Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ಎಲ್ಲಾರನ್ ಕಾಯೋ ದ್ಯಾವ್ರೇ - Ellarn Kaayo dyavre neenu Song Lyrics - Beluvalada madilalli Songs Lyrics


ಎಲ್ಲಾರನ್ ಕಾಯೋ ದ್ಯಾವ್ರೇ ನೀನು ಎಲ್ಲಿ ಕುಂತಿದ್ದಿ
ನಮ್ಮನ್ನೆಲ್ಲಾ ಭೂಮ್ಯಾಗ್ ಬುಟ್ಟು ಏನು ಮಾಡ್ತಿದ್ದಿ
ನೀ ಏನು ಮಾಡ್ತಿದ್ದಿ…
ಎಲ್ಲಾರನ್ ಕಾಯೋ ದ್ಯಾವ್ರೇ ನೀನು ಎಲ್ಲಿ ಕುಂತಿದ್ದಿ
ನಮ್ಮನ್ನೆಲ್ಲಾ ಭೂಮ್ಯಾಗ್ ಬುಟ್ಟು ಏನು ಮಾಡ್ತಿದ್ದಿ
ಎಲ್ಲಾರನ್ ಕಾಯೋ ದ್ಯಾವ್ರೇ...

ಮನ್ಸಾರ್ನ್ ಮಾಡಿ ಅವರಿಷ್ಟ್ದಂಗೆ ಆಡಾಕ್ ಬುಟ್ಬುಟ್ಟೆ
ನಿನ್ನೇ ಅವ್ರು ಕಲ್ನಾಗ್ ಕಡದು ಗುಡಿಯಾಗ್ ಕೂಡ್ಬುಟ್ರು
ಮನ್ಸಾರ್ನ್ ಮಾಡಿ ಅವರಿಷ್ಟ್ದಂಗೆ ಆಡಾಕ್ ಬುಟ್ಬುಟ್ಟೆ
ನಿನ್ನೇ ಅವ್ರು ಕಲ್ನಾಗ್ ಕಡದು ಗುಡಿಯಾಗ್ ಕೂಡ್ಬುಟ್ರು
ನಿನ್ನ ಹೆಸರನ್ ಹೇಳ್ಕಂಡ್ ಎಷ್ಟೋ ಪಾಪ ಮಾಡ್ತಾರೆ...
ನಿನ್ನ ಹೆಸರನ್ ಹೇಳ್ಕಂಡ್ ಎಷ್ಟೋ ಪಾಪ ಮಾಡ್ತಾರೆ…
ಹಣ್ಣು ಕಾಯಿ ಲಂಚ ಕೊಟ್ಟು ಕ್ಷಮ್ಸು ಅಂತಾರೆ
ಹ ಹ ದ್ಯಾವ್ರೇ...

ಎಲ್ಲಾರ್ನ್ ಕಾಯೋ ದ್ಯಾವ್ರೇ ನೀನು ಎಲ್ಲಿ ಕುಂತಿದ್ದೀ
ನಮ್ಮನ್ನೆಲ್ಲಾ ಭೂಮ್ಯಾಗ್ ಬುಟ್ಟು ಏನು ಮಾಡ್ತಿದ್ದೀ
ಎಲ್ಲಾರ್ನ್ ಕಾಯೋ ದ್ಯಾವ್ರೇ...

ತೆಂಗೀನ್ ಮರ ಸಾಕಿದ್ರೆ ಎಳನೀರ್ ಕೊಡ್ತದೆ ...
ಪ್ರೀತ್ಸಿದ್ ಬೆಳ್ಸಿದ್ ಮಕ್ಕಳಿಂದ ಕಣ್ಣೀರ್ ಸಿಗ್ತದೆ
ಬರೀ ಕಣ್ಣೀರ್ ಸಿಗ್ತದೆ..
ತೆಂಗೀನ್ ಮರ ಸಾಕಿದ್ರೆ ಎಳನೀರ್ ಕೊಡ್ತದೆ...
ಪ್ರೀತ್ಸಿದ್ ಬೆಳ್ಸಿದ್ ಮಕ್ಕಳಿಂದ ಕಣ್ಣೀರ್ ಸಿಗ್ತದೆ
ಅಪ್ಪ ಅಮ್ಮ ಬದ್ಕಿರೋ ತನಕ ಕೀಳಾಗ್ ಕಾಣ್ತಾರೆ..
ಸತ್ತೋದ್ ಮ್ಯಾಗೆ ಶ್ರಾದ್ಧಾ ಮಾಡಿ ಭಕ್ತಿ ತೋರ್ತಾರೆ
ಅವರ್ನೆಲ್ಲ ಕಾಗೆ ಮಾಡಿ ಕೂಳ್ ಹಾಕ್ತಾರೆ.. ದ್ಯಾವ್ರೇ...

ಎಲ್ಲಾರನ್ ಕಾಯೋ ದ್ಯಾವ್ರೇ ನೀನು, ಎಲ್ಲಿ ಕುಂತಿದ್ದೀ
ಎಲ್ಲಾರನ್ ಕಾಯೋ ದ್ಯಾವ್ರೇ........

ಬೇಸಾಯ್ದ್ ಬದುಕು ಬ್ಯಾಡ್ದೇ ಹೊದ್ರು ಭೂಮೀಲ್ ಬಾಳ್ಬೇಕು..
ಬೆವರು ಮಾತ್ರ ಸುರೀಬಾರ್ದು ಭಾಗ್ಯ ಮಾತ್ರ ಬೇಕು
ಬೇಸಾಯ್ದ್ ಬದುಕು ಬ್ಯಾಡ್ದೇ ಹೋದ್ರು ಭೂಮೀಲ್ ಬಾಳ್ಬೇಕು
ಬೆವರು ಮಾತ್ರ ಸುರೀಬಾರ್ದು ಭಾಗ್ಯ ಮಾತ್ರ ಬೇಕು
ಉತ್ತು ಬಿತ್ತು ಬೆಳೆಯೋನ್ಗಲ್ವೆ ಸೇರ್ಬೇಕಾದ್ದು ಭೂಮಿ
ದುಡಿಯೋನಲ್ವೆ ಒಡೆಯ ಇನ್ನು ನೀನೇ ಹೇಳು ಸ್ವಾಮಿ.. ದ್ಯಾವ್ರೇ.....

ಎಲ್ಲಾರನ್ ಕಾಯೋ ದ್ಯಾವ್ರೇ ನೀನು, ಎಲ್ಲಿ ಕುಂತಿದ್ದಿ
ನಮ್ಮನ್ನೆಲ್ಲಾ ಭೂಮ್ಯಾಗ್ ಬುಟ್ಟು ಏನು ಮಾಡ್ತಿದ್ದಿ
ಎಲ್ಲಾರನ್ ಕಾಯೋ ದ್ಯಾವ್ರೇ.....

No comments:

Post a Comment

Write Something about PK Music

new1

new2

new5