Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

Hrudayave ninna hesarige Kannada Lyrics | ಹೃದಯವೇ ನಿನ್ನ ಹೆಸರಿಗೆ



ಚಿತ್ರ: ಬೆಳ್ಳಿ ಮೋಡಗಳು

ಹೃದಯವೇ ನಿನ್ನ ಹೆಸರಿಗೆ
ಬರೆದೆ ನನ್ನೇ ನಾ..........
ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಬಂದ
ಬೆಳ್ಳಿ ಬೆಳ್ಳಿ ಬೆಳ್ಳಿಮೋಡ ಚೆಂದ
ಆಕಾಶ ನಾನಾದೆ ನಾ…….
ಹೃದಯವೇ ನಿನ್ನ ಹೆಸರಿಗೆ
ಬರೆದೆ ನನ್ನೇ ನಾ……
ಮಾತಿನಲ್ಲೆ ತಂದೆ ಮಳೆಬಿಲ್ಲ
ನಾಚಿ ನಿಂತ ಹೂವ ಬಳ್ಳಿಲೆಲ್ಲ
ಬಾನಲ್ಲಿ ಒಂದಾದೆ ನಾ ....
ಹೃದಯವೇ ನಿನ್ನ ಹೆಸರಿಗೆ
ಬರೆದೆ ನನ್ನೇ ನಾ…….
♫♫♫♫ ♫♫♫♫ ♫♫♫♫ ♫♫♫♫
ಕಣ್ಣಿನಲಿ ಆಸೆ ಅಂಕುರಿಸಿ
ಪ್ರಥಮಗಳು ಪಲ್ಲವಿಸಿ
ಉದಯಗಳ ತೀರ ಸಂಚರಿಸಿ
ಹೃದಯಗಳು ಝೇಂಕರಿಸಿ
ಪ್ರಣಯದ ಹಾಡಾದೆ ನಾ
ಅರಳಿದ ಹೂವಾದೆ ನಾ
ಋತುವಲಿ ಒಂದಾದೆ ನಾ
... .. ಆ ಆ ಆ.......
ಹೃದಯವೇ ನಿನ್ನ ಹೆಸರಿಗೆ
ಬರೆದೇ ನನ್ನೇ ನಾ……..
ಹೃದಯವೇ ನಿನ್ನ ಹೆಸರಿಗೆ
ಬರೆದೇ ನನ್ನೇ ನಾ.......
♫♫♫♫ ♫♫♫♫ ♫♫♫♫ ♫♫♫♫
ಮಳೆ ಹನಿಯ ಮೋಡ ನಾನಾಗಿ
ಹನಿ ಇಡುವೆ ನೆನಪಾಗಿ
ಉದಯಗಳ ಊರೇ ನಾನಾಗಿ
ಬೆಳಕಿಡುವೆ ನಿನಗಾಗಿ
ಪ್ರಣಯದ ಆರಾಧನಾ
ಋತುವಿನ ಆಲಾಪನ
ಮಿಥುನದ ಆಲಿಂಗನ
ಹೂಂ ......
ಹೃದಯವೇ ನಿನ್ನ ಹೆಸರಿಗೆ
ಬರೆದೆ ನನ್ನೇ ನಾ
ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಬಂದ
ಮಾತಿನಲ್ಲೆ ತಂದೆ ಮಳೆಬಿಲ್ಲ
ಆಕಾಶ ನಾನಾದೆ ನಾ
ಬಾನಲ್ಲಿ ಒಂದಾದೆ ನಾ ....
ಹೃದಯವೇ ನಿನ್ನ ಹೆಸರಿಗೆ
ಬರೆದೆ ನನ್ನೇ ನಾ
ಹೃದಯವೇ ನಿನ್ನ ಹೆಸರಿಗೆ
ಬರೆದೆ ನನ್ನೇ ನಾ……


No comments:

Post a Comment

Write Something about PK Music

new1

new2

new5