ಚಿತ್ರ: ಸಿಂಹಾದ್ರಿಯ ಸಿಂಹ
ಪ್ರಿಯಾ ಪ್ರಿಯಾ ಓ ಪ್ರಿಯಾ
ಓ ಪ್ರಿಯಾ ಪ್ರಿಯಾ ಓ ಪ್ರಿಯಾ
ಪ್ರಿಯಾ ಪ್ರಿಯಾ ಓ ಪ್ರಿಯಾ
ಓ ಪ್ರಿಯಾ ಪ್ರಿಯಾ ಓ ಪ್ರಿಯಾ
ಆ ಚೈತ್ರದ ಬಾಗಿಲಿಗೆ
ನಿನ್ನ ನಗೆ ತೋರಣವೇ
ಆ ಕಡಲಲಿ ಜನಿಸಿದ ಚಂದದ ಸುಂದರಿಯೇ
ಪ್ರಿಯಾ ಪ್ರಿಯಾ ಓ ಪ್ರಿಯಾ
ಓ ಪ್ರಿಯಾ ಪ್ರಿಯಾ ಓ ಪ್ರಿಯಾ
♬♬♬♬♬♬♬♬♬♬♬♬♬♬♬♬
ಚಂದನವ ತೇಯ್ದು ತೇಯ್ದು
ಗೊಂಬೆಯನು ಮಾಡಿ ತಂದೆ
ಮೇಘಗಳ ಮಾಲೆಯಿಂದ
ಕೆನ್ನೆಯಲಿ ಕಾಂತಿ ತಂದೆ
ಮೂಡಣದ ಊರಿನಿಂದ
ಹುಬ್ಬುಗಳ ಸಾಲು ಬರೆದೆ
ಇಬ್ಬನಿಯ ಬಸಿದು ನಾನು
ಕಣ್ಣಿನಲಿ ರೆಪ್ಪೆಯ ತಂದೆ
ಓ ಹಂಸವೇ ನೀ ಬಂದು ಸ್ವಲ್ಪ ನಡೆ ಕಳಿಸು
ಏ ಕೋಗಿಲೆಯೆ ಕೊಂಚ ನಿನ್ನ ನುಡಿ ಕಲಿಸು
ನನ್ನ ಜೀವದಿ ಅರ್ಧವ ಇವಳಿಗೆ ಅರ್ಪಿಸುವೆ
ಪ್ರಿಯಾ ಪ್ರಿಯಾ ಓ ಪ್ರಿಯಾ
ಓ ಪ್ರಿಯಾ ಪ್ರಿಯಾ ಓ ಪ್ರಿಯಾ
ಪ್ರಿಯಾ ಪ್ರಿಯಾ ಓ ಪ್ರಿಯಾ
ಓ ಪ್ರಿಯಾ ಪ್ರಿಯಾ ಓ ಪ್ರಿಯಾ
♬♬♬♬♬♬♬♬♬♬♬♬♬♬♬♬
ಮಲ್ಲಿಗೆಯ ತೋಟದಿಂದ
ಕೇಶಗಳ ರಾಶಿ ಹೆಣೆದೆ
ಹಿಮ ಗಿರಿಯ ತೌರಿನಿಂದ
ಅಮೃತದ ಕಲಶವ ತಂದೆ
ಹೆಜ್ಜೇನ ಗೂಡಿನಿಂದ
ಕೆಂದುಟಿಯ ಕೆತ್ತಿದೆ ನಾನು
ಭಾಸ್ಕರನ ಬೇಡಿ ಬೇಡಿ
ಬಣ್ಣವನು ತುಂಬಿದೆ ನಾನು
ಒಂದು ಸಕ್ಕರೆಯ ಮಂಡಿಯನು ಅಲ್ಲಿ ಇರಿಸಿ
ನನ್ನ ಅಕ್ಕರೆಯ ಮುತ್ತುಗಳ ಜೊತೆ ಬೆರೆಸಿ
ನಾ ನನ್ನನೆ ನಿನಗೆ ಅರ್ಪಿಸಿ ನಿನ್ನ ಪಡೆವೆ
ಪ್ರಿಯಾ ಪ್ರಿಯಾ ಓ ಪ್ರಿಯಾ
ಪ್ರಿಯಾ ಪ್ರಿಯಾ ಓ ಪ್ರಿಯಾ
ಪ್ರಿಯಾ ಪ್ರಿಯಾ ಓ ಪ್ರಿಯಾ
ಓ ಪ್ರಿಯಾ ಪ್ರಿಯಾ ಓ ಪ್ರಿಯಾ
ಆ ಚೈತ್ರದ ಬಾಗಿಲಿಗೆ
ನಿನ್ನ ನಗೆ ತೋರಣವೇ
ಆ ಕಡಲಲಿ ಜನಿಸಿದ ಚಂದದ ಸುಂದರಿಯೇ
ಪ್ರಿಯಾ ಪ್ರಿಯಾ ಓ ಪ್ರಿಯಾ
ಓ ಪ್ರಿಯಾ ಪ್ರಿಯಾ ಓ ಪ್ರಿಯಾ
ಪ್ರಿಯಾ ಪ್ರಿಯಾ ಓ ಪ್ರಿಯಾ
ಓ ಪ್ರಿಯಾ ಪ್ರಿಯಾ ಓ ಪ್ರಿಯಾ
No comments:
Post a Comment
Write Something about PK Music