Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

Eega thane jaariyagide Lyrics Ananthu v/s Nusrath Movie Lyrics in kannada



ಚಿತ್ರ: ಅನಂತು v/s ನುಸ್ರತ್

ಈಗ ತಾನೇ ಜಾರಿಯಾಗಿದೆ ಹೊಸ
ಮುದ್ದಾದಾ.. ಕಾನೂನು..
ವಿಚಾರಣೆಯ ಹಂತ ತಲುಪಲು ಸದಾ
ಆರೋಪಿ.. ನಾನಿನ್ನು..
ಅರಿವಿಲ್ಲದೆ ಈಗ ಪ್ರೀತಿಯಾಗಿದೆ
ವಿಚಾರಿಸಿ ನೀ ಮಾತನಾಡಿಸು
ಪೂರ್ವಾಪರ ನನ್ನ ವಿಷಯ ಕೇಳದೆ
ಪ್ರತಿ ದಿನ ನೀನೇ ವಾದ ಮಂಡಿಸು
ಈಗ ತಾನೇ ಜಾರಿಯಾಗಿದೆ ಹೊಸ
ನವಿರಾದ..  ಕಾನೂನು..
ವಿಚಾರಣೆಯ ಹಂತ ತಲುಪಲು ಸದಾ
ಆರೋಪಿ.. ನಾನಿನ್ನು..

ಮುಂದೂಡಲಾಗೋದಿಲ್ಲಾ ಗಳಿಗೆ
ಕರಾರು ಮಾಡಿಕೊಡು ಬೆಳೆಗೆ
ನಾನಾಗೇ ಕಾದು ಕುಳಿತೆ ನಿನ ದಾರಿ
ಅದಕಾಗಿ ಆಗು ನೀನು ಆಭಾರಿ
ತೆರೆದಿದೆ ಮನ ಮಾಡು ದಾಖಲಾತಿಯ
ಒಂದೇ ಸಲ ನೀಡು ಮೀಸಲಾತಿಯ
ತಿಳಿಯಿತೆ ಇದು ನಮ್ಮ ಪ್ರೇಮ ಪ್ರಕರಣ
ಈಗ ಹೇಳು ನೀ ಯಾರು ಕಾರಣ

ಈಗ ತಾನೇ ಜಾರಿಯಾಗಿದೆ ಹೊಸ
ನವಿರಾದ.. ಕಾನೂನು..
ವಿಚಾರಣೆಯ ಹಂತ ತಲುಪಲು ಸದಾ
ಆರೋಪಿ.. ನಾನಿನ್ನು..

ಒಂದೊಂದು ಮಾತಿನಲ್ಲೂ ಇದೆ ಬೆಸುಗೆ
ನೀ ತಾನೇ ನೀಡಬೇಕು ಸಲಿಗೆ
ನಿನ್ನನ್ನು ಕಾಣಲೆಂದು ಇದೆ ದಾರಿ
ಜಾಮೀನು ಕೇಳಿ ಬರುವೆ ಪ್ರತಿ ಬಾರಿ
ಬಯಸಿದೆ ಮನ ಒಮ್ಮೆ ಹಾಜರಾತಿಯ
ಆದರ ಕೊಡು ನನಗೂ ಮೀಸಲಾತಿಯ
ಗಮನಿಸು ನೀ ನನ್ನ ಸಣ್ಣ ಮನವಿಯ
ಕರುಣಿಸಿ ಕೊಡು ಒಲವ ಪ್ರೇಮ ಪದವಿಯ

ಈಗ ತಾನೇ ಜಾರಿಯಾಗಿದೆ ಹೊಸ
ಮುದ್ದಾದಾ.. ಕಾನೂನು..
ವಿಚಾರಣೆಯ ಹಂತ ತಲುಪಲು ಸದಾ
ಆರೋಪಿ.. ನಾನಿನ್ನು..

No comments:

Post a Comment

Write Something about PK Music

new1

new2

new5