Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ಈತನೀಗ ವಾಸುದೇವನು - Eetaneega vaasudevanu Lyrics - Kanakadaasaru - Rajkumar - Bhaktha Kanakadaasa


Film: BHAKTHA KANAKADASA
Starcast: DR RAJKUMAR, KRISHNAKUMARI, UDAYAKUMAR
Music: M VENKATARAJU
Director: Y R SWAMY
Producer: D R NAIDU
Banner: SHAYMPRASAD MOVIES
Year: 1962


ಈತನೀಗ ವಾಸುದೇವನು ಲೋಕದೊಡೆಯ

ಈತನೀಗ ವಾಸುದೇವನು

ಈತನೀಗ ವಾಸುದೇವ

ಈ ಸಮಸ್ತ ಲೋಕದೊಡೆಯ

ಈತನೀಗ ವಾಸುದೇವ

ಈ ಸಮಸ್ತ ಲೋಕದೊಡೆಯ

ದಾಸಗೊಲಿದು ತೇರನೇರಿ

ತೇಜಿ ಪಿಡಿದು ನಡೆಸಿದಾತ

ಈತನೀಗ ವಾಸುದೇವನು

 

ಧನುಜೆಯಾಳ್ದ ಅಣ್ಣನಯ್ಯನ

ಪಿತನ ಮುಂದೆ ಕೌರವೇಂದ್ರನ

ಅನುಜೆಯಾಳಿದವನ ಶಿರವ ಕತ್ತರಿಸುತಾ

ಅನುಜೆಯಾಳಿದವನ ಬೆಂಕಿ ಮುಟ್ಟದಂತೆ ಕಾಯ್ದ

ಅನುಜೆಯಾಳಿದವನ ಬೆಂಕಿ ಮುಟ್ಟದಂತೆ ಕಾಯ್ದ ರುಕ್ಮನ

ಅನುಜೆಯಾಳಿದವನ ಮೂರ್ತಿಯನ್ನು ನೋಡಿರೋ

ಈತನೀಗ ವಾಸುದೇವನು

 

ಕ್ರೂರನಾದ ಫಣಿಪಬಾಣ

ತರಣಿಜನು ನಿರೀಕ್ಷಿಸಿಯಾಗ

ವೀರನೆಚ್ಚೆಯ ಸುಗೆ ಬಪ್ಪುದನ್ನು ಈಕ್ಷಿಸಿ

ಧಾರಿಣಿಯ ಪದದೊಳೌಕಿ

ಚರಣ ಭಜಕ ನರನ ಕಾಯ್ದ

ಧಾರಿಣಿಯ ಪದದೊಳೌಕಿ

ಚರಣ ಭಜಕ ನರನ ಕಾಯ್ದ

ಭಾರಕರ್ತನಾದ ದೇವ ಈತ ನೋಡಿರೋ

ಈತನೀಗ ವಾಸುದೇವನು

 

ವ್ಯೋಮಕೇಶ ನಿಪ್ಪ ದೆಸೆಯ

ಆ ಮಹಾ ಮಹಿಮೆಯುಳ್ಳ

ಸಾಮಜವನು ಏರಿ ಬರುವ ಶಕ್ತಿಯನೀಕ್ಷಿಸಿ

ಪ್ರೇಮದಿಂದ ಉರವನೊಡ್ಡಿ ದಿಂಗದಿಗನ ಕಾಯ್ದಾ

ಪ್ರೇಮದಿಂದ ಉರವನೊಡ್ಡಿ ದಿಂಗದಿಗನ ಕಾಯ್ದಾ

ಸಾರ್ವಭೌಮ ವಡದಾದಿ ಕೇಶವನ್ನ ನೋಡಿರೋ

 

ಈತನೀಗ ವಾಸುದೇವನು ಲೋಕದೊಡೆಯ

ಈತನೀಗ ಈತನೀಗ ವಾಸುದೇವನು

 

 


Eethaneega vasudevanu Lyrics

Eetaniga vaasudevanu Lyrics

No comments:

Post a Comment

Write Something about PK Music

new1

new2

new5