Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

Nodida avanu heege nodina Lyrics - C Ashwath Songs Lyrics - ನೋಡಿದ ಅವನು ಹೀಗೆ ನೋಡಿದ

Song: Nodida Avanu Singer:Ratnamala Prakash Music Director: C. Ashwath Lyricist: B.R. Lakshman Rao Music Label : Lahari Music

ನೋಡಿದ ಅವನು ಹೀಗೆ ನೋಡಿದ
ನೋಡಿದ ಅವನು ಹೀಗೆ ನೋಡಿದ
ಒಣಬೇರಿಗೆ ನೀರೂಡುವ ಹಾಗೆ ನೋಡಿದ
ಕೂಡಿದ ನನ್ನ ಹೇಗೆ ಕೂಡಿದ
ಕೂಡಿದ ನನ್ನ ಹೇಗೆ ಕೂಡಿದ
ಹೊಸಚೇತನ ನನ್ನಲಿ ಹರಿವಂತೆ ಕೂಡಿದ
ನೋಡಿದ ಅವನು ಹೀಗೆ ನೋಡಿದ

ನರಳಿದೆ ಆಹಾ ಹೇಗೆ ನರಳಿದೆ
ಮೈಯ ತುಂಬ ಚಿಗುರು ನಿಮಿರಿದಂತೆ ನರಳಿದೆ
ನರಳಿದೆ ಆಹಾ ಹೇಗೆ ನರಳಿದೆ
ಮೈಯ ತುಂಬ ಚಿಗುರು ನಿಮಿರಿದಂತೆ ನರಳಿದೆ
ಅರಳಿದೆ ಹಿಗ್ಗಿ ಹೇಗೆ ಅರಳಿದೆ
ಹೂವಿನೋಕುಳಿಯಲಿ ಮಿಂದ ಹಾಗೆ ಅರಳಿದೆ
ಅರಳಿದೆ ಹಿಗ್ಗಿ ಹೇಗೆ ಅರಳಿದೆ
ಹೂವಿನೋಕುಳಿಯಲಿ ಮಿಂದ ಹಾಗೆ ಅರಳಿದೆ

ನೋಡಿದ ಅವನು ಹೀಗೆ ನೋಡಿದ
ನೋಡಿದ ಅವನು ಹೀಗೆ ನೋಡಿದ
ಒಣಬೇರಿಗೆ ನೀರೂಡುವ ಹಾಗೆ ನೋಡಿದ
ನೋಡಿದ ಅವನು ಹೀಗೆ ನೋಡಿದ

ಸುರಿಸಿದ ಒಲವ ಹೇಗೆ ಸುರಿಸಿದ
ಆಗುಂಬೆಯ ಹುಚ್ಚು ಮಳೆಯ ಹಾಗೆ ಸುರಿಸಿದ
ಸುರಿಸಿದ ಒಲವ ಹೇಗೆ ಸುರಿಸಿದ
ಆಗುಂಬೆಯ ಹುಚ್ಚು ಮಳೆಯ ಹಾಗೆ ಸುರಿಸಿದ
ಫಲಿಸಿತು ನನ್ನೊಳೇನು ಫಲಿಸಿತು
ಜೊಂಪೆ ಜೊಂಪೆ ಹಣ್ಣು ತೂಗಿ ಜೀವ ಫಲಿಸಿತು
ಫಲಿಸಿತು ನನ್ನೊಳೇನು ಫಲಿಸಿತು
ಜೊಂಪೆ ಜೊಂಪೆ ಹಣ್ಣು ತೂಗಿ ಜೀವ ಫಲಿಸಿತು

ನೋಡಿದ ಅವನು ಹೀಗೆ ನೋಡಿದ
ನೋಡಿದ ಅವನು ಹೀಗೆ ನೋಡಿದ
ಒಣಬೇರಿಗೆ ನೀರೂಡುವ ಹಾಗೆ ನೋಡಿದ
ನೋಡಿದ ಅವನು ಹೀಗೆ ನೋಡಿದ

ತುಂಬಿತು ಎದೆಯೊಳೇನು ತುಂಬಿತು
ನೂರು ಹಕ್ಕಿ ಹೈಕಳುಗಳ ಹಾಡು ತುಂಬಿತು
ತುಂಬಿತು ಎದೆಯೊಳೇನು ತುಂಬಿತು
ನೂರು ಹಕ್ಕಿ ಹೈಕಳುಗಳ ಹಾಡು ತುಂಬಿತು
ಆದೆನು ನಾನು ಏನಾದೆನು
ಸುತ್ತ ತಂಪು ನೆರಳು ಹರಡಿ ಧನ್ಯಳಾದೆನು
ಆದೆನು ನಾನು ಏನಾದೆನು
ಸುತ್ತ ತಂಪು ನೆರಳು ಹರಡಿ ಧನ್ಯಳಾದೆನು

ನೋಡಿದ ಅವನು ಹೀಗೆ ನೋಡಿದ
ನೋಡಿದ ಅವನು ಹೀಗೆ ನೋಡಿದ
ಒಣಬೇರಿಗೆ ನೀರೂಡುವ ಹಾಗೆ ನೋಡಿದ
ನೋಡಿದ ಅವನು ಹೀಗೆ ನೋಡಿದ
ನೋಡಿದ ಅವನು ಹೀಗೆ ನೋಡಿದ

No comments:

Post a Comment

Write Something about PK Music

new1

new2

new5