Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

Hanumantha Saregamapa | Negila Hididu Lyrics | Zee kannada | Saregamapa - 15

Song Link of Zee Kannada

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಸರಿಗಮಪ ಕಾರ್ಯಕ್ರಮ ಕರ್ನಾಟಕ ಜನತೆಯ ಮನಗೆದ್ದಿರುವ ಕಾರ್ಯಕ್ರಮ ಅಂದರೆ ತಪ್ಪಾಗುವುದಿಲ್ಲ, ಈ ಕಾರ್ಯಕ್ರಮದಲ್ಲಿ ಜಡ್ಜ್ ಗಳಾಗಿರುವಂತಹ ಹಂಸಲೇಖ, ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣನ್ ಮತ್ತು ಅರ್ಜುನ್ ಜನ್ಯಾ ಕನ್ನಡಿಗರ ಮನಸ್ಸು ಗೆದ್ದಿರುವಂತಹ ಸಂಗೀತ ಸಾಮ್ರಾಟರು, ಇವರುಗಳು ಈ ಕಾರ್ಯಕ್ರಮಕ್ಕೆ ಮೆರಗು ತಂದುಕೊಟ್ಟವರು, ಹಾಗೆಯೇ ಈ ಕಾರ್ಯಕ್ರಮಕ್ಕೆ ನಿರೂಪಕಿಯಾಗಿರುವ ಅನುಶ್ರೀ ಕರ್ನಾಟಕ್ಕೆ ಚಿರಪರಿಚಿತರು, ತನ್ನ ನಿರೂಪಣೆ ಶೈಲಿ ಯಿಂದಲೇ ಕನ್ನಡಿಗರ ಮನ ಗೆದ್ದವರು, ಪಡ್ಡೆ ಹುಡುಗರ ಹೃದಯ ಕದ್ದಿರುವಂತಹ ಸೌಂದರ್ಯವಂತೆ, ಇವರೆಲ್ಲರ ಸಾರಥ್ಯದಲ್ಲಿ ನಡೆಯುತ್ತಿರುವ ಕಾರ್ಯಕ್ರಮ ಸರಿಗಮಪ.

ಹಾಗೆಯೇ ಸರಿಗಮಪ ಸೀಜನ್ 15 ಅಂದರೆ ನಮಗೆ ಮನಸ್ಸಿಗೆ ಬರೋದು ನಮ್ಮ ನಿಮ್ಮೆಲ್ಲರ ಅಚ್ಚು ಮೆಚ್ಚಿನ ಕುರಿಗಾಹಿ ಹನುಮಂತ, ಹನುಮಂತ ಒಂದು ಪುಟ್ಟ ಹಳ್ಳಿಯಲ್ಲಿ ಹುಟ್ಟಿ ಬೆಳೆದು ಈಗ ಕನ್ನಡಿಗರ ಮನೆಯ ಮಗನಾಗಿದ್ದಾರೆ, ಹನುಮಂತ ಕಾರ್ಯಕ್ರಮಕ್ಕೆ ಎಂಟ್ರಿ ಕೊಟ್ಟಾಗಿನಿಂದ ಈವರೆಗೂ ಉತ್ತಮ ತನ್ನ ಕಂಠಸಿರಿ ಯಿಂದ ಹಾಡಿ ಜನರ ಮನ ಗೆದ್ದಿರುವುದು ಖಂಡಿತ, ಇವರು ಪ್ರತಿಯೊಬ್ಬರ ಫೇವರಿಟ್ ಅಂತ ಹೇಳಬಹುದು.

ದಿನ ಎಲ್ಲರ ಅಚ್ಚುಮೆಚ್ಚಿನ ಸಿ ಅಶ್ವಥ್ ರವರ ಕಂಠಸಿರಿಯಲ್ಲಿ ಮೂಡಿ ಬಂದಿದ್ದ ರೈತರ ಹಾಡು ನೇಗಿಲ ಹಿಡಿದು ಹೊಲದೊಳು ಹಾಡುತ ಉಳುವ ಯೋಗಿಯ ನೋಡಲ್ಲಿ ಎಂಬ ಹಾಡನ್ನು ಹಾಡಿದ್ದಾರೆ. ಗಾಯನಕ್ಕೆ ಹಂಸಲೇಖ ಅವರು ಉತ್ತಮವಾದ ಪ್ರತಿಕ್ರಿಯೆ ನೀಡಿ, ಹನುಮಂತನನ್ನು ಹಾದಿ ಹೊಗಳಿದ್ದಾರೆ, ಅದೇ ರೀತಿ ಎಲ್ಲ ಜಡ್ಜಸ್ ಹನುಮಂತನ ಗಾಯನಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.


ನೇಗಿಲ ಹಿಡಿದ ಹೊಲದೊಳು ಹಾಡುತ

ಉಳುವ ಯೋಗಿಯ ನೋಡಲ್ಲಿ………..

ಓ...............
ನೇಗಿಲ ಹಿಡಿದಹೊಲದೊಳು ಹಾಡುತ
ಉಳುವ ಯೋಗಿಯ ನೋಡಲ್ಲಿ……..
ಓ...............
ಫಲವನ್ನು ಬಯಸದೆ ಸೇವೆಯ ಪೂಜೆಯು
ಕರ್ಮವೇ ಇಹಪರ ಸಾಧನವು
ಕಷ್ಟದೊಳನ್ನವ ದುಡಿವನೆ ತ್ಯಾಗಿ
ಸೃಷ್ಟಿನಿಯಮದೊಳಗವನೆ ಭೋಗಿ……
ಉಳುವ ಯೋಗಿಯ ನೋಡಲ್ಲಿ
ಉಳುವ ಯೋಗಿಯ ನೋಡಲ್ಲಿ.
ಏ......................
♫♫♫♫♫♫♫♫♫♫♫♫♫♫
ಲೋಕದೊಳೇನೆ ನಡೆಯುತಲಿರಲಿ
ತನ್ನಿ ಕಾರ್ಯಾವ ಬಿಡನೆಂದು
ರಾಜ್ಯಗಳುದಿಸಲಿ ರಾಜ್ಯಗಳಲಿಯಲಿ
ಹಾರಲಿ ಗದ್ದುಗೆ ಮುಕುಟಗಳು……..
ರಾಜ್ಯಗಳುದಿಸಲಿ ರಾಜ್ಯಗಳಲಿಯಲಿ
ಹಾರಲಿ ಗದ್ದುಗೆ ಮುಕುಟಗಳು……..
ಮುತ್ತಿಗೆ ಹಾಕಲಿ ಸೈನಿಕರೆಲ್ಲ
ಮುತ್ತಿಗೆ ಹಾಕಲಿ ಸೈನಿಕರೆಲ್ಲ
ಉತ್ತುಳುವುದನವ ಬಿಡುವುದೇ ಇಲ್ಲ
ಉತ್ತುಳುವುದನವ ಬಿಡುವುದೇ ಇಲ್ಲ
ಉಳುವ ಯೋಗಿಯ ನೋಡಲ್ಲಿ
ಉಳುವ ಯೋಗಿಯ ನೋಡಲ್ಲಿ
ಏ......................
♫♫♫♫♫♫♫♫♫♫♫♫♫♫
ಯಾರು ಅರಿಯದ ನೇಗಿಲ ಯೋಗಿಯೇ
ಲೋಕಕೆ ಅನ್ನವನೀಯುವನು
ಯಾರು ಅರಿಯದ ನೇಗಿಲ ಯೋಗಿಯೇ
ಲೋಕಕೆ ಅನ್ನವನೀಯುವನು
ಹೆಸರನು ಬಯಸದೆ ಅತಿಸುಖ ಕೆಲಸದೆ
ದುಡಿವನು ಗೌರವಕಾಶಿಸದೆ
ನೇಗಿಲ ಕುಲದೊಳಗಡಗಿದೆ ಕರ್ಮ…….
ಓ...............
ನೇಗಿಲ ಕುಲದೊಳಗಡಗಿದೆ ಕರ್ಮ
ನೇಗಿಲ ಮೇಲೆಯೇ ನಿಂತಿದೆ ಧರ್ಮ
ನೇಗಿಲ ಮೇಲೆಯೇ ನಿಂತಿದೆ ಧರ್ಮ……
ಉಳುವ ಯೋಗಿಯ  ನೋಡಲ್ಲಿ
ಉಳುವ ಯೋಗಿಯ  ನೋಡಲ್ಲಿ
ಉಳುವ ಯೋಗಿಯ  ನೋಡಲ್ಲಿ
ಉಳುವ ಯೋಗಿಯ  ನೋಡಲ್ಲಿ

No comments:

Post a Comment

Write Something about PK Music

new1

new2

new5