Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ಜನ್ಮ ನೀಡಿದ - Janma Needida Bhoothaayiya Song Lyrics in Kannada - Paduvaaralli Paandavru Kannada Movie


ಚಿತ್ರ: ಪಡುವಾರಳ್ಳಿ ಪಾಂಡವರು

ಜನ್ಮ ನೀಡಿದ ಭೂತಾಯಿಯ
ನಾ ಹೇಗೆ ತಾನೆ ತೊರೆಯಲಿ
ಅನ್ನ ನೀಡಿದ ಈ ಮಣ್ಣನು
ನಾ ಹೇಗೆ ತಾನೆ ಮರೆಯಲಿ
ಜನ್ಮ ನೀಡಿದ ಭೂತಾಯಿಯ
ನಾ ಹೇಗೆ ತಾನೆ ತೊರೆಯಲಿ
♫♫♫♫♫♫♫♫♫♫♫♫
ಈ ಗಾಳಿ ಈ ನೀರು ನನ್ನ ಒಡಲು
ಈ ಬೀದಿ ಈ ಮನೆಯೇ ನನ್ನ ತೊಟ್ಟಿಲು
ಈ ಗಾಳಿ ಈ ನೀರು ನನ್ನ ಒಡಲು
ಈ ಬೀದಿ ಈ ಮನೆಯೇ ನನ್ನ ತೊಟ್ಟಿಲು
ಈ ಮಾಚ ಈ ಕೆಂಚ ಎಲ್ಲಾ ಹೆಸರು

ಈ ಮಾಚ ಈ ಕೆಂಚ ಎಲ್ಲಾ ಹೆಸರು
ಎಂದೆಂದೂ ನನ್ನೆದೆಯ ಹಚ್ಚೆನೆಯ ಹಸಿರು
ಜನ್ಮ ನೀಡಿದ ಭೂತಾಯಿಯ
ನಾ ಹೇಗೆ ತಾನೆ ತೊರೆಯಲಿ
♫♫♫♫♫♫♫♫♫♫♫♫
ಈ ಗೌರಿ ಈ ಗಂಗೆ ಹಾಲ ಕುಡಿದೆ
ಓಡೋಡಿ ನಲಿದೆ ಊರೆಲ್ಲ ಕುಣಿದೆ
ಈ ಗೌರಿ ಈ ಗಂಗೆ ಹಾಲ ಕುಡಿದೆ
ಓಡೋಡಿ ನಲಿದೆ ಊರೆಲ್ಲ ಕುಣಿದೆ
ಕಾಳವ್ವ ರುಕ್ಮವ್ವ ನನ್ನ ಎತ್ತಾಡಿ
ಕಾಳವ್ವ ರುಕ್ಮವ್ವ ನನ್ನ ಎತ್ತಾಡಿ
ಹರಸಿದ ತಾಯಿಯರ ಹೇಗೆ ಮರೆಯಲಿ
ಜನ್ಮ ನೀಡಿದ ಭೂತಾಯಿಯ
ನಾ ಹೇಗೆ ತಾನೆ ತೊರೆಯಲಿ
♫♫♫♫♫♫♫♫♫♫♫♫
ಈ ಜೀವ ಈ ದೇಹ ಅರೆದು ಅರೆದು
ಹೊಸ ಆಸೆ ಹೊಸ ಹಾದಿ ಕನಸೆಂದು ತಿಳಿದು
ಬಾನತ್ತ ಭುವಿಯತ್ತ ಪೆಚ್ಚಾಗಿ ನೋಡುವ
ಈ ಜೀವ ಈ ದೇಹ ಅರೆದು ಅರೆದು
ಹೊಸ ಆಸೆ ಹೊಸ ಹಾದಿ ಕನಸೆಂದು ತಿಳಿದು
ಬಾನತ್ತ ಭುವಿಯತ್ತ ಪೆಚ್ಚಾಗಿ ನೋಡುವ
ಪಂಜರದ ಹಕ್ಕಿಗಳ ಹೇಗೆ ಮರೆಯಲಿ
ಜನ್ಮ ನೀಡಿದ ಭೂತಾಯಿಯ
ನಾ ಹೇಗೆ ತಾನೆ ತೊರೆಯಲಿ
ಅನ್ನ ನೀಡಿದ ಈ ಮಣ್ಣನು
ನಾ ಹೇಗೆ ತಾನೆ ಮರೆಯಲಿ
ನಾ ಹೇಗೆ ತಾನೆ ಮರೆಯಲಿ
ನಾ ಹೇಗೆ ತಾನೆ ಮರೆಯಲಿ

No comments:

Post a Comment

Write Something about PK Music

new1

new2

new5