Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

Ninnanne Preetisuve Lyrics - Ragad Movie Lyrics - ನಿನ್ನನ್ನೇ ಪ್ರೀತಿಸುವೆ ನೂರಾರು ಜನ್ಮಕು

Song Name: Ninnane Preethisuve
Banner: AMMA CINE CREATIONS
Producer: ARUN KUMAR A
Director: SRI MAHESH GOWDA
Film: RUGGED
Cast: VINOD PRABHAKAR, CHAITARA REDDY
Music: ABHIMANN ROY
Singer: RAJESH KRISHNAN 
Lyricist: SRI MAHESH GOWDA

ನಿನ್ನನ್ನೇ ಪ್ರೀತಿಸುವೆ ನೂರಾರು ಜನ್ಮಕು
ನಿನ್ನನ್ನೇ ಪ್ರೀತಿಸುವೆ ನೂರಾರು ಜನ್ಮಕು
ನಿನಗಾಗಿಯೇ ಹುಟ್ಟುವೆನು ಪ್ರತಿಯೊಂದು ಜನ್ಮಕು
ಸುಂದರ ಮನಸಲಿ ನಿನ್ನದೇ ಕನಸಿದೆ ದಿನವೂ ನನ್ನಲಿ
ಅಂದದ ಬದುಕನು ಕಾಣುವ ಆಸೆಯು ನಿನ್ನದೇ ಜೊತೆಯಲಿ
ನಿನ್ನಲ್ಲೇ ನಿನ್ನಲ್ಲೇ ನಾನಿಂದು ಇರುವೆನು
ನನ್ನಲ್ಲೇ ನನ್ನಲ್ಲೇ ನೀನೆಂದು ಇರುವೆಯಾ

ನಿನ್ನಿಂದ ನಾನು ಹೊಸ ಲೋಕ ಕಂಡೆ
ನಿನ್ ಹಿಂದೆ ಪ್ರತಿ ದಿನವೂ ಸುತ್ತಾಡಿ ಬಂದೆ
ತಿರುತಿರುಗಿ ನೀನು ನನ ನೋಡಿದಾಗ
ನಗುವ ನಾ ನೋಡಿ ಮನಸೋತು ಹೋದೆ
ಏನಾಗುವುದೋ.. ಏನಾಗುವುದೋ..
ಎಂಬ ಭಯ ನನ್ನ ತುಂಬಾ ಕಾಡಿದೆ
ಆದರೂನು ನಿನ್ನ ಮೇಲೆ ನಂಬಿಕೆ ಇದೆ

ನಿನ್ನನ್ನೇ ಪ್ರೀತಿಸುವೆ ನೂರಾರು ಜನ್ಮಕು
ನಿನಗಾಗಿಯೇ ಹುಟ್ಟುವೆನು ಪ್ರತಿಯೊಂದು ಜನ್ಮಕು

ನಿನಗಾಗಿ ನನ್ನೆದೆಯ ಆಸ್ಥಾನದಲ್ಲಿ
ಅನುದಿನವೂ ಅನುಕ್ಷಣವೂ ಹೃದಯೋತ್ಸವ
ಮನದ ಅರಮನೆಯ ಪ್ರೀತಿಯ ಅಂಗಳದಲ್ಲಿ
ಮುತ್ತುಗಳ ರಾಶಿಯಲಿ ಪ್ರೇಮೋತ್ಸವ
ಆದರಿಸುವೆಯೋ.. ಅವತರಿಸುವೆಯೋ..
ಎಂಬ ಅನುಮಾನ ಅನ್ನೋ ಕೊರಗಿದೆ
ಏನೇ ಆದರೂ ನಿನ್ನೊಳಗೆ ನಾನು ಇರುವೆನೇ

ನಿನ್ನನ್ನೇ ಪ್ರೀತಿಸುವೆ ನೂರಾರು ಜನ್ಮಕು
ನಿನಗಾಗಿಯೇ ಹುಟ್ಟುವೆನು ಪ್ರತಿಯೊಂದು ಜನ್ಮಕು

Ninnanne Preethisuve Karaoke


Ninnanne Preethisuve Lyrics in Kannada


No comments:

Post a Comment

Write Something about PK Music

new1

new2

new5