Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

Hottito Hottitu Kannadada Deepa Lyrics in Kannada - Raju ananthaswamy Songs Lyrics - ಹೊತ್ತಿತೋ ಹೊತ್ತಿತು ಕನ್ನಡದ ದೀಪ

Lyricist: Dr. Siddayya Puraanik
Music: Raju Ananthaswamy
Singer: Smt. Kasthuri Shankar

ಹೊತ್ತಿತೋ ಹೊತ್ತಿತು ಕನ್ನಡದ ದೀಪ….
ಮುಗಿಯಿತೋ ಮುಗಿಯಿತು
ಶತಮಾನಗಳ ಶಾಪ…
ಹೊತ್ತಿತೋ.. ಹೊತ್ತಿತು... ಕನ್ನಡದ ದೀಪ….
ಹೊತ್ತಿತೋ ಹೊತ್ತಿತು ಕನ್ನಡದ ದೀಪ
ಮುಗಿಯಿತೋ ಮುಗಿಯಿತು
ಶತಮಾನಗಳ ಶಾಪ…
ಹೊತ್ತಿತೋ.. ಹೊತ್ತಿತು.. ಕನ್ನಡದ ದೀಪ….

ಕಣ್ಣು ಕುಕ್ಕಿಸುವಂತೆ ದೇದೀಪ್ಯಮಾನ
ಹರ್ಷ ಉಕ್ಕಿಸುವಂತೆ ಶೋಭಾಯಮಾನ
ಕನ್ನಡದ ಮನೆಯಾಗೇ ಜ್ಯೋತಿರ್ನಿಧಾನ
ಕನ್ನಡದ ಪ್ರಾಣ….. ಕನ್ನಡದ ಮಾನ……
ಕನ್ನಡದ ಪ್ರಾಣ….. ಕನ್ನಡದ ಮಾನ……
ಹೊತ್ತಿತೋ ಹೊತ್ತಿತು ಕನ್ನಡದ ದೀಪ….
ಹೊತ್ತಿತೋ ಹೊತ್ತಿತು ಕನ್ನಡದ ದೀಪ….
ಮುಗಿಯಿತೋ ಮುಗಿಯಿತು
ಶತಮಾನಗಳ ಶಾಪ…
ಹೊತ್ತಿತೋ.. ಹೊತ್ತಿತು.. ಕನ್ನಡದ ದೀಪ….

ಉರಿವವರು ಬೇಕಿನ್ನು ಇದರೆಣ್ಣೆಯಾಗಿ
ಸುಡುವವರು ಬೇಕಿದನು ನಿಡುಬತ್ತಿಯಾಗಿ
ಧರಿಸುವವರು ಬೇಕಿದನು ಸಿರಿಹಣತೆಯಾಗಿ
ತನ್ನ ಉಸಿರಾಗಿ…. ಧರ್ಮಕ್ಕೆ ಬಾಗಿ…..
ತನ್ನ ಉಸಿರಾಗಿ…. ಧರ್ಮಕ್ಕೆ ಬಾಗಿ…..
ಹೊತ್ತಿತೋ ಹೊತ್ತಿತು ಕನ್ನಡದ ದೀಪ….
ಹೊತ್ತಿತೋ ಹೊತ್ತಿತು ಕನ್ನಡದ ದೀಪ…
ಮುಗಿಯಿತೋ ಮುಗಿಯಿತು
ಶತಮಾನಗಳ ಶಾಪ…
ಹೊತ್ತಿತೋ.. ಹೊತ್ತಿತು.. ಕನ್ನಡದ ದೀಪ….

ಚಿರಕಾಲ ಬೆಳಗಲಿ ಕನ್ನಡದ ದೀಪ
ಜನಕೆಲ್ಲ ಬೆಳಕಾಗಿ ಪುಣ್ಯ ಪ್ರದೀಪ
ಭಾರತಕೆ ಬಲವಾಗಿ ಭವ್ಯ ಪ್ರದೀಪ
ಕಳೆಯುತ್ತ ತಾಪ…. ಬೆಳೆಸುತ್ತ ಸೈಪ….
ಕಳೆಯುತ್ತ ತಾಪ…. ಬೆಳೆಸುತ್ತ ಸೈಪ….
ಹೊತ್ತಿತೋ ಹೊತ್ತಿತು ಕನ್ನಡದ ದೀಪ….
ಹೊತ್ತಿತೋ ಹೊತ್ತಿತು ಕನ್ನಡದ ದೀಪ…
ಮುಗಿಯಿತೋ ಮುಗಿಯಿತು
ಶತಮಾನಗಳ ಶಾಪ…
ಹೊತ್ತಿತೋ.. ಹೊತ್ತಿತು.. ಕನ್ನಡದ ದೀಪ….

No comments:

Post a Comment

Write Something about PK Music

new1

new2

new5