Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ಈ ಸಂಜೆ ಏಕೆ ಜಾರುತಿದೆ - Ee Sanje eke Jaarutide Lyrics - RangiTaranga - Nirup Bhandari


Song: Ee Sanje Album/Movie: RangiTaranga Artist Name: Nirup Bhandari, Radhika Chethan, Others Singer: Abhay Jodhpurkar, Gokul Abhishek, Monisha Music Director: Anup Bhandari Lyricist: Anup Bhandari Music Label : Lahari Music

ಈ ಸಂಜೆ ಏಕೆ ಜಾರುತಿದೆ, ಸದ್ದಿಲ್ಲದಂತೆ ಸಾಗುತಿದೆ
ಬೆಳಕ ಸೆರೆಯ ತೊರೆದು
ಈ ಸಂಜೆ ಏಕೆ ಜಾರುತಿದೆ
ನೆರಳನೆ...  ಅರಿಯದ...
ಅಪರಿಚಿತ...  ದಾರಿಯಲಿ...
ಇರುಳಿನ... ಸನಿಹಕೆ...
ಈ ಸಂಜೆ ಏಕೆ ಜಾರುತಿದೆ

ಕಾರ್ಮೋಡ ಮಡಿಲಲ್ಲಿ ಹಸಿ ಮಲಗಿಸಲು
ಶಶಿ ಇನ್ನೂ ಬರಲಿಲ್ಲ ಭುವಿ ಬೆಳಗಿಸಲು
ಸೂರ್ಯನು ಅರಳುವವರೆಗೆ
ಬೆಳಕನೆ ಕಾಣದ ಧರೆಗೆ
ವಿಹಾರಿಸೊ... ಈ ಹಂಬಲದೊಂದಿಗೆ...
ಹತ್ತಿರ ತೀರವ ಸೇರಿ, ಕತ್ತಲೆಯ ತೇರನ್ನೇರಿ
ಬೀಸುವ ಗಾಳಿಯ ಜೊತೆಗೆ
ಈ ಸಂಜೆ ಏಕೆ ಜಾರುತಿದೆ

ಮುಸುಕನ್ನು ತೆರೆದಾಗ ಬರೋ ನಸುಕಿನಲಿ
ನಸುಕುಂಟು ಜೋಪಾನ ಕಳ್ನುಸುಕಿನಲಿ
ಸೆಳೆಯುವ ನೆನಪಿನ ಇರುಳು
ಹೋದರೆ ಶಾಶ್ವತ ಇರುಳು
ಈ ಮಾತಿನ... ತಿರುಳನು ಅರಿಯದೆ...
ಮುಂಗುರುಳನ್ನು ಹಿಂದೆ ತಳ್ಳಿ, ನಿಲ್ಲದಂತ ವೇಗದಲ್ಲಿ
ಹಾರುವ ಹಕ್ಕಿಯ ಜೊತೆಗೆ
ಈ ಸಂಜೆ ಏಕೆ ಜಾರುತಿದೆ



Ee Sanje yeke Jaarutide Lyrics
E Sanje eke Jarutide Lyrics

No comments:

Post a Comment

Write Something about PK Music

new1

new2

new5