Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ಪ್ರೇಮದ ಹೂಗಾರ - Premada hoogaara Song Lyrics in Kannada - Chikkejamanru Kannada Movie

ಚಿತ್ರ: ಚಿಕ್ಕೆಜಮಾನ್ರು

ಗಾಯಕ: ಎಸ್ ಪಿ ಬಿ

ಪ್ರೇಮದ ಹೂಗಾರ
ಪ್ರೇಮದ ಹೂಗಾರ
ಪ್ರೇಮದ ಹೂಗಾರ ಹಾಡುಗಾರ
ಹೂ ನೀಡುತ್ತಾನೆ ಮುಳ್ಳು ಬೇಡುತ್ತಾನೆ
ಬೆಲ್ಲದ ಬಣಗಾರ ಹಾಡುಗಾರ
ಸಿಹಿ ನೀಡುತ್ತಾನೆ ಕಹಿ ಕೇಳುತ್ತಾನೆ
ಮಣ್ಣಿನ ಮಮಕಾರ ಕಂಪಿರುವ
ಮಾನದ ಮಣಿಹಾರ ಹೊಂದಿರುವ
ಭಾವಜೀವ
ಪ್ರೇಮದ ಹೂಗಾರ ಹಾಡುಗಾರ
ಹೂ ನೀಡುತ್ತಾನೆ ಮುಳ್ಳು ಬೇಡುತ್ತಾನೆ
♫♫♫♫♫♫♫♫♫♫♫♫

ಗಂಧದ ಕೊರಡಾಗಿ ಸ್ವಂತಕೆ ಬರಡಾಗಿ
ನೋವಿನಲೂ ತೇಯುವುದು ಒಡಲು
ಗಂಗೆಯು ತಾನಾಗಿ ನೀರಿಗೆ ಎರವಾಗಿ
ಸೇರುತಿದೆ ಕಂಬನಿಯ ಕಡಲು
ಕರುಣೆಯಾ ಕುಂಬಾರ
ಕರುಣೆಯಾ ಕುಂಬಾರ ಹಾಡುಗಾರ
ಮಣ್ಣು ಬೇಡುತ್ತಾನೆ ಕೊಡ ನೀಡುತ್ತಾನೆ
ಮಮತೆಯಾ ಕಲೆಗಾರ ಹಾಡುಗಾರ
ಮನೆ ಮಾಡುತ್ತಾನೆ ಹೊರ ಹೋಗುತ್ತಾನೆ
ಗೋವಿನ ಹಾಲಂತ ಮನಸಿರುವ
ಕೂಸಿನ ಜೇನಂತ ಮಾತಿರುವ
ಭಾವಜೀವ
ಪ್ರೇಮದ ಹೂಗಾರ ಹಾಡುಗಾರ
ಹೂ ನೀಡುತ್ತಾನೆ ಮುಳ್ಳು ಬೇಡುತ್ತಾನೆ
♫♫♫♫♫♫♫♫♫♫♫♫
ನಿತ್ಯವೂ ತಾನುರಿದು ಲೋಕಕೆ ದಿನಗರೆದು
ಎಚ್ಚರಿಸೋ ಸೂರ್ಯನಿಗೆ ನಿದ್ದೆಯಿಲ್ಲ
ರಾತ್ರಿಗೆ ತಾನುಳಿದು ತಾಪಕೆ ತಂಪೆರೆದು
ಸಂಚರಿಸೊ ಚಂದ್ರನಿಗೆ ಸ್ವಂತವಿಲ್ಲ
ಊರಿನ ಗೆಣೆಕಾರ

ಊರಿನ ಗೆಣೆಕಾರ ಹಾಡುಗಾರ
ಕಾಪಾಡುತ್ತಾನೆ ಕಡೆಯಾಗುತ್ತಾನೆ
ಸತ್ಯದ ಹರಿಕಾರ ಹಾಡುಗಾರ
ಹೋರಾಡುತ್ತಾನೆ ಒಂಟಿಯಾಗುತ್ತಾನೆ

ಮಣ್ಣಿನ ಮಮಕಾರ ಕಂಪಿರುವ
ಮಾನದ ಮಣಿಹಾರ ಹೊಂದಿರುವ
ಭಾವಜೀವ
ಪ್ರೇಮದ ಹೂಗಾರ ಹಾಡುಗಾರ
ಹೂ ನೀಡುತ್ತಾನೆ ಮುಳ್ಳು ಬೇಡುತ್ತಾನೆ

No comments:

Post a Comment

Write Something about PK Music

new1

new2

new5