Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ಕಾಣದ ಊರಲಿ... - Kaanada oorali Song Lyrics - Gandhinagara Kannada Movie Lyrics


ಚಿತ್ರ: ಗಾಂಧಿ ನಗರ
ಗಾಯನ : ಎಸ್.ಪಿ.ಬಾಲಸುಬ್ರಹ್ಮಣ್ಯಂ

ಕಾಣದ ಊರಲಿ... ನೀ ಕುಳಿತಿರುವೆ...
ಎಲ್ಲರ ಕಥೆಯ... ನೀ ಬರೆದಿರುವೆ...
ಎಂದೂ ಮುಗಿಯದ
ಬಾಳ ನಾಟಕವ ಆಡಿಸುತಿರುವೆ...
ನೀ ನೋಡುತಲಿರುವೆ  ಹ್ ಹ್ ಹ್ ದೇವಾ..
ಕಾಣದ ಊರಲಿ... ನೀ ಕುಳಿತಿರುವೆ...
ಎಲ್ಲರ ಕಥೆಯ... ನೀ ಬರೆದಿರುವೆ...
ಎಂದೂ ಮುಗಿಯದ ಬಾಳ ನಾಟಕವ
ಆಡಿಸುತಿರುವೆ.....ನೀ ನೋಡುತಲಿರುವೆ....
♫♫♫♫♫♫♫♫♫♫
ತಪ್ಪುಮಾಡುವುದು ಒಬ್ಬನಾದರೆ
ದಂಡನೆ ಪಡೆವುದು ಇನ್ಯಾರೋ
ತಪ್ಪುಮಾಡುವುದು ಒಬ್ಬನಾದರೆ
ದಂಡನೆ ಪಡೆವುದು ಇನ್ಯಾರೋ...
ದುಡಿಯುವ ಶಾಪಕೆ ಒಬ್ಬನಾದರೆ
ಸುಖಿಸುವ ವರಕೆ ಇನ್ಯಾರೋ
ನೀತಿ ನ್ಯಾಯವೆ ಕಾಣದಾಗಿದೆ
ಲೋಕದಲಿ ಕಾಲದಲಿ

ಕಾಣದ ಊರಲಿ...ನೀ ಕುಳಿತಿರುವೆ...
ಎಲ್ಲರ ಕಥೆಯ.... ನೀ ಬರೆದಿರುವೆ...
ಎಂದೂ ಮುಗಿಯದ ಬಾಳ ನಾಟಕವ
ಆಡಿಸುತಿರುವೆ  ನೀ ನೋಡುತಲಿರುವೆ...
♫♫♫♫♫♫♫♫♫♫
ಸತ್ಯಕಾಗಿ ಹೋರಾಡುವ ಜನರ
ಬಾಯಿಗೆ ಬೀಗವ ಹಾಕಿರುವೆ
ಸತ್ಯಕಾಗಿ ಹೋರಾಡುವ ಜನರ
ಬಾಯಿಗೆ ಬೀಗವ ಹಾಕಿರುವೆ
ಒಲವಿನ ಮೊಗ್ಗು ಅರಳುವಾಗಲೆ
ಬಿರುಗಾಳಿಯನು ಬೀಸಿರುವೆ
ಪ್ರೀತಿ ಪ್ರೇಮವೆ ಇಲ್ಲವಾಗಿದೆ
ನಿನ್ನ ಕಥೆಯಲಿ ಏನು ಹೇಳಲಿ

ಕಾಣದ ಊರಲಿ... ನೀ ಕುಳಿತಿರುವೆ...
ಎಲ್ಲರ ಕಥೆಯ... ನೀ ಬರೆದಿರುವೆ...
ಎಂದೂ ಮುಗಿಯದ
ಬಾಳ ನಾಟಕವ ಆಡಿಸುತಿರುವೆ ಹ್ ಹ್
ನೀ ನೋಡುತಲಿರುವೆ
ನೀ ನೋಡುತಲಿರುವೆ
ನೀ ನೋಡುತಲಿರುವೆ...

Kaanada oorali Song Karaoke ⇩



Kaanada oorali Nee kulitiruve Song Lyrics
Kanada oorali Nee kulitiruve Song Lyrics
Kanada urali Nee kulitiruve Song Lyrics
Gandhinagara Kannada Movie Lyrics
Gaandhinagara Kannada Movie Lyrics
Gaandinagara Kannada Movie Lyrics
Gandinagara Kannada Movie Lyrics in Kannada

No comments:

Post a Comment

Write Something about PK Music

new1

new2

new5