Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

Jaali baarinalli kootu Lyrics - C Ashwath songs Lyrics - ಜಾಲಿ ಬಾರಿನಲ್ಲಿ ಕೂತು ಪೋಲಿ ಗೆಳೆಯರು



ಜಾಲಿ ಬಾರಿನಲ್ಲಿ ಕೂತು ಪೋಲಿ ಗೆಳೆಯರು
ಗೋಪಿಯನ್ನು ಪಾಪ ಗೇಲಿ ಮಾಡುತಿದ್ದರು
ಜಾಲಿ ಬಾರಿನಲ್ಲಿ ಕೂತು ಪೋಲಿ ಗೆಳೆಯರು
ಗೋಪಿಯನ್ನು ಪಾಪ ಗೇಲಿ ಮಾಡುತಿದ್ದರು
ಗುಂಡು ಹಾಕೊ ಗೋಪಿ ನಂಗ್ ಸಾಕಪ್ಪ ಕಾಫಿ
ಚಿಕ್ಕನ್  ಬಿರಿಯಾನಿ ಏಕ್ ಲೋಟ ತಂಡ ಪಾನಿ
ಜಾಲಿ ಬಾರಿನಲ್ಲಿ ಕೂತು ಪೋಲಿ ಗೆಳೆಯರು
ಗೋಪಿಯನ್ನು ಪಾಪ ಗೇಲಿ ಮಾಡುತಿದ್ದರು

ಜಾಸ್ ಗಾನದ ಹೊಳೆಗೆ ತೇಲಿ ಬಂದಳು ಕ್ಯಾಬರಿ ಕ್ಯಾಬರಿ ಕ್ಯಾಬರಿ
ಫಾಂಗೊ ತಾನದ ಅಲೆಗೆ ತೂಗಿ ಅರೆ ದಿಗಂಬರಿ ದಿಗಂಬರಿ ದಿಗಂಬರಿ
ಜಾಸ್ ಗಾನದ ಹೊಳೆಗೆ ತೇಲಿ ಬಂದಳು ಕ್ಯಾಬರಿ
ಫಾಂಗೊ ತಾನದ ಅಲೆಗೆ ತೂಗಿ ಅರೆ ದಿಗಂಬರಿ
ಗಾಂಡಲೀನಳು ಮಧುಭಾಂಡದಂತವಳು
ಗಾಂಡಲೀನಳು ಮಧುಭಾಂಡದಂತವಳು
ಬಿಡ್ಡಕಣ್ಣ ಬಾಯಿ ಗೋಪಿ ಗುಮ್ಮಾದನು
ಅವಳು ಜಗಿಯುತಿದ್ದ ಚೂಯಿಂಗ್ ಗಮ್ ಆದನು
ಜಾಲಿ ಬಾರಿನಲ್ಲಿ ಕೂತು ಪೋಲಿ ಗೆಳೆಯರು
ಗೋಪಿಯನ್ನು ಪಾಪ ಗೇಲಿ ಮಾಡುತಿದ್ದರು

ಗುಂಡು ಗುಂಡು ಗಾಂಡಲೀನ ಕ್ಯಾಬರಿಸುತ್ತ
ತನ್ನ ಅಂಗೊಪಾಂಗಗಳ ತಾನೆ ನೇವರಿಸುತ್ತ
ಗುಂಡು ಗುಂಡು ಗಾಂಡಲೀನ ಕ್ಯಾಬರಿಸುತ್ತ
ತನ್ನ ಅಂಗೊಪಾಂಗಗಳ ತಾನೆ ನೇವರಿಸುತ್ತ
ನಿಧ ನಿಧಾನವಾಗಿ ವಿಧ ವಿಧಾನವಾಗಿ
ನಿಧ ನಿಧಾನವಾಗಿ ವಿಧ ವಿಧಾನವಾಗಿ
ಬತ್ತಲಾಗುತಿರಲು ಗೋಪಿ ಕಲ್ಲಾದನು
ರಂಭೆಯನ್ನು ಕಂಡ ಋಷಿಯ ಸ್ಟಿಲ್ ಆದನು

ಜಾಲಿ ಬಾರಿನಲ್ಲಿ ಕೂತು ಪೋಲಿ ಗೆಳೆಯರು
ಗೋಪಿಯನ್ನು ಪಾಪ ಗೇಲಿ ಮಾಡುತಿದ್ದರು

ಗಾಂಡಲೀನ ಗೋಪಿಯ ಬಳಿ ತೊನೆದು ಬಂದಳು
ಅವನ ಹಂಡೆ ಹೊಟ್ಟೆಯನ್ನು ಬಳಸಿ ನಿಂದಳು
ಗಾಂಡಲೀನ ಗೋಪಿಯ ಬಳಿ ತೊನೆದು ಬಂದಳು
ಅವನ ಹಂಡೆ ಹೊಟ್ಟೆಯನ್ನು ಬಳಸಿ ನಿಂದಳು
ಚೊಂಬು ಕೆನ್ನೆ ಮೇಲೆ ತುಟಿ ಬಿಂಬಿಸಿದಳು ಬಾಲೆ
ಚೊಂಬು ಕೆನ್ನೆ ಮೇಲೆ ತುಟಿ ಬಿಂಬಿಸಿದಳು ಬಾಲೆ
ಬುರ ಬುರ ಬುರ ಊದಿ ಗೋಪಿ ಬೋಂಡವಾದನು
ಮಾದ್ರಿ ಅಪ್ಪಿದಾಗಿನಂತ ಪಾಂಡುವಾದನು

ಜಾಲಿ ಬಾರಿನಲ್ಲಿ ಕೂತು ಪೋಲಿ ಗೆಳೆಯರು
ಗೋಪಿಯನ್ನು ಪಾಪ ಗೇಲಿ ಮಾಡುತಿದ್ದರು

ಕಟ್ಟಕಡೆಯ ತುಟ್ಟತುದಿಯ ಶಿಖರ ನೋಟದಲ್ಲಿ
ನಡುವಿನ ಗಡಿ ಮೀರಿ ಮಾನ ಜಾರುವಷ್ಟರಲ್ಲಿ
ಕಟ್ಟಕಡೆಯ ತುಟ್ಟತುದಿಯ ಶಿಖರ ನೋಟದಲ್ಲಿ
ನಡುವಿನ ಗಡಿ ಮೀರಿ ಮಾನ ಜಾರುವಷ್ಟರಲ್ಲಿ
ಹಾ ವೆಂಕಟಸುಬ್ಬಿ ಹೆಂಡ್ತಿ ನೆನ್ಪು ದಬ್ಬಿ
ಹಾ ವೆಂಕಟಸುಬ್ಬಿ ಹೆಂಡ್ತಿ ನೆನ್ಪು ದಬ್ಬಿ
ಗಾಂಡಲೀನಳ ಪಾದಪದ್ಮಕಡ್ಡ ಬಿದ್ದನು
ಪರನಾರಿ ಸಹೋದರನು ಕಾಮ ಗೆದ್ದನು

No comments:

Post a Comment

Write Something about PK Music

new1

new2

new5