Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ಗುಟುಕು ನಮ್ಮ ಬಾಳು - Gutuku Namma Baalu Lyrics in Kannada - Vijay Prakash - ALL OK


Singers: Vijay Prakash and Alok (ALL OK)
MUSIC: Lovv Pran Mehta
Lyrics: Kumar Datt


ಗುಟುಕು ನಮ್ಮ ಬಾಳು

ಗಳಿಗೆಗೊಂದು ಗೋಳು

ತಿರುಗೋ ಭೂಮಿಲಿ ತಿರುವು ನೂರಿದೆ

ಪಾಪದ ಬಡ್ಡಿ ಪುಣ್ಯದ ಅಸಲು

ಹಣೆಯ ಪುಸ್ತಕದಲ್ಲಿ

ಬುಡುಗಾಸು ಬಿಡದೆ ಲೆಕ್ಕವ ಇಡುತ

ಕುಳಿತಾನೊಬ್ಬ ಮ್ಯಾಲಿ

ಪಾಪದ ಬಡ್ಡಿ ಪುಣ್ಯದ ಅಸಲು

ಹಣೆಯ ಪುಸ್ತಕದಲ್ಲಿ

ಬುಡುಗಾಸು ಬಿಡದೆ ಲೆಕ್ಕವ ಇಡುತ

ಕುಳಿತಾನೊಬ್ಬ ಮ್ಯಾಲಿ

 

ಗುಟುಕು ನಮ್ಮ ಬಾಳು

ಪಾಪ ಮಾಡಿ ಯಾತ್ರೆ ಮಾಡು

ಪುಣ್ಯ ಬರಲಿ ಅಂತ

ಶಿವನು ಕೂಡ ಹಿಂಗೇ ಹೆದರಿ

ಸುಡುಗಾಡ್ನಲ್ಲಿ ಕುಂತ

ಬಂದು ಹೋಗೋ ಮೂರು ದಿನ್ ದಲ್ಲಿ

ಮೂರು ಬಿಟ್ರೆ ಹೆಂಗೆ

ಬಂಧು ಕೂಡ ಬೈತಾರ್ ಬಂದು

ಸುಮ್ನೆ ಕೂತ್ರೆ ಹಿಂಗೇ

ಆರು ಮೂರು ಸೈಟು ನಿಂದು

ವಾಸ್ತು ನೋಡೋವ್ರ್ಯಾರು

ಯಾರೇ ಸಾಯಲಿ ಮೂರು ದಿನ

ಹೆಚ್ಚು ಅತ್ತವರ್ಯಾರು

ಬದುಕೇ ಆಟ ಸೋಲು ಗೆಲುವು

ಎಲ್ಲರಿಗು ಸಹಜ

ಆಟದಲ್ಲಿ ಆಯ್ಕೆಯಾದೆ ಪುಣ್ಯ

ನಿಂದು ಮನುಜ

 

ಕಾಲಕ್ಕೆ ತೋರಿ ಕೈಯ

ನಿಲ್ಸೋ ತಾಕತ್ತು ಯಾರಿಗೆ

ಕೇಳ್ತೀನಿ ಸಿಗಲಿ ದೇವರು

ಬಂದ್ರೆ ನಮ್ ಊರಿಗೆ

ಆಸೆಗೆ ಇಲ್ಲ ಬೇಲಿ

ನ್ಯಾಯಕ್ಕೆ ಇಲ್ಲಾ ಕೂಲಿ

ಪಾಪದ ಪಬ್ಲಿಕ್ ಜಾಸ್ತಿ

ಬೈಯೋಣ ಯಾರಿಗೆ

ಪಾಪದ ಬಡ್ಡಿ ಪುಣ್ಯದ ಅಸಲು

ಹಣೆಯ ಪುಸ್ತಕದಲ್ಲಿ

ಬುಡುಗಾಸು ಬಿಡದೆ ಲೆಕ್ಕವ ಇಡುತ

ಕುಳಿತಾನೊಬ್ಬ ಮ್ಯಾಲಿ

ಪಾಪದ ಬಡ್ಡಿ ಪುಣ್ಯದ ಅಸಲು

ಹಣೆಯ ಪುಸ್ತಕದಲ್ಲಿ

ಬುಡುಗಾಸು ಬಿಡದೆ ಲೆಕ್ಕವ ಇಡುತ

ಕುಳಿತಾನೊಬ್ಬ ಮ್ಯಾಲಿ

ಗುಟುಕು ನಮ್ಮ ಬಾಳು

 

ಹೆಂಡ್ತಿ ಮಕ್ಳು ಹಾಯಾಗಿರ್ಲಿ

ದುಡಿದು ದುಡಿದು ಸಾಯ್ಲಿ

ದುಡ್ಡಿಗಿಂತ ದೊಡ್ಡೋರ್ಯಾರು

ದುಡ್ಡೇ ತಂದೆ ತಾಯಿ

ನೀನು ಸತ್ರೂ ಸ್ವರ್ಗ ಸೇರೋ

ಆಸೆ ಸಾಯಾಕಿಲ್ಲ

ಭೂಮಿಯಲ್ಲೇ ಸ್ವರ್ಗ ಉಂಟು

ನೀನು ಹುಡುಕಲೇ ಇಲ್ಲ

ಜೀವನ ಒಂದು ಮಂಗನ ಆಟ

ಮೇಲೆ ಕೆಳ್ಗೆ ಜಿಗಿತಾ

ಹೆಣ್ಣು ಗಂಡು ಸೇರಿಕೊಂಡರೆ

ಅದುವೇ ಕರಡಿ ಕುಣಿತ

ದೇವ್ರು ಕೊಟ್ಟ ಬಾಡ್ಗೆ ಜೀವನ

ಬೇಕಾಬಿಟ್ಟಿ ಎಲ್ಲ

ತಗ್ಗಿ ಬಗ್ಗಿ ಬಾಳೋ ಮಗನೆ

ಬಾಡ್ಗೆ ಕಟ್ಟೇ ಇಲ್ಲ

ಬಾಡ್ಗೆ ಕಟ್ಟೇ ಇಲ್ಲ

ಕಾಸಿದ್ರೆ ನೀನೇ ಹೀರೋ

ಇರದಿದ್ರೆ ಸೈಡಿಗೆ ಬಾರೋ

ಬದುಕೊಂದು ಬಣ್ಣದ ಆಟ ಪರದೆ

ಬೀಳೋ ತನಕ

ಸತ್ಯಕ್ಕೆ ನೋ ಗ್ಯಾರಂಟಿ ಸುಳ್ಳಿಗೆ

ಫುಲ್ ವಾರಂಟಿ

ಜೀವ್ನಾನೆ ಕಳ್ಳರ ಸಂತೆ

ತಂಬು ಕೀಳೋ ತನಕ

ಪಾಪದ ಬಡ್ಡಿ ಪುಣ್ಯದ ಅಸಲು

ಹಣೆಯ ಪುಸ್ತಕದಲ್ಲಿ

ಬುಡುಗಾಸು ಬಿಡದೆ ಲೆಕ್ಕವ ಇಡುತ

ಕುಳಿತಾನೊಬ್ಬ ಮ್ಯಾಲಿ

ಪಾಪದ ಬಡ್ಡಿ ಪುಣ್ಯದ ಅಸಲು

ಹಣೆಯ ಪುಸ್ತಕದಲ್ಲಿ

ಬುಡುಗಾಸು ಬಿಡದೆ ಲೆಕ್ಕವ ಇಡುತ

ಕುಳಿತಾನೊಬ್ಬ ಮ್ಯಾಲಿ

ಗುಟುಕು ನಮ್ಮ ಬಾಳು

ಗಳಿಗೆಗೊಂದು ಗೋಳು

ತಿರುಗೋ ಭೂಮಿಲಿ ತಿರುವು ನೂರಿದೆ

ಗುಟುಕು ನಮ್ಮ ಬಾಳು

No comments:

Post a Comment

Write Something about PK Music

new1

new2

new5