ಮಲಯ ಮಾರುತ
ಮಲಯ ಮಾರುತ ಗಾನ
ಈ ಪ್ರಣಯ ಜೀವನ ಯಾನ
ಮಲಯ ಮಾರುತ ಗಾನ
ಈ ಪ್ರಣಯ ಜೀವನ ಯಾನ
ಆ... ಮಧುರ ತಾನ ಸುಖ ಸೋಪಾನ
ಆ... ಮಧುರ ತಾನ ಸುಖ ಸೋಪಾನ
ಸಂಗೀತ ನಾಟ್ಯದ ಮಿಲನ
ಮಲಯ ಮಾರುತ ಗಾನ
ಯೌವನ ತನುವಲಿ ಕುಣಿಯುತಲಿರಲು
ಹೃದಯದಿ ಸಾಗರದಂತೆ
ಯೌವನ ತನುವಲಿ ಕುಣಿಯುತಲಿರಲು
ಹೃದಯದಿ ಸಾಗರದಂತೆ
ಆ ಹೊಸ ಹೊಸ ಬಯಕೆಯ ಅಲೆಗಳು ಏಳುತ
ಹೊಸ ಹೊಸ ಬಯಕೆಯ ಅಲೆಗಳು ಏಳುತ
ತರುವುದು ಪ್ರಣಯದ ಚಿಂತೆ
ರತಿಯೆ ಎದುರಲಿ ನಿಂತಿರುವಂತೆ
ಸನಿಹಕೆ ಸರಸಕೆ ಬಾ ಎಂದಂತೆ
ಅಂದವೆ ಕಣ್ಣಲ್ಲಿ ಆನಂದವೆ ಬಾಳಲ್ಲಿ
ಮಲಯ ಮಾರುತ ಗಾನಾ
ಈ ಪ್ರಣಯ ಜೀವನ ಯಾನ
ಒಲವಿನ ಬಲೆಯಲಿ ಸೆರೆಯಾಗಿರಲು
ಮೌನವು ಸಂಗೀತದಂತೆ
ಸ ರಿ ಗ ಮಾ ಮ ಮ ಗ
ಮ ಪ ದ ನೀ ನಿ ನಿ ದ
ಪ ದ ನಿ ಸಾ ಸ ಸ ನಿ
ದ ನಿ ಸ ರೀ ರಿ ರಿ ಸ
ನಿ ದ ಪ ದ ಪ ಮ ಗ ರಿ
ರಿ ಗ ಮ ಪ ದ ನಿ ಸ
ರಿ ಗ ಮ ಪ ದ ನಿ ಸ
ಸ ನಿ ದ ನಿ ದ ಪ ದ ನಿ ಸ
ಒಲವಿನ ಬಲೆಯಲಿ ಸೆರೆಯಾಗಿರಲು
ಮೌನವು ಸಂಗೀತದಂತೆ
ಮೇಘವು ಸುರಿಸುವ ಮಳೆ ನೀರೆಲ್ಲ
ಪನ್ನೀರಿನ ಹನಿ ಹನಿಯಂತೆ
ಕಾಮನ ಬಿಲ್ಲೆ ಬಳಿ ಕರೆದಂತೆ
ಪ್ರೇಮದ ಎಲ್ಲೆಯ ಪೂಜಿಸಿದಂತೆ
ಅಂದವೆ ಕಣ್ಣಲ್ಲಿ ಆನಂದವೆ ಬಾಳಲ್ಲಿ
ಮಲಯ ಮಾರುತ ಗಾನಾ
ಈ ಪ್ರಣಯ ಜೀವನ ಯಾನ
ಮನಸಿಜ ಮನದಲಿ ಆಡುತಲಿರಲು
ಸೂರ್ಯನು ಚಂದಿರನಂತೆ
ಗಾಳಿಗೆ ಆಡುವ ಹಸುರೆಲೆ ಎಲ್ಲ
ಅರಳಿದ ಕುಸುಮಗಳಂತೇ
ಮನಸಿಜ ಮನದಲಿ ಆಡುತಲಿರಲು
ಸೂರ್ಯನು ಚಂದಿರನಂತೆ
ಗಾಳಿಗೆ ಆಡುವ ಹಸುರೆಲೆ ಎಲ್ಲ
ಅರಳಿದ ಕುಸುಮಗಳಂತೇ
ಜಗವೇ ಸುಂದರ ಹೂಬನದಂತೆ
ಸುಖವೇ ಎಲ್ಲೆಡೆ ತುಂಬಿರುವಂತೆ
ಅಂದವೆ ಕಣ್ಣಲ್ಲಿ ಆನಂದವೆ ಬಾಳಲ್ಲಿ
ಮಲಯ ಮಾರುತ ಗಾನ
ಈ ಪ್ರಣಯ ಜೀವನ ಯಾನ
ಆ ಮಧುರ ತಾನ ಸುಖ ಸೋಪಾನ
ಸಂಗೀತ ನಾಟ್ಯದ ಮಿಲನ
ಮಲಯ ಮಾರುತ ಗಾನ
No comments:
Post a Comment
Write Something about PK Music