Duddu Kottare
Bekaaddu Sigutaiti Song Lyrics from Myalondu Thoristhi Kelagondu Ittirthi Kannada
Album, Duddu Kottare Bekaaddu Sigutaiti Song was Released on Lahari Music Youtube
Channel.
Myalondu
Thoristhi Kelagondu Ittirthi Kannada Album
Released in 2000, Album has 9 Songs, Sung by Gururaj Hosakote, Mahalinga Golabhavi, Vidhya Rai. Music Director is Ismail Gonal.
Duddu Kottare Bekaaddu Sigutaiti Kannada Song Lyrics by Gururaja Hosakote, and the Song Composed by Ismail Gonal. Song Sung by Gururaja Hosakote.
About the Song
Album |
Myalondu Thoristhi Kelagondu Ittirthi |
Song |
Duddu Kottare Bekaaddu Sigutaiti |
Music |
Ismail Gonal |
Lyrics |
Gururaja Hosakote |
Singer |
Gururaja Hosakote |
Music
Label |
Lahari Music |
ಹಡೆದ ತಾಯಿಯನು ಕಳಕೊಂಡ ಮ್ಯಾಲ ಮತ್ತೆ ಸಿಗುವಳೇನೊ
ತಮ್ಮ ಮರಳಿ ಬರುವಳೇನೋ, ತಮ್ಮ ಮರಳಿ ಬರುವಳೇನೋ
ದುಡ್ಡು ಕೊಟ್ಟರೆ ಬೇಕಾದ್ದು ಸಿಗತೈತಿ ಈ ಜಗದಲಿ ಕಾಣೋ
ಹಡೆದ ತಾಯಿಯನು ಕಳಕೊಂಡ ಮ್ಯಾಲ ಮತ್ತೆ ಸಿಗುವಳೇನೊ
ತಮ್ಮ ಮರಳಿ ಬರುವಳೇನೋ, ತಮ್ಮ ಮರಳಿ ಬರುವಳೇನೋ
ಒಂಬತ್ತು ತಿಂಗಳ ಸಂಕಟ ನೀಡಿ ಹೊಟ್ಯಾಗ ಬೆಳೆದ್ಯಲ್ಲೋ
ಹುಟ್ಟಿ ಬರುವ ಮುನ್ನ ಜೀವಕ್ಕ ಎಷ್ಟೋ ಕಷ್ಟ ಕೊಟ್ಟಿಯಲ್ಲೋ
ಒಂಬತ್ತು ತಿಂಗಳ ಸಂಕಟ ನೀಡಿ ಹೊಟ್ಯಾಗ ಬೆಳೆದ್ಯಲ್ಲೋ
ಹುಟ್ಟಿ ಬರುವ ಮುನ್ನ ಜೀವಕ್ಕ ಎಷ್ಟೋ ಕಷ್ಟ ಕೊಟ್ಟಿಯಲ್ಲೋ
ಬರುವ ಕಷ್ಟಗಳ ಸಹಿಸಿದ ತಾಯಿ ನಿನ್ನ ನಂಬಿತಲ್ಲೋ
ಬರುವ ಕಷ್ಟಗಳ ಸಹಿಸಿದ ತಾಯಿ ನಿನ್ನ ನಂಬಿತಲ್ಲೋ
ತಾನು ಕೊರಗಿ ನಿನ್ನ ಕೋಣ ಬೆಳಸಿದಂಗ ಬೆಳೆಸಿ ಬಿಟ್ಟಳಲ್ಲೋ
ಒಬ್ಬ ಮಗ ನೀ ಆಸರಾದಿ ಅಂತ ತಾಯಿ ತಿಳದಿತಲ್ಲೋ
ಜೀವ ಇಟ್ಟಿತ್ತು ನಿನ ಮ್ಯಾಲೋ
ದುಡ್ಡು ಕೊಟ್ಟರೆ ಬೇಕಾದ್ದು ಸಿಗತೈತಿ ಈ ಜಗದಲಿ ಕಾಣೋ
ಹಡೆದ ತಾಯಿಯನು ಕಳಕೊಂಡ ಮ್ಯಾಲ ಮತ್ತೆ ಸಿಗುವಳೇನೊ
ತಮ್ಮ ಮರಳಿ ಬರುವಳೇನೋ, ತಮ್ಮ ಮರಳಿ ಬರುವಳೇನೋ
ಕೂಲಿ ನಾಲಿ ಮಾಡಿ ಶಾಲೆ ಕಳಿಸಿದಳು ಜಾಣನಾಗಲೆಂತ
ಚಿನ್ನದಂತ ಒಂದು ಹೆಣ್ಣು ನೋಡ್ಯಾಳು ನಿನ್ನ ಮದುವಿಗಂತ
ಕೂಲಿ ನಾಲಿ ಮಾಡಿ ಶಾಲೆ ಕಳಿಸಿದಳು ಜಾಣನಾಗಲೆಂತ
ಚಿನ್ನದಂತ ಒಂದು ಹೆಣ್ಣು ನೋಡ್ಯಾಳು ನಿನ್ನ ಮದುವಿಗಂತ
ಸಾಲಶೂಲ ಮಾಡಿ ಮದುವಿ ಮಾಡಿದಳು ಬಳ್ಳಿ ಹಬ್ಬಲೆಂತ
ಸಾಲಶೂಲ ಮಾಡಿ ಮದುವಿ ಮಾಡಿದಳು ಬಳ್ಳಿ ಹಬ್ಬಲೆಂತ
ಮೊಮ್ಮಕ್ಕಳನು ಎತ್ತಿ ಆಡಿಸುವ ಚಿಂತಿಯೊಳಗ ಇತ್ತ
ಮುಪ್ಪಿನ ತಾಯಿ ಏನೇನೋ ಕನಸ ಕ ಟ್ಟುಕೊಂಡು ಕುಂತಿತ್ತ
ಕನಸು ಕನಸಾಗೆ ಉಳಿತಾ
ದುಡ್ಡು ಕೊಟ್ಟರೆ ಬೇಕಾದ್ದು ಸಿಗತೈತಿ ಈ ಜಗದಲಿ ಕಾಣೋ
ಹಡೆದ ತಾಯಿಯನು ಕಳಕೊಂಡ ಮ್ಯಾಲ ಮತ್ತೆ ಸಿಗುವಳೇನೊ
ತಮ್ಮ ಮರಳಿ ಬರುವಳೇನೋ, ತಮ್ಮ ಮರಳಿ ಬರುವಳೇನೋ
ಮಗಳಿಗಿಂತ ಹೆಚ್ಚಿನ ಪ್ರೀತಿಲಿ ಸೊಸಿನ ಕಂಡಳಲ್ಲಾ
ಮೆಚ್ಚಿನ ಸೊಸೆಯು ತಾಯಿಯ ಹಂಗ ನೋಡಿಕೊಳ್ಳಲಿಲ್ಲ
ಮಗಳಿಗಿಂತ ಹೆಚ್ಚಿನ ಪ್ರೀತಿಲಿ ಸೊಸಿನ ಕಂಡಳಲ್ಲಾ
ಮೆಚ್ಚಿನ ಸೊಸೆಯು ತಾಯಿಯ ಹಂಗ ನೋಡಿಕೊಳ್ಳಲಿಲ್ಲ
ಸೋತ ಶರೀರಕ ಸುಖವೆಂಬದು ಈ ಸೊಸಿಯು ನೀಡಲಿಲ್ಲ
ಸೋತ ಶರೀರಕ ಸುಖವೆಂಬದು ಈ ಸೊಸಿಯು ನೀಡಲಿಲ್ಲ
ಉಂಡು ಬಿಟ್ಟಿರುವ ಎಂಜಲ ಕೂಳ ತಾಯಿಗಾಕ್ಯಳಲ್ಲ
ಮಗನ ಮೋಹಕ ಹಳಸಿದ ಕೂಳ ತಾಯಿ ತಿಂದಳಲ್ಲ
ಅದನು ಯಾರಿಗೇಳಲಿಲ್ಲ
ದುಡ್ಡು ಕೊಟ್ಟರೆ ಬೇಕಾದ್ದು ಸಿಗತೈತಿ ಈ ಜಗದಲಿ ಕಾಣೋ
ಹಡೆದ ತಾಯಿಯನು ಕಳಕೊಂಡ ಮ್ಯಾಲ ಮತ್ತೆ ಸಿಗುವಳೇನೊ
ತಮ್ಮ ಮರಳಿ ಬರುವಳೇನೋ, ತಮ್ಮ ಮರಳಿ ಬರುವಳೇನೋ
ಉಪವಾಸ ವನವಾಸ ಹಣ್ಣಾದ ಮುದುಕಿ ಎಷ್ಟಂತ ಇರತಾಳೊ
ಹಸಿವು ತಾಳದೆ ಮತ್ತೊಬ್ಬರಲ್ಲಿ ಬೇಡಿ ತಿನ್ನುತಾಳೊ
ಉಪವಾಸ ವನವಾಸ ಹಣ್ಣಾದ ಮುದುಕಿ ಎಷ್ಟಂತ ಇರತಾಳೊ
ಹಸಿವು ತಾಳದೆ ಮತ್ತೊಬ್ಬರಲ್ಲಿ ಬೇಡಿ ತಿನ್ನುತಾಳೊ
ಇಷ್ಟೇ ಇದ್ದದ್ದು ಸೊಕ್ಕಿನ ಸೊಸೆಯು ದೊಡ್ಡದು ಮಾಡ್ಯಾಳು
ಇಷ್ಟೇ ಇದ್ದದ್ದು ಸೊಕ್ಕಿನ ಸೊಸೆಯು ದೊಡ್ಡದು ಮಾಡ್ಯಾಳು
ಅವಮಾನ ನಮಗಂತ ತನ್ನ ಮನೆಯಿಂದ ಹೊರಗೆ ಹಾಕ್ಯಾಳು
ಮಗನಿಗೇಳಿದರ ನೋವು ಆ ಜೀವಕ ಎಂದು ತಿಳಿದಾಳು
ತಾಯಿ ನಿನ್ನಿಂದ ದೂರಾಳು
ದುಡ್ಡು ಕೊಟ್ಟರೆ ಬೇಕಾದ್ದು ಸಿಗತೈತಿ ಈ ಜಗದಲಿ ಕಾಣೋ
ಹಡೆದ ತಾಯಿಯನು ಕಳಕೊಂಡ ಮ್ಯಾಲ ಮತ್ತೆ ಸಿಗುವಳೇನೊ
ತಮ್ಮ ಮರಳಿ ಬರುವಳೇನೋ, ತಮ್ಮ ಮರಳಿ ಬರುವಳೇನೋ
ಅಲ್ಲಿ ಇಲ್ಲಿ ತಾ ಭಿಕ್ಷೆಯ ಬೇಡಿ ದಿನಗಳ ಕಳೀತಾಳು
ಮಗ ಇದ್ದರು ಹಡೆದ ತಾಯಿ ಪರದೇಶಿ ಆಗಿಹಳು
ಅಲ್ಲಿ ಇಲ್ಲಿ ತಾ ಭಿಕ್ಷೆಯ ಬೇಡಿ ದಿನಗಳ ಕಳೀತಾಳು
ಬಂದ ನೋವುಗಳ ಸಹಿಸುತ ಮಗನ ಚಿಂತೆ ಮಾಡುತಾಳು
ಬಂದ ನೋವುಗಳ ಸಹಿಸುತ ಮಗನ ಚಿಂತೆ ಮಾಡುತಾಳು
ಕಣ್ಣು ಕಾಣಲಿಲ್ಲ ಕಿವಿಯು ಕೇಳಲಿಲ್ಲ ಎಷ್ಟು ದಿನ ಇರೂತಾಳು
ನನ್ನ ಮಗನಿಗೆ ಚನ್ನಾಗಿ ಇಡು ಅಂತ ಮಹಾಂತನ ಬೇಡ್ಯಾಳು
ತಾಯಿ ಬೀದ್ಯಾಗ ಸತ್ತಾಳು
ದುಡ್ಡು ಕೊಟ್ಟರೆ ಬೇಕಾದ್ದು ಸಿಗತೈತಿ ಈ ಜಗದಲಿ ಕಾಣೋ
ಹಡೆದ ತಾಯಿಯನು ಕಳಕೊಂಡ ಮ್ಯಾಲ ಮತ್ತೆ ಸಿಗುವಳೇನೊ
ತಮ್ಮ ಮರಳಿ ಬರುವಳೇನೋ, ತಮ್ಮ ಮರಳಿ ಬರುವಳೇನೋ
ತಮ್ಮ ಮರಳಿ ಬರುವಳೇನೋ ತಮ್ಮ ಮರಳಿ ಬರುವಳೇನೋ
------------------------------------------------------------Myalondu Thoristhi Kelagondu Ittirthi Album Songs Lyrics
- Duddu Kottara Bekaddu Song
- Myalondu Thorusti Song
- Ena Sullalla Song
- Maduveyaagi Song
- Sigalaaradella Sigalebeku
- Thavarige Hogi
- Baludivasa Kaledaavu
- Aasheka Hacchi
- Maduve Song
Like My FaceBook Page : PK Music Lyrics
If you want any Kannada
Sing along Karaoke : PK
Music Karaoke World
If you find any mistakes
in this Page of Lyrics feel free to
correct it and Mention in the Comment Box.
No comments:
Post a Comment
Write Something about PK Music