Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ಎಲ್ಲೆಲ್ಲಿ ನೋಡಲಿ ನಿನ್ನನ್ನೇ ಕಾಣುವೆ - Ellelli Nodali Lyrics - Naa ninna Mareyalaare - Rajkumar - Manjula YELLELLI NODALI LYRICS IN KANNADA


ಚಿತ್ರ: ನಾ ನಿನ್ನ ಮರೆಯಲಾರೆ

ಗಂ: ಎಲ್ಲೆಲ್ಲಿ ನೋಡಲಿ ನಿನ್ನನ್ನೇ ಕಾಣುವೆ
       ಕಣ್ಣಲ್ಲಿ ತುಂಬಿರುವೆ ಮನದಲಿ ಮನೆಮಾಡಿ ಆಡುವೆ
ಹೆ:   ಎಲ್ಲೆಲ್ಲಿ ನೋಡಲಿ ನಿನ್ನನ್ನೇ ಕಾಣುವೆ
       ಕಣ್ಣಲ್ಲಿ ತುಂಬಿರುವೆ ಮನದಲಿ ಮನೆಮಾಡಿ ಆಡುವೆ
ಗಂ: ಎಲ್ಲೆಲ್ಲಿ ನೋಡಲಿ ನಿನ್ನನ್ನೇ ಕಾಣುವೆ
♫♫♫♫♫♫♫♫♫♫♫♫♫♫
ಗಂ: ಆ ಕೆಂಪು ತಾವರೆ ಆ ನೀರಿಗಾದರೆ
       ಈ ಹೊನ್ನ ತಾವರೆ ನನ್ನಾಸೆಯ ಸೆರೆ
ಆ..... ಆ ಆ ಆ
ಆ ಆ ಆ ಆ...ಆ ಆ ಆ ಆ
ಆ ಆ ಆ ಆ ಆ ಆ ಆ
ಹೆ:   ಮಿಂಚೆಂಬ ಬಳ್ಳಿಗೆ ಸ್ನೇಹದ ಆಸರೆ
       ಈ ಹೆಣ್ಣ ಬಾಳಿಗೆ ನಿನ್ನ ತೋಳಿನಾಸರೆ
ಗಂ: ಓ... ಯುಗಗಳು ಜಾರಿ ಉರುಳಿದರೇನು
ಹೆ:   ನಾನೇ ನೀನು ನೀನೆ ನಾನು
ಗಂ: ಆದ ಮೇಲೆ ಬೇರೆ ಏನಿದೆ
ಹೆ:   ಎಲ್ಲೆಲ್ಲಿ ನೋಡಲಿ
ಗಂ:  ನಿನ್ನನ್ನೇ ಕಾಣುವೆ
ಹೆ:   ಕಣ್ಣಲ್ಲಿ ತುಂಬಿರುವೆ ಮನದಲಿ ಮನೆಮಾಡಿ ಆಡುವೆ
ಗಂ:  ಎಲ್ಲೆಲ್ಲಿ ನೋಡಲಿ ನಿನ್ನನ್ನೇ ಕಾಣುವೆ
♫♫♫♫♫♫♫♫♫♫♫♫♫♫
ಹೆ:   ರವಿಯನ್ನು ಕಾಣದೆ ಹಗಲೆಂದು ಆಗದು
       ನಿನ್ನನ್ನು ನೋಡದೆ ಈ ಪ್ರಾಣ ನಿಲ್ಲದು
ಗಂ:  ಕಡಲನ್ನು ಸೇರದ ನದಿಯಲ್ಲಿ ಕಾಣುವೆ
       ನಿನ್ನನ್ನು ಸೇರದೆ ನಾ ಹೇಗೆ ಬಾಳುವೆ
ಹೆ:   ಓ..... ವಿರಹದ ನೋವ ಮರೆಯಲಿ ಜೀವ
ಗಂ: ಹೂವು ಗಂಧ ಸೇರಿದಂತೆ
ಹೆ:   ಪ್ರೇಮದಿಂದ ನಿನ್ನ ಸೇರುವೆ
ಗಂ: ಎಲ್ಲೆಲ್ಲಿ ನೋಡಲಿ
ಹೆ:   ನಿನ್ನನ್ನೇ ಕಾಣುವೆ
ಜೊ: ಕಣ್ಣಲ್ಲಿ ತುಂಬಿರುವೆ ಮನದಲಿ ಮನೆಮಾಡಿ ಆಡುವೆ
        ಎಲ್ಲೆಲ್ಲಿ ನೋಡಲಿ ನಿನ್ನನ್ನೇ ಕಾಣುವೆ
ಗಂ: ಎಲ್ಲೆಲ್ಲಿ ನೋಡಲಿ ನಿನ್ನನ್ನೇ ಕಾಣುವೆ

No comments:

Post a Comment

Write Something about PK Music

new1

new2

new5