Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ತು೦ಗಾತೀರದಿ ನಿ೦ತ - Thunga theeradi nintha Lyrics in Kannada | Bhimsen Joshi

ಗಾಯನ: ಭೀಮ್ ಸೇನ್ ಜೋಶಿ

ತು೦ಗಾತೀರದಿ ನಿ೦ತ
ಸುಯತಿವರನ್ಯಾರೇ ಪೇಳಮ್ಮಯ್ಯ
ತು೦ಗಾತೀರದಿ ನಿ೦ತ
ಸುಯತಿವರನ್ಯಾರೇ ಪೇಳಮ್ಮಯ್ಯ  
ಸ೦ಗೀತಪ್ರಿಯ ಮ೦ಗಳಸುಗುಣ ತರ೦ಗ
ಮುನಿಕುಲೋತ್ತು೦ಗ ಕಣಮ್ಮ
ತು೦ಗಾತೀರದಿ ನಿ೦ತ
ಸುಯತಿವರನ್ಯಾರೇ ಪೇಳಮ್ಮಯ್ಯ
ತು೦ಗಾತೀರದಿ ನಿ೦ತ
ಸುಯತಿವರನ್ಯಾರೇ ಪೇಳಮ್ಮಯ್ಯ
♫♫♫♫♫♫♫♫♫♫♫♫♫♫
ಚಲುವ ಸುಮುಖ ಫಣಿಯಲ್ಲಿ
ತಿಲಕ ನಾಮಗಳು ಪೇಳಮ್ಮಯ್ಯ
ಜಲಜಮಣಿಯು ಕೊರಳೊಳು
ತುಳಸಿ ಮಾಲೆಗಳು ಪೇಳಮ್ಮಯ್ಯ
ಸುಲಲಿತ ಕಮ೦ಡಲ ದ೦ಡವನ್ನೆ
ಧರಿಸಿಹನೇ ಪೇಳಮ್ಮಯ್ಯ
ಕ್ಷುಲ್ಲ ಹಿರಣ್ಯಕನಲ್ಲಿ ಜನಿಸಿದ
ಪ್ರಹ್ಲಾದನು ತಾನಿಲ್ಲಿಹನಮ್ಮ
ತು೦ಗಾತೀರದಿ ನಿ೦ತ
ಸುಯತಿವರನ್ಯಾರೇ ಪೇಳಮ್ಮಯ್ಯ
ತು೦ಗಾತೀರದಿ ನಿ೦ತ
ಸುಯತಿವರನ್ಯಾರೇ ಪೇಳಮ್ಮಯ್ಯ
ಸ೦ಗೀತಪ್ರಿಯ
ಮ೦ಗಳಸುಗುಣ ತರ೦ಗ
ಮುನಿಕುಲೋತ್ತು೦ಗ ಕಣಮ್ಮ
ತು೦ಗಾತೀರದಿ ನಿ೦ತ
ಸುಯತಿವರನ್ಯಾರೇ ಪೇಳಮ್ಮಯ್ಯ
♫♫♫♫♫♫♫♫♫♫♫♫♫♫
ಸು೦ದರಚರಣರವಿಂದ
ಸುಭಕುತಿಗಳಿಂದ ಪೇಳಮ್ಮಯ್ಯ
ವ೦ದಿಸಿ ಸ್ತುತಿಸುವ
ಭೂಸುರರೂಪನು ವೃಂದ ಪೇಳಮ್ಮಯ್ಯ
ಚ೦ದದಲ೦ಕೃತಿಯಿಂದ
ಶೋಭಿಸುವ ಆನಂದ ಪೇಳಮ್ಮಯ್ಯ
ಹಿ೦ದೆ ವ್ಯಾಸಮುನಿಯೆ೦ದೆನಿಸಿದ
ಕರ್ಮ೦ದಿಗಳ ರಸಘದಿಂದ ರಹಿತನೆ
ತು೦ಗಾತೀರದಿ ನಿ೦ತ
ಸುಯತಿವರನ್ಯಾರೇ ಪೇಳಮ್ಮಯ್ಯ
ತು೦ಗಾತೀರದಿ ನಿ೦ತ
ಸುಯತಿವರನ್ಯಾರೇ ಪೇಳಮ್ಮಯ್ಯ
ಸ೦ಗೀತಪ್ರಿಯ ಮ೦ಗಳಸುಗುಣ ತರ೦ಗ
ಮುನಿಕುಲೋತ್ತು೦ಗ ಕಣಮ್ಮ
ತು೦ಗಾತೀರದಿ ನಿ೦ತ
ಸುಯತಿವರನ್ಯಾರೇ ಪೇಳಮ್ಮಯ್ಯ
♫♫♫♫♫♫♫♫♫♫♫♫♫♫
ಅಭಿನವ ಜನಕನ ವಿಠಲನ
ಧ್ಯಾನಿಸುವ ಪೇಳಮ್ಮಯ್ಯ
ಅಭಿನವ ಜನಕನ ವಿಠಲನ
ಧ್ಯಾನಿಸುವ ಪೇಳಮ್ಮಯ್ಯ
ಅಭಿವಂದಿಪರಿಗೆ ಅಖಿಲಾರ್ಥವ
ಸಲ್ಲಿಸುವ ಪೇಳಮ್ಮಯ್ಯ
ನಭಮಣಿಯಂದದಿ ಭೂಮಿಯಲ್ಲಿ
ರಾಜಿಸುವ ಪೇಳಮ್ಮಯ್ಯ
ಶುಭಗುಣನಿಧಿ ಶ್ರೀರಾಘವೇಂದ್ರ ಯತಿ
ಶುಭಗುಣನಿಧಿ ಶ್ರೀರಾಘವೇಂದ್ರ ಯತಿ
ಅಬುಜಭವಾಂಡದೊಳು ಪ್ರಬಲ ಕಣಮ್ಮ
ತು೦ಗಾತೀರದಿ ನಿ೦ತ
ಸುಯತಿವರನ್ಯಾರೇ ಪೇಳಮ್ಮಯ್ಯ
ತು೦ಗಾತೀರದಿ ನಿ೦ತ
ಸುಯತಿವರನ್ಯಾರೇ ಪೇಳಮ್ಮಯ್ಯ   
ಸ೦ಗೀತಪ್ರಿಯ ಮ೦ಗಳಸುಗುಣ ತರ೦ಗ
ಮುನಿಕುಲೋತ್ತು೦ಗ ಕಣಮ್ಮ
ತು೦ಗಾತೀರದಿ ನಿ೦ತ
ಸುಯತಿವರನ್ಯಾರೇ ಪೇಳಮ್ಮಯ್ಯ
ತು೦ಗಾತೀರದಿ ನಿ೦ತ
ಸುಯತಿವರನ್ಯಾರೇ ಪೇಳಮ್ಮಯ್ಯ
ಪೇಳಮ್ಮಯ್ಯ ಪೇಳಮ್ಮಯ್ಯ

Thunga theeradi nintha Karaoke 


No comments:

Post a Comment

Write Something about PK Music

new1

new2

new5