ಚಿತ್ರ:
ಧರ್ಮ
ಕಾವ್ಯ..... ಕಾವ್ಯ.....
ಕಾವ್ಯ..... ಕಾವ್ಯ.....
ಅಮೃತ ಉಣಿಸು ಮಾನವನೆದೆಗೆ
ಪ್ರೀತಿಯ ಉಣಿಸು ದಾನವನೆದೆಗೆ
ಅನಂತ ಅನಂತ ಸುಖದ ತರಂಗ ಮೃದಂಗ ನುಡಿಸು
ಅಶಾಂತ ವಿಷಾಂತ ಮನದ ವಿರಾಗ ವಿಯೋಗ ತಣಿಸು ತಣಿಸು
ಕಾವ್ಯ..... ಕಾವ್ಯ.....
ಅಮೃತ ಉಣಿಸು ಮಾನವನೆದೆಗೆ
ಪ್ರೀತಿಯ ಉಣಿಸು ದಾನವನೆದೆಗೆ
♫♫♫♫♫♫♫♫♫♫♫♫♫♫
ಮಧುರ ಮುರಳಿಯ ಲಹರಿಯಲಿ ನಿಂದಗೋಕುಲ ನಮ್ಮದಾಗಿಸು
ಶಿವನ ನೂಪುರ ಅನುರಣಿಸೋ ಆ ಕೈಲಾಸವ ಕಣ್ಣ ತುಂಬಿಸು
ಸೌಂದರ್ಯವೆಲ್ಲ ಏಕವಾಗಿ
ಸೌಂದರ್ಯವೆಲ್ಲ ಏಕವಾಗಿ ಮಂದಹಾಸವಾಗಲಿ
ಬೀರಿದ ಎದೆಯ ಬೆಸೆಯಲಿ
ನಿನ್ನ ಪ್ರತಿಭೆ ಕಿರಣದಿ ಅಳುವ ಆತ್ಮ ಅರಳಲಿ
ಅನಂತ ಅನಂತ ಸುಖದ ತರಂಗ ಮೃದಂಗ ನುಡಿಸು
ಅಶಾಂತ ವಿಷಾಂತ ಮನದ ವಿರಾಗ ವಿಯೋಗ ತಣಿಸು ತಣಿಸು
ಕಾವ್ಯ..... ಕಾವ್ಯ.....
ಅಮೃತ ಉಣಿಸು ಮಾನವನೆದೆಗೆ
ಪ್ರೀತಿಯ ಉಣಿಸು ದಾನವನೆದೆಗೆ
♫♫♫♫♫♫♫♫♫♫♫♫♫♫
ತನದೀಂತ
ದೀಂತ ಧೀಂ ದೀರನ
ತನ ತೋಮ್ತತೋಮ್ತ ನನ ಧಿರನ
ತನದೀಂತ
ದೀಂತ ಧೀಂ ದೀರನ
ತನ ತೋಮ್ತತೋಮ್ತ ನನ
ತನ ಧಿರನ
ಕಾವ್ಯ ಕನ್ನಿಕೆಯ ಪಾದಗಳ ಕಂಡು ಹಿಂಗಲಿ ನನ್ನ ಕಂಗಳು
ಕಾವ್ಯ ದೇವತೆಯ ಸ್ತುತಿ ಮಾಡಿ ಕಂದಿ ಹೋಗಲಿ ನನ್ನ ಕಂಟವು
ಎದೆಯಲ್ಲಿ ಮೂಡಿ ಮಾತನಾಡಿ
ಎದೆಯಲ್ಲಿ ಮೂಡಿ ಮಾತನಾಡಿ ಎಲ್ಲಿ ಮಾಯವಾದಳೊ
ಏನು ಬಯಸಿ ಬಂದಳೋ ಏನು ದೋಷ ಕಂಡಳೋ
ಮತ್ತೆ ಹೇಗೆ ಬರುವಳೋ
ಕಾವ್ಯಕ್ಕೆ ದ್ವನಿಯಾಗಿ ಓಂಕಾರ ನುಡಿದ ಪಾದ
ವೇದಾದಿ ಮಂತ್ರಗಳ ಮಾರ್ದನಿಸೋ ದಿವ್ಯ ಪಾದ
ನಿಷ್ಕಲ್ಮಶ ಶಿಶುವಂತ ಲಲಿತಕಲಾ ಶುದ್ದ ಪಾದ
ಕವಿಕುಲವೇ ಶರಣೆನ್ನೋ ಅಕ್ಷರಶಹ ಸತ್ಯ ಪಾದ...
ಆ
ಆ ಆ ಆ ಆ ಆ ಆ ಆ ಆ ಆ ಆ
ಆ
ಅನಂತ ಅನಂತ ಸುಖದ ತರಂಗ ಮೃದಂಗ ನುಡಿಸು
ಅಶಾಂತ ವಿಷಾಂತ ಮನದ ವಿರಾಗ ವಿಯೋಗ ತಣಿಸು ತಣಿಸು
ಕಾವ್ಯ..... ಕಾವ್ಯ.....
ಅಮೃತ ಉಣಿಸು ಮಾನವನೆದೆಗೆ
ಪ್ರೀತಿಯ ಉಣಿಸು ದಾನವನೆದೆಗೆ
No comments:
Post a Comment
Write Something about PK Music