Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

Male ninthu Hoda mele Lyrics in kannada | ಮಳೆ ನಿಂತು ಹೋದಮೇಲೆ ಹನಿಯೊಂದು ಮೂಡಿದೆ


ಚಿತ್ರ : ಮಿಲನ
ಮಳೆ ನಿಂತು ಹೋದಮೇಲೆ ಹನಿಯೊಂದು ಮೂಡಿದೆ
ಮಾತೆಲ್ಲ ಮುಗಿದ ಮೇಲೆ ಧ್ವನಿಯೊಂದು ಕಾಡಿದೆ
ಹೇಳುವುದು ಏನೋ ಉಳಿದು ಹೋಗಿದೆ 
ಹೇಳಲಿ ಹೇಗೆ ತಿಳಿಯದಾಗಿದೆ.......
ಮಳೆ ನಿಂತು ಹೋದಮೇಲೆ ಹನಿಯೊಂದು ಮೂಡಿದೆ
ಮಾತೆಲ್ಲ ಮುಗಿದ ಮೇಲೆ ಧ್ವನಿಯೊಂದು ಕಾಡಿದೆ
♬♬♬♬♬♬♬♬♬♬♬♬♬♬♬♬♬♬♬♬♬♬♬♬
ನೋವಿನಲ್ಲಿ ಜೀವ ಜೀವ ಅರಿತ ನಂತರ 
ನಲಿವು ಬೇರೆ ಏನಿದೆ ಏಕೀ ಅಂತರ 
ನಿನ್ನ ಹಾಡಿನಲ್ಲಿ ಇಂದು ಬೆರೆವ ಕಾತರ 
ಒಂದೇ ಸಾರಿ ನೀ ಕೇಳೆಯಾ  ಸ್ವರ 
ಮನಸಲ್ಲಿ ಚೂರು ಜಾಗ ಬೇಕಿದೆ
ಕೇಳಲಿ ಹೇಗೆ ತಿಳಿಯದಾಗಿದೆ.......
ಮಳೆ ನಿಂತು ಹೋದಮೇಲೆ ಹನಿಯೊಂದು ಮೂಡಿದೆ
ಮಾತೆಲ್ಲ ಮುಗಿದ ಮೇಲೆ ಧ್ವನಿಯೊಂದು ಕಾಡಿದೆ
♬♬♬♬♬♬♬♬♬♬♬♬♬♬♬♬♬♬♬♬♬♬♬♬
.... .... ... .. ಆಆಆ....
    ಆಆಆಆಆಆ.......
ಕಣ್ಣು ತೆರೆದು ಕಾಣುವ ಕನಸೇ ಜೀವನ
ಸಣ್ಣ ಹಠವ ಮಾಡಿದೆ ಹೃದಯ  ದಿನ 
ಎದೆಯ ದೂರವಾಣಿಯ ಕರೆಯ ರಿಂಗಣ
ಕೇಳು ಜೀವವೇ ಏತಕೀ ಕಂಪನ 
ಹೃದಯವು ಇಲ್ಲಿ ಕಳೆದುಹೋಗಿದೆ 
ಹುಡುಕಲೇ ಬೇಕೆ ತಿಳಿಯದಾಗಿದೆ.......

ಮಳೆ ನಿಂತು ಹೋದಮೇಲೆ ಹನಿಯೊಂದು ಮೂಡಿದೆ
ಮಾತೆಲ್ಲ ಮುಗಿದ ಮೇಲೆ ಧ್ವನಿಯೊಂದು ಕಾಡಿದೆ
ಹೇಳುವುದು ಏನೋ ಉಳಿದು ಹೋಗಿದೆ 
ಹೇಳಲಿ ಹೇಗೆ ತಿಳಿಯದಾಗಿದೆ.......

No comments:

Post a Comment

Write Something about PK Music

new1

new2

new5