Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ಹುಡುಗರು ತುಂಬಾ ಒಳ್ಳೇವ್ರು - Hudugaru Tumba Ollevru Lyrics in Kannada - Chaithra Kotoor | Anand Audio | Kannada New Album


♪ Album: Hudugaru Tumba Ollevru ♪ Director: Chaithra Kotoor ♪ Producer: Chaithra Kotoor ♪ Lyrics-Music-Vocals- Performed By: Chaithra Kotoor ♪ Starcast: Chaithra Kotoor ♪ Song: Hudugaru Tumba Ollevru Title Song ♪ Singer: Chaithra Kotoor, Shwetha Prabhu

ಹುಡುಗರು ತುಂಬಾ ಒಳ್ಳೇವ್ರು

ಟೈಮ್ ಬೇಕು ಒಂಚೂರು

ಇಷ್ಟ ಆದ್ರೆ ಬಿಡದೋರು

ಕಷ್ಟ ಆದ್ರೆ ಕರಗೋರು

ಮಾತಿನ ಮೇಲೆ ನಿಲ್ಲೋರು

ನಿಯತ್ತಿಂದ ದುಡಿಯೋರು

ಲವ್ ಆದಾಗ ಕುಣಿಯೋರು

ಬ್ರೇಕ್ ಅಪ್ ಆದಾಗ ನರಳೋರು

 

ಒಳ್ಳೆ ಹುಡುಗರ ಬುದ್ದಿ ನಿಂಗೆ ಗೊತ್ತೇ ಇಲ್ವೇನೆ

ಅನ್ಯಾಯ ಅನ್ನೋ ಮಾತು ಅವರ ಹಿಸ್ಟರಿಲೇ ಇಲ್ವೇ

ತಳಕು ಬಳಕು ಅಂದ ಚಂದ ಎಷ್ಟು ನೋಡ್ತಾರೆ

ನಿನ್ನ ಪ್ರೀತಿ ಸತ್ಯಗಿದ್ರೆ ಹೇಗಿದ್ರೂ ಬರ್ತಾರೆ

ನೀನು ಅವನ ಹುಡುಗಿ ಅಂತ ಫಿಕ್ಸ್ ಆದ್ಮೇಲೆ

ಜಗತ್ತೇ ತಿರುಗಿ ಬರಲಿ ಮಾಡ್ತಾನೆ ಕಮಲೆ

ನಿನ್ನ ಲವ್ ಅಲ್ಲಿ ಮಾಡ್ಕೋಬೇಡ ಚೊಂಬು

ನೀನು ಸ್ವಲ್ಪ ಅವನ ನಂಬು ನಂಬು ನಂಬು

 

ಚಟ ಇದೆ ಅಂತ ಅವನಿಗೆ ಕಂಪ್ಲೇಂಟ್ ಮಾಡಬೇಡ್ವೆ

ನಿನ್ನ ಹಿಂದೆ ಬಿದ್ದು ಪ್ರೀತ್ಸೋದು ಚಟ ಅಲ್ವೇನೆ

ಗೇಮ್ ಆಟ್ಕೊಂಡು ಕೂರ್ತಾನೆ ಅಂತ ಕೊರಗಬೇಡವ್ವೆ

ನಿನ್ನ ಫೀಲಿಂಗ್ಸ್ ಜೊತೆ ಆಡೋದಕ್ಕಿಂತ ಬೆಸ್ಟ್ ಅಲ್ವೇನೆ

ಕೇಳ್ತನಲ್ಲ ನಿನ್ನ ಮಾತನ್ನ

ನೀನೆಷ್ಟು ಅವನ ಮಾತ ಕೇಳ್ತೀಯ

ಎಂತಾದ್ರು ಕೇಳಿದೆನವ್ವಾ ಹೆಂಗಿದಿಯಪ್ನ ಹುಡುಗ ಅಂತ

ನನಗೆ ಕಷ್ಟ ಅಯ್ತೆ ಅಂತ ಹೇಳಿ ನೋಡು

ಇರೋದಿಲ್ಲ ಚೂರು ಗೋಳು

ಮಾತಿಲ್ದೆ ಮಾಡಾಕಿದ್ದು ತಿಂದು ಹೋಗಲ್ವೇ

ಅಂತ ವರ ಸಿಗೋದು ನಿನ್ನ ಪುಣ್ಯ ಅಲ್ವೇ

 

ನಾವು ಹಂಗೆ ಹಿಂಗೆ ಅಂತ ಸುಮ್ನೆ ಹೇಳ್ತಾರೆ ಅನ್ನಿಸಬಹುದು

ಗಾಗಲ್ಸ್ ಹಾಕೊಂಡು ಕರ್ಚೀಫ್ ಕಟ್ಕೊಂಡು ಬೀದಿ ಸುತ್ತಬಹುದು

ಅವನು ಹೇಳೋದು ನಿಜನ ಸುಳ್ಳ ಅಂತ ಕನ್ಫ್ಯೂಸ್ ಆಗಬಹುದು

ಓವರ್ ಆಕ್ಟ್ ಮಾಡೋ ದೊಡ್ಡ ರೀಲ್ ಮಾಸ್ಟರ್ ಅನ್ನಿಸಬಹುದು

ಇವ್ನಿಗ್ ಯಾಕ್ ಶೋಕಿ ಅಂತ ನಿಂಗೆ ಉರಿಬೋದು

ಬಾಯಿ ಬಿಟ್ಟರೆ ಬರೀ ಬಾಲ್ಡಪ್ ಅಂತ ಅನ್ಸಬಹುದು

ಆದ್ರೆ ಅವನ ಲೈಫಿಗೆ ಅವನೆ ಹೀರೋ ಅಲ್ವೆನೆ

ಕೊಡಲಿ ಬಿಡೆ ಬಿಲ್ಡಪ್ ಕೊಡಲಿ ಬಿಡೆ

ಬಿಲ್ಡಪ್ ಕೊಟ್ಕೊಂಡು ಅವನು ಹೀರೋ ಆಗಲಿ ಬಿಡೆ

 

ನಿನ್ನಿಷ್ಟದ ಬಗ್ಗೆ ಯೋಚನೆ ಮಾಡದೆ ಇರಬಹುದು

ಆದ್ರೆ ನಿನಗಿಂತ ನಿನ್ನ ಹೆಚ್ಚು ಹಚ್ಕೊಂಡಿರಬಹುದು

ಹಠ ಮಾಡದೆ ಮುಂದೆ ಸಾಗು ಒಳ್ಳೆಯವನು ಸಿಕ್ಕರೆ

ನೀನು ಬಾಗು ಬಾಗು ಬಾಗು ಬಾಗೆಲೇ

ಕೇಳ್ತಾರೆ ಎಲ್ಲಾ ಹುಡುಗೀರು ನಾನು ಹೆಚ್ಚ ನಿಮ್ಮ ತಾಯಿ ಹೆಚ್ಚ

ನಮ್ ಹುಡುಗ ಹೇಳ್ತಾನೆ ಇಬ್ಬರೂ ಹೆಚ್ಚು ಹಿಡಿಸಬೇಡ್ವೆ ಹುಚ್ಚು

ಅಕ್ಕ ತಂಗಿ ಬೇಕು ತಾಯಿ ಬೇಕು ನಿನ್ನಂಗೆ ಅವನಿಗೆ ಎಲ್ಲರೂ ಬೇಕು

ಮನೆ ಮಠ ಅಂತ ಕಟ್ಟೋಕೆ ಒದ್ದಾಡ್ತಾನೆ

ಹೆಂಡ್ತಿ ಮಕ್ಕಳು ಅಂತ ಜೀವ ಸವಿಸುತ್ತಾನೆ

ನಿನ್ನ ಬಾಡಿಗಾರ್ಡ್ ಪ್ರೊಟೆಕ್ಟರ್ ಕೇರ್ ಟೇಕರ್

ಲೈಫ್ ಮೇಕರ್ ಮೋಸ್ಟ್ ಆಫ್ ದ ಟೈಮ್

ನಿನ್ನ ಮುಖದಲ್ಲಿ ನಗು ಮೂಡಿಸೋ ಜೋಕರ್

ಹುಡುಗರಿಲ್ದೆ ಹುಡುಗಿರಿಲ್ಲ

ಹುಡುಗಿರಿಲ್ದೆ ಹುಡುಗರಿಲ್ಲ

ತಿಳ್ಕೊಂಡ್ರೆ ಸಾಕು ಇದು ಬದುಕೆಲ್ಲಾ ಸಕ್ಕರೆ ಬೆಲ್ಲ

 

ಹಳೆದೆಲ್ಲಾ ಕ್ಯಾರೀ ಮಾಡಬೇಡ

ಹಿಂದಿಂದು ತಗಿಯಬೇಡ

ಬಿಟ್ಟಾಕು ಬಿಟ್ಟಾಕು ಬಿಟ್ಟಾಕಿ ಮುಂದೆ ಸಾಗು

ಹುಡುಗರಂದ್ರೆ ಗೊತ್ತಲ್ವಾ ನೋ ಕಂಪ್ಯಾರಿಸನ್

ದೇ ಆಲ್ವೇಸ್ ಟ್ರೈಡ್ ದ ರೂಲ್ಸ್ ಇನ್ವೆನ್ಶನ್

 

ಹುಡುಗರು ತುಂಬಾ ಒಳ್ಳೇವ್ರು

ಟೈಮ್ ಬೇಕು ಒಂಚೂರು

ಹೆಂಡ್ತೀನ ದೇವ್ರು ಅನ್ನೋರು

ಮಕ್ಕಳನ್ನು ಆಡಿಸಿ ನಗಿಸೋರು

ಹುಟ್ತನೆ ಹೀರೋ ಆದವರು

ಹೀರೋಯಿನ್ ನಾ ಕಾಯೋರು

ಸೃಷ್ಠಿಕರ್ತರೂ ಇವರೇನೆ

ದೃಷ್ಟಿ ತೆಗೆದು ಬಿಡಲೇನೆ

No comments:

Post a Comment

Write Something about PK Music

new1

new2

new5