Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ಆಸೆಗಳ ಲೋಕದಲಿ - Aasegla Lokadali Song Lyrics in Kannada - Kavya Kannada Movie

ಸಂಗೀತ: ಸಾಧು ಕೋಕಿಲ

ಗಾಯಕ: ಡಾ ರಾಜ್ ಕುಮಾರ್

......ಹೋ...
......ಹೋ...
...ಆಆ.............

ಆಸೆಗಳ ಲೋಕದಲಿ
ಕತೆಗಳ ಬರೆವಂಥ
ಜೀವನದ ಪುಟಗಳಲಿ
ವ್ಯಥೆಗಳು ಬೆರೆತಂಥ
ಬದುಕೆ ಒಂದು ಕಾವ್ಯಾ...
ಆಸೆಗಳ ಲೋಕದಲಿ
ಕತೆಗಳ ಬರೆವಂಥ
ಜೀವನದ ಪುಟಗಳಲಿ
ವ್ಯಥೆಗಳು ಬೆರೆತಂಥ

♫♫♫♫♫♫♫♫♫♫♫♫

ಸೋತಾಗಲೆ ಒಬ್ಬರು ಇಲ್ಲಿ
ಇನ್ನೊಬ್ಬರು ಗೆಲ್ಲುವರಲ್ಲಿ
ಇದೆ ಯೋಗ ಇದೆ ಭಾಗ್ಯ ಎನುವಂತೆ
ಕೈಗೂಡದು ಆಸೆಗಳೆಲ್ಲ
ಹಣ್ಣಾಗದು ಹೂಗಳು ಎಲ್ಲ
ಇದೆ ಸತ್ಯ ದಿನ ನಿತ್ಯ ಸುಳಿವಂತೆ
ಸುಳಿಗಳ ನಡುವಿನ
ಬದುಕೆ ಒಂದು ಕಾವ್ಯ
ಆಸೆಗಳ ಲೋಕದಲಿ
ಕತೆಗಳ ಬರೆವಂಥ
ಜೀವನದ ಪುಟಗಳಲಿ
ವ್ಯಥೆಗಳು ಬೆರೆತಂಥ
♫♫♫♫♫♫♫♫♫♫♫♫
ಒಂದೆ ನದಿಯ ಎರಡು ತೀರ
ಎಂದೆಂದಿಗು ದೂರ ದೂರ
ಇದೆ ಲೋಕ ಇದೆ ಶೋಕ ಎನುವಂತೆ
ಲೋಕದಿ ಸ್ನೇಹದ ನಂಟು
ಬರಿ ಭ್ರಾಂತಿಯ ಕನ್ನಡಿ ಗಂಟು
ಇದೆ ಮೋಹ ಇದೆ ದಾಹ ಕೊಡುವಂತೆ
ದುಗುಡದ ಪಯಣವೆ
ಬದುಕೆ ಒಂದು ಕಾವ್ಯಾ
ಆಸೆಗಳ ಲೋಕದಲಿ
ಕತೆಗಳ ಬರೆವಂಥ
ಜೀವನದ ಪುಟಗಳಲಿ
ವ್ಯಥೆಗಳು ಬೆರೆತಂಥ
ಬದುಕೆ ಒಂದು ಕಾವ್ಯಾ........
..........
.........



Asegla Lokadali Song Lyrics

No comments:

Post a Comment

Write Something about PK Music

new1

new2

new5