Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ಜನುಮಾನ ಕೊಟ್ಟ - Janumana Kotta Amma Thanks Appa Thanks Lyrics - ಜನುಮಾನ ಕೊಟ್ಟ ಅಮ್ಮ ಥ್ಯಾಂಕ್ಸ್ ಅಪ್ಪ ಥ್ಯಾಂಕ್ಸ್

Song: Janumana Kotta Amma Thanks Appa Thanks
Movie: Cheluveye ninna nodalu
Actor: Shiva Rajkumar

ಜನುಮಾನ ಕೊಟ್ಟ
ಅಮ್ಮ ಥ್ಯಾಂಕ್ಸ್ ಅಪ್ಪ ಥ್ಯಾಂಕ್ಸ್
ಅಕ್ಷರ ಕೊಟ್ಟ ಮೇಷ್ಟ್ರೇ ಥ್ಯಾಂಕ್ಸ್
ಮೇಡಮ್ ಥ್ಯಾಂಕ್ಸ್
ಬದುಕೋದು ಕಲಿಸೋ
ಲೋಕ ಥ್ಯಾಂಕ್ಸ್ ಬಾರಿ ಥ್ಯಾಂಕ್ಸ್
ಕೊನೆವರೆಗೂ ಕಾಯೋ
ದೇವ್ರೇ ಥ್ಯಾಂಕ್ಸ್ ತುಂಬಾ ಥ್ಯಾಂಕ್ಸ್
ಗುಡ್ ಮಾರ್ನಿಂಗ್ ಹೇಳೋ
ರವಿಮಾಮ ಥ್ಯಾಂಕ್ಸ್
ಗುಡ್ ನೈಟು ಹೇಳೋ
ಚಂದಮಾಮ ಥ್ಯಾಂಕ್ಸ್
ನಗು ನಗುತ ಬಾಳು ಅಂದ್ರು
ದೊಡ್ಡೋರು ಅವರಿಗೆ ಥ್ಯಾಂಕ್ಸ್
ಭೂಮಿ ಬಣ್ಣದ ಬುಗುರಿ
ಅಂದೋರಿಗೆ ಕೋಟಿ ಥ್ಯಾಂಕ್ಸ್
ಜನುಮಾನ ಕೊಟ್ಟ
ಅಮ್ಮ ಥ್ಯಾಂಕ್ಸ್ ಅಪ್ಪ ಥ್ಯಾಂಕ್ಸ್
ಅಕ್ಷರ ಕೊಟ್ಟ ಮೇಷ್ಟ್ರೇ ಥ್ಯಾಂಕ್ಸ್
ಮೇಡಮ್ ಥ್ಯಾಂಕ್ಸ್

ಹಣ್ಣಲ್ಲಿ ಸಿಹಿಯನ್ನ ಹೆಣ್ಣಲ್ಲಿ ಸಹನೆನ
ಪ್ರೀತ್ಸೋಕೆ ಹೃದಯಾನ
ಕೊಟ್ಟೊರಿಗೆ ಪ್ರೀತಿಯ ಥ್ಯಾಂಕ್ಸ್
ಕ್ರಿಯೆಯಿಂದ ಕರ್ಮಾನ
ಮಂತ್ರದಲಿ ಮರ್ಮಾನ
ಬದುಕೋಕೆ ಧರ್ಮಾನ
ಇಟ್ಟೋರಿಗೆ ಆತ್ಮೀಯ ಥ್ಯಾಂಕ್ಸ್
ಬಂದು ಹೋಗೋ ಬಂಧವಲ್ಲವೋ
ಸ್ನೇಹ ಅನ್ನೋದು
ಬಾಳ ಮನೆಯಲ್ಲಿ
ಬಂದ ಮೇಲೆ ಹೋಗೋದಿಲ್ಲವೋ
ಪ್ರೇಮ ಅನ್ನೋದು
ಎದೆಯ ಗೂಡಲಿ
ಪ್ರೀತಿನಾ ಪ್ರೀತಿಯಿಂದ
ಪ್ರೀತ್ಸು ಅಂದೋರಿಗೆ ಥ್ಯಾಂಕ್ಸ್
ಸ್ನೇಹಕ್ಕೆ ಕೊನೆಯೇ ಇಲ್ಲ
ಅಂದೋರಿಗೆ ನನ್ನ ಥ್ಯಾಂಕ್ಸ್
ಜನುಮಾನ ಕೊಟ್ಟ
ಅಮ್ಮ ಥ್ಯಾಂಕ್ಸ್ ಅಪ್ಪ ಥ್ಯಾಂಕ್ಸ್
ಅಕ್ಷರ ಕೊಟ್ಟ ಮೇಷ್ಟ್ರೇ ಥ್ಯಾಂಕ್ಸ್
ಮೇಡಮ್ ಥ್ಯಾಂಕ್ಸ್

ಗುರಿ ಇದ್ರೆ ಸಂಚಾರ
ಗುರಿ ಇದ್ರೆ ಸಂಸ್ಕಾರ
ಒಲವಿದ್ರೆ ಸಂಸಾರ
ಅಂದೋರಿಗೆ ಹೃದಯಾಳದ ಥ್ಯಾಂಕ್ಸ್
ಲಿಪಿಯಿಂದ ಭಾಷೆನ
ಕಪಿಯಿಂದ ಮನುಷ್ಯನ್ನ
ಹೊರತಂದ ಬ್ರಹ್ಮಣ್ಣ
ನಿನಗೂ ಒಂದು ಖುಷಿಯಾದ ಥ್ಯಾಂಕ್ಸ್
ಸಾಧನೆನ ಮಾಡಿ ಹೋಗಿರುವ
ಹಿರಿಯ ಜೀವಗಳೇ
ನೀವೇ ಮಾರ್ಗ ನಮಗೆಲ್ಲಾ
ಸೃಷ್ಟಿಯ ಜೀವ ರಾಶಿಗೆ
ಕೈ ತುತ್ತು ನೀಡಿರೋ ಧರೆಯೇ ಸಕಲ
ಕುಲದಲ್ಲಿ ಮೇಲು ಕೀಳು ಇಲ್ಲ
ಅಂದೋರಿಗೂ ಥ್ಯಾಂಕ್ಸ್
ಕನ್ನಡದ ಮಕ್ಕಳೆಲ್ಲ ಬನ್ನಿ
ಅಂದೋರಿಗೆ ಥ್ಯಾಂಕ್ಸ್

ಜನುಮಾನ ಕೊಟ್ಟ
ಅಮ್ಮ ಥ್ಯಾಂಕ್ಸ್ ಅಪ್ಪ ಥ್ಯಾಂಕ್ಸ್
ಅಕ್ಷರ ಕೊಟ್ಟ ಮೇಷ್ಟ್ರೇ ಥ್ಯಾಂಕ್ಸ್
ಮೇಡಮ್ ಥ್ಯಾಂಕ್ಸ್


No comments:

Post a Comment

Write Something about PK Music

new1

new2

new5