ಗಾಡಾಂಧಕಾರದ ಇರುಳಲ್ಲಿ
ಕಾರ್ಮೋಡ ನೀರಾದ ವೇಳೆಯಲ್ಲಿ
ಶ್ರೀ ಕೃಷ್ಣ ಜನಿಸಿದ ಧರೆಯಲ್ಲಿ
ದೇವಕಿ ಇರುವಾಗ ಸೆರೆಯಲ್ಲಿ
ಶ್ರೀ ಕೃಷ್ಣ ಜನಿಸಿದ ಧರೆಯಲ್ಲಿ
ದೇವಕಿ ಇರುವಾಗ ಸೆರೆಯಲ್ಲಿ
ತಂದೆಯು ಕಣ್ಣೀರ ಕಡಲಲ್ಲಿ
ಮಾವನು ಕಾವಲು ಬಾಗಿಲಲಿ
ಶ್ರೀ ಕೃಷ್ಣ ಜನಿಸಿದ ಧರೆಯಲ್ಲಿ
ದೇವಕಿ ಇರುವಾಗ ಸೆರೆಯಲ್ಲಿ
ತಾಯ ಸೆರೆಯ ಬಿಡಿಸಲೆಂದೇ..
ಕೃಷ್ಣನಂತೆ ಬಂದೆಯೇನು
ಗೀತೆಯನ್ನು ಭೋದಿಸಲೆಂದೇ..
ಭುವಿಗೆ ಇಳಿದು ಬಂದೆಯೇನು
ನೀನು ಬಂದ ಗಳಿಗೆಯಿಂದ
ಶೋಕವೆಲ್ಲ ತೀರಲಿ, ಶಾಂತಿ ಸೌಖ್ಯ ತುಂಬಲಿ
ಶ್ರೀ ಕೃಷ್ಣ ಜನಿಸಿದ ಧರೆಯಲ್ಲಿ
ದೇವಕಿ ಇರುವಾಗ ಸೆರೆಯಲ್ಲಿ
ತಂದೆಯು ಕಣ್ಣೀರ ಕಡಲಲ್ಲಿ
ಮಾವನು ಕಾವಲು ಬಾಗಿಲಲಿ
ಶ್ರೀ ಕೃಷ್ಣ ಜನಿಸಿದ ಧರೆಯಲ್ಲಿ
ದೇವಕಿ ಇರುವಾಗ ಸೆರೆಯಲ್ಲಿ
ನೂರು ಒಗಟು ಬಿಡಿಸಿ ನಗುವ
ಜಾಣೆ ನಿನ್ನ ತಾಯಿ ಅಂದು
ಬಾಳಿನೊಗಟ ಒಡೆವ ದಾರಿ
ಕಾಣದಾಗಿ ಅಳುವಲಿಂದು
ನೂರು ನೋವ ನೀಗಿ ನಲಿವ
ದಾರಿ ಬೇಗ ತೋರಿಸು
ತಾಯ ಆಸೆ ತೀರಿಸು
ಶ್ರೀ ಕೃಷ್ಣ ಜನಿಸಿದ ಧರೆಯಲ್ಲಿ
ದೇವಕಿ ಇರುವಾಗ ಸೆರೆಯಲ್ಲಿ
ತಂದೆಯು ಕಣ್ಣೀರ ಕಡಲಲ್ಲಿ
ಮಾವನು ಕಾವಲು ಬಾಗಿಲಲಿ
ಶ್ರೀ ಕೃಷ್ಣ ಜನಿಸಿದ ಧರೆಯಲ್ಲಿ
ದೇವಕಿ ಇರುವಾಗ ಸೆರೆಯಲ್ಲಿ
ಆ ಆ ಆ ಆ ಆ ಹೂಹುಹುಹುಹು
No comments:
Post a Comment
Write Something about PK Music