Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

Yaaru yaaru Yaaru Yaaru Hatavaadi Lyrics in Kannada ಯಾರು ಯಾರು ಯಾರು ಯಾರು



ಚಿತ್ರ : ಹಠವಾದಿ  

ಯಾರು  ಯಾರು  ಯಾರು  ಯಾರು ಯಾರಿಗಾಗಿ  ಇಲ್ಲ  ಯಾರು
ನೂರು  ನೂರು  ನೂರು  ನೂರು ಬದುಕೋ  ದಾರಿ  ನೂರು  ನೂರು 
ಯಾರು  ಯಾರು  ಯಾರು  ಯಾರು ಯಾರಿಗಾಗಿ  ಇಲ್ಲ  ಯಾರು
ನೂರು  ನೂರು  ನೂರು  ನೂರು ಬದುಕೋ  ದಾರಿ  ನೂರು  ನೂರು 
ಬೆಳೆಯೋನೆಂದು  ಸೋಲೋದಿಲ್ಲ ಕಲಿತೋವ್ನೆಂದು ಬಾಗೋದಿಲ್ಲ
ತುಳಿಯೋನೆಂದು  ಉಳಿಯೋದಿಲ್ಲ ಯಾರನ್ಯಾರು  ಬೆಳೆಸೋದಿಲ್ಲ
ಎಲ್ಲ  ಗೊತ್ತು  ಅನ್ನೋರಿಲ್ಲ ಯಾರು  ಇಲ್ಲಿ  ಮೊದಲೇನಲ್ಲ
ಭೂಮಿ  ಮೇಲೆ  ದೇವರು  ಮೊದಲ ದೇವರಿಗಿಂತ  ನಾವೇ  ಮೊದಲ
ಯಾರು  ಯಾರು  ಯಾರು  ಯಾರು
ಯಾರಿಗಾಗಿ  ಯಾರು ಯಾರಿಗಿಲ್ಲ  ಯಾರು
ಗುರುವೇ  ಇಲ್ಲದೆ  ಕಲಿತೊವ್ರುಂಟು ನಂಟೇ  ಇಲ್ಲದೆ  ಬದುಕೊವ್ರುಂಟು
ಯಾರು  ಯಾರು  ಯಾರು  ಯಾರು  ಯಾರು
ಯಾರಿಗಾಗಿ  ಎಲ್ಲ  ಯಾರು  ಯಾರಿಗಾಗಿ  ಇಲ್ಲ  ಯಾರು
ಯಾರು ಯಾರು ಯಾರು ಯಾರು
ಯಾರು ಯಾರು ಯಾರು ಯಾರು
ಯಾರು  ಯಾರು  ಯಾರು  ಯಾರು ಯಾರಿಗಾಗಿ  ಇಲ್ಲ  ಯಾರು
ನೂರು  ನೂರು  ನೂರು  ನೂರು ಬದುಕೋ  ದಾರಿ  ನೂರು  ನೂರು 
ಭಾಷೆ   ಮೊದಲ  ಪ್ರಾಸ  ಮೊದಲ ದೇಶ  ಮೊದಲ  ಧ್ವೇಷ  ಮೊದಲ
ಜಾತಿ  ಮೊದಲ ನೀತಿ  ಮೊದಲ ಮೌನ  ಮೊದಲ ಮುತ್ತಿನಂಥ  ಮಾತು  ಮೊದಲ
ನಾದ  ಮೊದಲ  ಭಾವ  ಮೊದಲ ವೇದ  ಮೊದಲ ಗಾದೆ  ಮೊದಲ
ವೀಣೆ  ಮೊದಲ  ಸರಿಗಮ  ಸ್ವರ  ಮೊದಲ
ಜನನ  ಮೊದಲ  ಮರಣ  ಮೊದಲ ಮಿಡಿತ  ಮೊದಲ ತುಡಿತ  ಮೊದಲ
ತಾಯಿ  ಹಾಲ  ಹನಿಯೇ  ಮೊದಲ ಮೋಡ ಸುರಿದ ಮಳೆಯ ಮೊದಲ
ಹೂವ  ಒಡಲ  ಮಧುವೇ ಮೊದಲ ಜೇನ  ಹನಿಯ  ಸಿಹಿಯೆ  ಮೊದಲ
ಅಚ್ಚ  ಹಸಿರ  ಪೈರೆ  ಮೊದಲ ಸ್ವಚ್ಛ  ಗಾಳಿ  ಉಸಿರೇ  ಮೊದಲ
ಬೀಜನಾ ವೃಕ್ಷನಾ ಕೋಳಿನಾ ಮೊಟ್ಟೆನಾ
ನಾನಾ  ನೀನಾ ನೀನಾ  ನಾನಾ
ನಿಸಗರಿ ಸನಿರಿದ ಪದದನಿ ಪಮನಿದ ಗಮದಪ  ರಿಗಮಪ ಸರಿಮಗ ನಿಸಗರಿ
ಯಾರು ಯಾರು ಯಾರು ಯಾರು ಯಾರು ಯಾರು
ಯಾರು  ಯಾರು  ಯಾರು  ಯಾರು ಯಾರಿಗೆ  ಯಾರು  ಅಲ್ಲ  ಸೂರು
ನೂರು  ನೂರು  ನೂರು  ನೂರು ಬುದ್ಧಿ  ಹೇಳೋ  ಮಂದಿ ನೂರು
ಸಾಧನೆ  ಇಲ್ಲದೆ  ಗೆಲುವೆ  ಇಲ್ಲ ಸಾಧಿಸಿದವನಿಗೆ  ಸಾವೇ  ಇಲ್ಲ
ಸಾಗರ  ವಿದ್ಯೆಗೆ  ಕೊನೆಯೇ ಇಲ್ಲ ಸಾಧಕರನ್ನು  ಮರೆಯೋದಿಲ್ಲ
ಕನಸ  ಕಣೋ  ಕಣ್ಣಿನಲ್ಲಿ ಶ್ರಮದ  ನೆರಳು  ಸುಳಿಯೋದಿಲ್ಲ
ತಿಳಿಯಬೇಕು  ಗೆಲುವ  ಗುಟ್ಟು ಗೆದ್ದರೆ  ಇಲ್ಲಿ  ಜೀವನ  ಉಂಟು
ಸೋಲು  ಗೆಲುವು  ನಲಿವು  ಉಳಿವು
ಬಾಳು  ನಿನ್ನ  ದಾರೀಲಿ ಲೋಕ  ನಿನ್ನ  ಕೈಯಲ್ಲಿ
ಸತ್ಯ  ನಿನ್ನ  ಎದುರಲ್ಲುಂಟು ಬಿಚ್ಚು  ನಿನ್ನ  ಬುದ್ಧಿ  ಗಂಟು
ನೋಡು ನೋಡು ನೋಡು ನೋಡು
ಕಣ್ಣ  ತೆರೆದು  ಜಗವ  ನೋಡು ಇದುವೇ  ನಿತ್ಯದ  ಬದುಕಿನ  ಹಾಡು
ಹಾಡು ಹಾಡು ಹಾಡು ಹಾಡು
ಹಾಡು ಹಾಡು ಹಾಡು ಹಾಡು
ಸೃಷ್ಟಿ  ಮೊದಲ  ದೃಷ್ಟಿ  ಮೊದಲ ಹೆಜ್ಜೆ  ಮೊದಲ  ಗೆಜ್ಜೆ  ಮೊದಲ
ಗೀತೆ  ಮೊದಲ  ಗಾತೆ  ಮೊದಲ ತತ್ವ  ಮೊದಲ  ತತ್ವಪದ  ಹಾಡು  ಮೊದಲ
ತಾಳ  ಮೊದಲ ಮೇಳ  ಮೊದಲ ಹಾಸ್ಯ  ಮೊದಲ  ಲಾಸ್ಯ  ಮೊದಲ
ಜಾಣ  ಮೊದಲ  ಜಾನಪದ  ಹಾಡು  ಮೊದಲ
ಕವನ  ಮೊದಲ  ಕವಿತೆ  ಮೊದಲ ಬಣ್ಣ  ಮೊದಲ  ಕುಂಚ  ಮೊದಲ
ಜೋಗಿಪದ  ಹಾಡೇ  ಮೊದಲ ಗೀಗಿಪದ ಗೀತೆ  ಮೊದಲ
ಕಂಚಿನ  ಕಂಸಾಳೆ  ಮೊದಲ ಡೊಳ್ಳಿನ  ದೊಡ್ಡಾಟ  ಮೊದಲ
ಕೋಲಿನ  ಕೋಲಾಟ  ಮೊದಲ ಬೈಲಿನ  ಬೈಲಾಟ  ಮೊದಲ
ಶ್ರದ್ಧೆನಾ  ಬುದ್ಧಿನಾ  ವಿದ್ಯೆನಾ  ಬಯಕೆ  ನಾ
ನಾನ  ನೀನಾ ನೀನಾ  ನಾನ
ನಿನಿಸಗರಿ ಸಸನಿರಿದ ಪಪದದನಿ ಪಪಮನಿದ ಗಗಮದಪ  ರಿರಿಗಮಪ ಸಸರಿಮಗ ನಿನಿಸಗರಿ
ಯಾರು ಯಾರು ಯಾರು ಯಾರು

No comments:

Post a Comment

Write Something about PK Music

new1

new2

new5