ಚಿತ್ರ: ನಾ ನಿನ್ನ ಮರೆಯಲಾರೆ
ಗಂ: ಎಲ್ಲೆಲ್ಲಿ ನೋಡಲಿ ನಿನ್ನನ್ನೇ ಕಾಣುವೆ
ಕಣ್ಣಲ್ಲಿ ತುಂಬಿರುವೆ ಮನದಲಿ ಮನೆಮಾಡಿ ಆಡುವೆ
ಹೆ: ಎಲ್ಲೆಲ್ಲಿ ನೋಡಲಿ ನಿನ್ನನ್ನೇ ಕಾಣುವೆ
ಕಣ್ಣಲ್ಲಿ ತುಂಬಿರುವೆ ಮನದಲಿ ಮನೆಮಾಡಿ ಆಡುವೆ
ಗಂ: ಎಲ್ಲೆಲ್ಲಿ ನೋಡಲಿ ನಿನ್ನನ್ನೇ ಕಾಣುವೆ
♫♫♫♫♫♫♫♫♫♫♫♫♫♫
ಗಂ: ಆ ಕೆಂಪು ತಾವರೆ ಆ ನೀರಿಗಾದರೆ
ಈ ಹೊನ್ನ ತಾವರೆ ನನ್ನಾಸೆಯ ಸೆರೆ
ಆ..... ಆ ಆ ಆ
ಆ ಆ ಆ ಆ...ಆ ಆ ಆ ಆ
ಆ ಆ ಆ ಆ ಆ ಆ ಆ
ಹೆ: ಮಿಂಚೆಂಬ ಬಳ್ಳಿಗೆ ಸ್ನೇಹದ ಆಸರೆ
ಈ ಹೆಣ್ಣ ಬಾಳಿಗೆ ನಿನ್ನ ತೋಳಿನಾಸರೆ
ಗಂ: ಓ... ಯುಗಗಳು ಜಾರಿ ಉರುಳಿದರೇನು
ಹೆ: ನಾನೇ ನೀನು ನೀನೆ ನಾನು
ಗಂ: ಆದ ಮೇಲೆ ಬೇರೆ ಏನಿದೆ
ಹೆ: ಎಲ್ಲೆಲ್ಲಿ ನೋಡಲಿ
ಗಂ: ನಿನ್ನನ್ನೇ ಕಾಣುವೆ
ಹೆ: ಕಣ್ಣಲ್ಲಿ ತುಂಬಿರುವೆ ಮನದಲಿ ಮನೆಮಾಡಿ ಆಡುವೆ
ಗಂ: ಎಲ್ಲೆಲ್ಲಿ ನೋಡಲಿ ನಿನ್ನನ್ನೇ ಕಾಣುವೆ
♫♫♫♫♫♫♫♫♫♫♫♫♫♫
ಹೆ: ರವಿಯನ್ನು ಕಾಣದೆ ಹಗಲೆಂದು ಆಗದು
ನಿನ್ನನ್ನು ನೋಡದೆ ಈ ಪ್ರಾಣ ನಿಲ್ಲದು
ಗಂ: ಕಡಲನ್ನು ಸೇರದ ನದಿಯಲ್ಲಿ ಕಾಣುವೆ
ನಿನ್ನನ್ನು ಸೇರದೆ ನಾ ಹೇಗೆ ಬಾಳುವೆ
ಹೆ: ಓ..... ವಿರಹದ ನೋವ ಮರೆಯಲಿ ಜೀವ
ಗಂ: ಹೂವು ಗಂಧ ಸೇರಿದಂತೆ
ಹೆ: ಪ್ರೇಮದಿಂದ ನಿನ್ನ ಸೇರುವೆ
ಗಂ: ಎಲ್ಲೆಲ್ಲಿ ನೋಡಲಿ
ಹೆ: ನಿನ್ನನ್ನೇ ಕಾಣುವೆ
ಜೊ: ಕಣ್ಣಲ್ಲಿ ತುಂಬಿರುವೆ ಮನದಲಿ ಮನೆಮಾಡಿ ಆಡುವೆ
ಎಲ್ಲೆಲ್ಲಿ ನೋಡಲಿ ನಿನ್ನನ್ನೇ ಕಾಣುವೆ
ಗಂ: ಎಲ್ಲೆಲ್ಲಿ ನೋಡಲಿ ನಿನ್ನನ್ನೇ ಕಾಣುವೆ
No comments:
Post a Comment
Write Something about PK Music