Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

Bhoomi mele baadigedaara neenanna Lyrics - Rushi Songs Lyrics - ಭೂಮಿ ಮೇಲೆ ಬಾಡಿಗೆದಾರ ನೀನಣ್ಣ

Song: Bhoomi mele baadigedaara neenanna
Lyrics: Rushi
Music/Singer: Samson

ಭೂಮಿ ಮೇಲೆ ಬಾಡಿಗೆದಾರ ನೀನಣ್ಣ
ಅವನೇಳಿದಾಗ ಜಾಗ ಖಾಲಿ ಮಾಡಣ್ಣ
ಭೂಮಿ ಮೇಲೆ ಬಾಡಿಗೆದಾರ ನೀನಣ್ಣ
ಅವನೇಳಿದಾಗ ಜಾಗ ಖಾಲಿ ಮಾಡಣ್ಣ
ಬಾಡಿಗೆ ಮನೆಗಾಗಿ ಇಲ್ಲಿ ಜಗಳ ಬೇಡಣ್ಣ
ನಿನ್ನ ಸ್ವಂತ ಮನೆ ಮೇಲೆ ಇದೆ ಮರೆತರೆ ಹೆಂಗಣ್ಣ
ಮೂರು ದಿನದ ಸಂತೆಯಲ್ಲಿ ನಗುತ ಇರಣ್ಣ
ಮೂರು ದಿನದ ಸಂತೆಯಲ್ಲಿ ನಗುತ ಇರಣ್ಣ
ಇಲ್ಲಿ ದ್ವೇಷದಿಂದ ಏನು ಲಾಭ ಇಲ್ಲ ತಿಳಿಯಣ್ಣ
ಬರುವಾಗ ಹೆಂಗೆ ಬಂದೆ ಹಂಗೆ ಹೋಗಣ್ಣ
ನೀನು ಇಲ್ಲಿಂದ ತಗಂಡ್ ಹೋಗೋದ್ ಏನು ಇಲ್ಲಣ್ಣ

ಭೂಮಿ ಮೇಲೆ ಬಾಡಿಗೆದಾರ ನೀನಣ್ಣ
ಅವನೇಳಿದಾಗ ಜಾಗ ಖಾಲಿ ಮಾಡಣ್ಣ
ಭೂಮಿ ಮೇಲೆ ಬಾಡಿಗೆದಾರ ನೀನಣ್ಣ
ಅವನೇಳಿದಾಗ ಜಾಗ ಖಾಲಿ ಮಾಡಣ್ಣ

ಪ್ರೀತಿಯಿಂದ ಜಗವ ಗೆಲ್ಲು ಕಷ್ಟ ಅಲ್ಲಣ್ಣ
ಪ್ರೀತಿಯಿಂದ ಜಗವ ಗೆಲ್ಲು ಕಷ್ಟ ಅಲ್ಲಣ್ಣ
ಇಲ್ಲಿ ಮೋಸದಿಂದ ಏನೇ ಮಾಡು ಉಳಿಯೋದಿಲ್ಲಣ್ಣ
ಆಸ್ತಿಗಾಗಿ ಪ್ರೀತಿಯ ಕೊಲ್ಲ ಬೇಡಣ್ಣ
ಆಸ್ತಿಗಾಗಿ ಪ್ರೀತಿಯ ಕೊಲ್ಲ ಬೇಡಣ್ಣ
ಪ್ರೀತಿಗಿಂತ ಮಿಗಿಲಾದ ಆಸ್ತಿ ಇಲ್ಲಣ್ಣ

ಭೂಮಿ ಮೇಲೆ ಬಾಡಿಗೆದಾರ ನೀನಣ್ಣ
ಅವನೇಳಿದಾಗ ಜಾಗ ಖಾಲಿ ಮಾಡಣ್ಣ
ಭೂಮಿ ಮೇಲೆ ಬಾಡಿಗೆದಾರ ನೀನಣ್ಣ
ಅವನೇಳಿದಾಗ ಜಾಗ ಖಾಲಿ ಮಾಡಣ್ಣ

ಆಸೆಯೇ ದುಃಖದ ಮೂಲ ಕಣಣ್ಣ
ಆಸೆಯೇ ದುಃಖದ ಮೂಲ ಕಣಣ್ಣ
ಬುದ್ದ ಹೇಳಿದ ಮಾತು ಸತ್ಯ ಕಣಣ್ಣ
ಸೂತ್ರದಾರ ಮೇಲುಂಟು ಸತ್ಯ ಹೇಳಣ್ಣ
ಸೂತ್ರದಾರ ಮೇಲುಂಟು ಸತ್ಯ ಹೇಳಣ್ಣ
ಸತ್ಯ ಹೇಳೋ ಮನುಜನಿಗೆ ಸಾವೆ ಇಲ್ಲಣ್ಣ

ಭೂಮಿ ಮೇಲೆ ಬಾಡಿಗೆದಾರ ನೀನಣ್ಣ
ಅವನೇಳಿದಾಗ ಜಾಗ ಖಾಲಿ ಮಾಡಣ್ಣ
ಭೂಮಿ ಮೇಲೆ ಬಾಡಿಗೆದಾರ ನೀನಣ್ಣ
ಅವನೇಳಿದಾಗ ಜಾಗ ಖಾಲಿ ಮಾಡಣ್ಣ
ಬಾಡಿಗೆ ಮನೆಗಾಗಿ ಇಲ್ಲಿ ಜಗಳ ಬೇಡಣ್ಣ
ನಿನ್ನ ಸ್ವಂತ ಮನೆ ಮೇಲೆ ಇದೆ ಮರೆತರೆ ಹೆಂಗಣ್ಣ
ನಿನ್ನ ಸ್ವಂತ ಮನೆ ಮೇಲೆ ಇದೆ ಮರೆತರೆ ಹೆಂಗಣ್ಣ
ನಿನ್ನ ಸ್ವಂತ ಮನೆ ಮೇಲೆ ಇದೆ ಮರೆತರೆ ಹೆಂಗಣ್ಣ

No comments:

Post a Comment

Write Something about PK Music

new1

new2

new5