ಚಿತ್ರ: ಕುಂತೀಪುತ್ರ
ಈ ಪ್ರೇಮ... ಮರೆಯದಾ
ಮನಸಿನಾ ಸಂಗಮ
ಕಾವೇರಿ... ಕಡಲನೂ
ಬೆರೆಯುವಾ ಸಂಭ್ರಮಾ
ಹಸಿರು ಗಿರಿಗಳೆಲ್ಲವೂ
ಒಲವ ಗೀತೆ ಕೇಳಲಿ
ದಿನವು ಚೈತ್ರ ಮೇಳವೆ
ನಗುವ ನಮ್ಮ ಬಾಳಲಿ
ಗಗನ ಆಣೆ ಭುವನ ಆಣೆ
ಬಿಡಿಸಲಾರದನುಬಂಧಾ
ಈ ಪ್ರೇಮ... ಮರೆಯದಾ
ಮನಸಿನಾ ಸಂಗಮ
ಈ ಪ್ರೇಮ...
♫♫♫♫♫♫♫♫♫♫♫♫
ಪ್ರೇಮ ವೀಣೆ ಮೀಟಿದಾ
ನಾದ ಗಂಗೆಯೋ
ವೇದ ನಾದ ತುಂಬಿದಾ
ಪ್ರೇಮ ದೈವವೋ
ಗಾಳಿ ನೀರು ಭೂಮಿಯೇ
ಸಾಕ್ಷಿ ಎನ್ನುವೇ
ನೂರು ಜನ್ಮ ಬಂದರೂ
ನಿನ್ನ ಸೇರುವೇ
ಅಂತರಂಗವೇ... ತುಂಬಿಬಂದಿದೇ...
ನಿನ್ನ ಮಾತಿಗೇ... ಶರಣು ಎಂದಿದೇ...
ಒಲವೇ ನೀನು ನಲಿವಾ ಜೇನು
ಸುಖವಾ ಪಡೆವೆ ಬಾಳಿಗೆ
ಈ ಪ್ರೇಮ... ಮರೆಯದಾ
ಮನಸಿನಾ ಸಂಗಮ
ಈ ಪ್ರೇಮ...
♫♫♫♫♫♫♫♫♫♫♫♫
ದೇಹ ದೂರ ವಾದರೇ
ನೋವೆ ಈ ದಿನಾ
ನೀನು ಇಲ್ಲ ವಾದರೇ
ಸಾವೇ ಆ ಕ್ಷಣ
ಸಾವೇ ದೂರ ನಿಲ್ಲು ನೀ
ಎಂದೂ ಕೂಗುವೆ
ನಿನ್ನ ಜೀವದಲ್ಲಿ ನಾ
ಸೇರಿ ಹೋಗುವೆ
ಅರೆ ಗಳಿಗೆ ಅಗಲಿರೇನೂ
ಕನಸಲ್ಲಿಯೂ ಕೈ ಬಿಡೆನೂ
ಮಧುರಾ ನಮ್ಮ ಸುಖದ ಗಾನಾ
ಮರೆಯೆ ನಾನು ಬಾಳಲಿ
ಈ ಪ್ರೇಮ ಮರೆಯದಾ
ಮನಸಿನಾ ಸಂಗಮ
ಕಾವೇರಿ... ಕಡಲನೂ
ಬೆರೆಯುವಾ ಸಂಭ್ರಮಾ
ಹಸಿರು ಗಿರಿಗಳೆಲ್ಲವೂ
ಒಲವ ಗೀತೆ ಕೇಳಲಿ.
ದಿನವು ಚೈತ್ರ ಮೇಳವೆ
ನಗುವ ನಮ್ಮ ಬಾಳಲಿ
ಗಗನ ಆಣೆ ಭುವನ ಆಣೆ
ಬಿಡಿಸಲಾರದನುಬಂಧ
ಈ ಪ್ರೇಮ ಮರೆಯದಾ
ಮನಸಿನಾ ಸಂಗಮ
ಈ ಪ್ರೇಮ
No comments:
Post a Comment
Write Something about PK Music