Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ಅಮ್ಮ ಎಂಬ ಮಾತಿಗಿಂತ - Amma emba Maathigintha Lyrics - Bhavageethe


Song: Amma Emba Maathigintha Album/Movie: Abhinandana Singer: Garthikere Raghanna Music Director: Garthikere Raghanna Lyricist: N.S. Lakshminarayana Bhatta Music Label : Lahari Music

ಅಮ್ಮ ಎಂಬ ಮಾತಿಗಿಂತ ಬೇರೆ ಮಂತ್ರ ಎಲ್ಲಿದೆ

ಅಮ್ಮ ಎಂಬ ಮಾತಿಗಿಂತ ಬೇರೆ ಮಂತ್ರ ಎಲ್ಲಿದೆ

ಅದು ನೀಡುವ ಶಾಂತಿ ಕಾಂತಿ

ಅದು ನೀಡುವ ಶಾಂತಿ ಕಾಂತಿ ಯಾವ ತಾರೆ ರವಿಗಿದೆ

ಅಮ್ಮ ಎಂಬ ಮಾತಿಗಿಂತ ಬೇರೆ ಮಂತ್ರ ಎಲ್ಲಿದೆ

 

ಹಾಲು ಕುಡಿಸಿ ಹೃದಯ ಬಿಡಿಸಿ ಪ್ರೀತಿ ಉಣಿಸಿ ಮನಸಿಗೆ

ಹಾಲು ಕುಡಿಸಿ ಹೃದಯ ಬಿಡಿಸಿ ಪ್ರೀತಿ ಉಣಿಸಿ ಮನಸಿಗೆ

ಬಾಳ ತೇದು ಮಕ್ಕಳಿಗೆ

ಬಾಳ ತೇದು ಮಕ್ಕಳಿಗೆ ಬೆರೆದಳಲ್ಲ ಕನಸಿಗೆ

 

ಅಮ್ಮ ಎಂಬ ಮಾತಿಗಿಂತ ಬೇರೆ ಮಂತ್ರ ಎಲ್ಲಿದೆ

 

ಗಾಳಿಯಲ್ಲಿ ನೀರಿನಲ್ಲಿ ಮಣ್ಣು ಹೂವು ಹಸಿರಲ್ಲಿ

ಗಾಳಿಯಲ್ಲಿ ನೀರಿನಲ್ಲಿ ಮಣ್ಣು ಹೂವು ಹಸಿರಲ್ಲಿ

ಕಾಣದೇನು ಕಾಯ್ವ ಬಿಂಬ

ಕಾಣದೇನು ಕಾಯ್ವ ಬಿಂಬ ಆಡುತಿರುವ ಉಸಿರಲ್ಲಿ

 

ಅಮ್ಮ ಎಂಬ ಮಾತಿಗಿಂತ ಬೇರೆ ಮಂತ್ರ ಎಲ್ಲಿದೆ

 

ಮರೆವೆ ಹೇಗೆ ಹೇಳೆ ತಾಯೆ ನಿನ್ನೀ ವಾತ್ಸಲ್ಯವ

ಮರೆವೆ ಹೇಗೆ ಹೇಳೆ ತಾಯೆ ನಿನ್ನೀ ವಾತ್ಸಲ್ಯವ

ಅರಿವೆ ಹೇಗೆ ಹೇಳೆ ತಾಯೆ

ಅರಿವೆ ಹೇಗೆ ಹೇಳೆ ತಾಯೆ ನಿನ್ನ ಪ್ರೀತಿ ಎಲ್ಲೆಯ

 

ಅಮ್ಮ ಎಂಬ ಮಾತಿಗಿಂತ ಬೇರೆ ಮಂತ್ರ ಎಲ್ಲಿದೆ

ಅದು ನೀಡುವ ಶಾಂತಿ ಕಾಂತಿ

ಅದು ನೀಡುವ ಶಾಂತಿ ಕಾಂತಿ ಯಾವ ತಾರೆ ರವಿಗಿದೆ

ಅಮ್ಮ ಎಂಬ ಮಾತಿಗಿಂತ ಬೇರೆ ಮಂತ್ರ ಎಲ್ಲಿದೆ

 


Amma yemba Mathigintha Lyrics

Amma emba Maatiginta Lyrics

No comments:

Post a Comment

Write Something about PK Music

new1

new2

new5