲ್ಲಿರಲಿಲ್ಲ.
ಯಾರೊ ನನ್ನ ಕಟ್ಟಿಹಾಕಾದ್ದಾರೇನೊ
ಅನಿಸುತಿತ್ತು.
ಅವಳು ಕಣ್ಣಿನ ಸನ್ನೆಯಲಿ ನನ್ನನ್ನು
ಕರೆದು ಮುಗುಳ್ನಗುತ್ತ ಓಡಲಾರಂಬಿಸಿದಳು..
ನನಗೆ ಅವಳ ಹಿಂದೆ ಹೋಗಬೇಕೆಂಬ
ಬಯಕೆ..
ಆದರೆ ಯಾವುದೋ ಶಕ್ತಿ ನನ್ನನ್ನು
ಬಿಗಿಯಾಗಿ ಹಿಡಿದಿದೆ..
ಅವಳ ಹೆಸರು ಕೂಗ್ಲಾ?.. ಬೇಡ್ವಾ?..
ಎಂಬ ತಳಮಳ..
ಅವಳು ಓಡುತ್ತಿದ್ದಾಳೆ, ನನಗೆ
ಹೋಗಲಾಗುತ್ತಿಲ್ಲ.
ಕೊನೆಗೆ ಅವಳ ಹೆಸರು ಕೂಗಿಯೇ
ಬಿಟ್ಟೆ..
ಕರೆದ ತಕ್ಷಣ ಮಳೆನೀರು ಸುರಿದೇ
ಬಿಟ್ಟಿತು,
ಕಣ್ಣು ಬಿಟ್ಟು ನೋಡಿದರೆ ಎದುರಲ್ಲಿ
ನಮ್ ಅಪ್ಪ ಜಗ್ ಹಿಡಿದು
"ಯಾರ್ಲ ಆ ಹುಡ್ಗಿ ಕನವರಿಸ್ತ
ಇದ್ದಲಾ" ಅಂತ ಮೈ ತುಂಬಾ ಉಗಿದ್ರು.
- ಪ್ರಸು
No comments:
Post a Comment
Write Something about PK Music