Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

Ivale Ivale Ivale nanna kaavyada sele Lyrics - C Ashwath song Lyrics - ಇವಳೆ ಇವಳೆ ಇವಳೆ ನನ್ನ ಕಾವ್ಯದ ಸೆಲೆ

Song: Ivale Ivale Ivale nanna kaavyada sele
Music/Singer: C Ashwath

ಇವಳೆ ಇವಳೆ ಇವಳೆ ನನ್ನ ಕಾವ್ಯದ ಸೆಲೆ
ಇವಳೊಬ್ಬಳೆ ನನ್ನ ಜೀವದ ನೆಲೆ
ಇವಳೆ ಇವಳೆ ಇವಳೆ ನನ್ನ ಕಾವ್ಯದ ಸೆಲೆ
ಇವಳೊಬ್ಬಳೆ ನನ್ನ ಜೀವದ ನೆಲೆ
ಇವಳೆ ಇವಳೆ ಇವಳೆ ನನ್ನ ಕಾವ್ಯದ ಸೆಲೆ

ಇವಳೆ ಭಾವಗಳ ಹಾವಾಡಿಸುವ ಬಾಲೆ
ಇವಳೆ ಕಲ್ಪನೆಯ ಹರಿದಾಡಿಸುವ ನಾಲೆ
ಇವಳೆ ಭಾವಗಳ ಹಾವಾಡಿಸುವ ಬಾಲೆ
ಇವಳೆ ಕಲ್ಪನೆಯ ಹರಿದಾಡಿಸುವ ನಾಲೆ
ಇವಳ ಹೆಗಲೆ ನನ್ನ ಕನಸುಗಳ ಜಗಲಿ
ಇವಳ ಹೆಗಲೆ ನನ್ನ ಕನಸುಗಳ ಜಗಲಿ
ಇವಳ ಕೆನ್ನೆಯ ಗುಳಿಯೇ ಕಾವ್ಯದ ಸುಳಿ, ಕಾವ್ಯದ ಸುಳಿ

ಇವಳೆ ಇವಳೆ ಇವಳೆ ನನ್ನ ಕಾವ್ಯದ ಸೆಲೆ
ಇವಳೊಬ್ಬಳೆ ನನ್ನ ಜೀವದ ನೆಲೆ
ಇವಳೆ ಇವಳೆ ಇವಳೆ ನನ್ನ ಕಾವ್ಯದ ಸೆಲೆ

ಇವಳ ನಡೆಯೆ ನನ್ನ ಕವನಗಳ ಚಂದ
ಇವಳ ಆಲಿಂಗನ ಕವನಗಳ ಬಂಧ
ಇವಳ ನಡೆಯೆ ನನ್ನ ಕವನಗಳ ಚಂದ
ಇವಳ ಆಲಿಂಗನ ಕವನಗಳ ಬಂಧ
ಧಮನಿ ಧಮನಿಗಳಲೀ ಇವಳ ಚೈತನ್ಯ
ಧಮನಿ ಧಮನಿಗಳಲೀ ಇವಳ ಚೈತನ್ಯ
ಕಬ್ಬಿಣವು ಕಾಂತವಾಯ್ತು ಕಾವ್ಯ ಧನ್ಯ, ಕಾವ್ಯ ಧನ್ಯ

ಇವಳೆ ಇವಳೆ ಇವಳೆ ನನ್ನ ಕಾವ್ಯದ ಸೆಲೆ
ಇವಳೊಬ್ಬಳೆ ನನ್ನ ಜೀವದ ನೆಲೆ
ಇವಳೆ ಇವಳೆ ಇವಳೆ ನನ್ನ ಕಾವ್ಯದ ಸೆಲೆ

ಇವಳ ಕಟಿಯೆ ಕಾವ್ಯಕ್ಕೆ ಗಂಗಾತಟಿ
ರಸಋಷಿಗೆ ಅಲ್ಲಿಹುದು ಕಿರುಪರ್ಣಕುಟಿ
ಇವಳ ಕಟಿಯೆ ಕಾವ್ಯಕ್ಕೆ ಗಂಗಾತಟಿ
ರಸಋಷಿಗೆ ಅಲ್ಲಿಹುದು ಕಿರುಪರ್ಣಕುಟಿ
ಇವಳ ಸಂಗವೆ ನನಗೆ ಸಂಗಯ್ಯನೊಲುಮೆ
ಇವಳ ಸಂಗವೆ ನನಗೆ ಸಂಗಯ್ಯನೊಲುಮೆ
ಅಮರಾವತಿಯು ಕೂಡ ಇದಕಿಂತ ಕಡಿಮೆ, ಇದಕಿಂತ ಕಡಿಮೆ

ಇವಳೆ ಇವಳೆ ಇವಳೆ ನನ್ನ ಕಾವ್ಯದ ಸೆಲೆ
ಇವಳೊಬ್ಬಳೆ ನನ್ನ ಜೀವದ ನೆಲೆ
ಇವಳೆ ಇವಳೆ ಇವಳೆ ನನ್ನ ಕಾವ್ಯದ ಸೆಲೆ
ಇವಳೊಬ್ಬಳೆ ನನ್ನ ಜೀವದ ನೆಲೆ

No comments:

Post a Comment

Write Something about PK Music

new1

new2

new5