Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ಕೊಲ್ಲುವುದಾದರೆ ಕೊಂದುಬಿಡು - Kolluvudaadare kondubidu Lyrics - B R Lakshman Rao - Bhavageethe


ಸಾಹಿತ್ಯ:  ಬಿ ಆರ್ ಲಕ್ಷ್ಮಣರಾವ್

ಸಂಗೀತ, ಗಾಯನ :ಶಂಕರ್ ಶಾನಬಾಗ್

 

ಕೊಲ್ಲುವುದಾದರೆ ಕೊಂದುಬಿಡು ಹೀಗೆ ಕಾಡಬೇಡ

ಕೊಲ್ಲುವುದಾದರೆ ಕೊಂದುಬಿಡು ಹೀಗೆ ಕಾಡಬೇಡ

ಗಾಯಗೊಂಡಿರುವ ಹೃದಯವಿದು

ಗಾಯಗೊಂಡಿರುವ ಹೃದಯವಿದು ಚೆಲ್ಲಾಟವಾಡಬೇಡ

ಓ ಕೊಲ್ಲುವುದಾದರೆ ಕೊಂದುಬಿಡು ಹೀಗೆ ಕಾಡಬೇಡ

ಹೀಗೆ ಕಾಡಬೇಡ

 

ದುಂದಿಯು ಧಗ ಧಗ ಧಗ ಉರಿದಂತೆ ಅಂದು ನಿನ್ನ ಪ್ರೀತಿ

ದುಂದಿಯು ಧಗ ಧಗ ಧಗ ಉರಿದಂತೆ ಅಂದು ನಿನ್ನ ಪ್ರೀತಿ

ಹೆಪ್ಪುಗಟ್ಟಿರುವ ಹಿಮದಂತೆ ಇಂದು ನಿನ್ನ ರೀತಿ

ಓ ಹೆಪ್ಪುಗಟ್ಟಿರುವ ಹಿಮದಂತೆ ಇಂದು ನಿನ್ನ ರೀತಿ

 

ಓ ಕೊಲ್ಲುವುದಾದರೆ ಕೊಂದುಬಿಡು ಹೀಗೆ ಕಾಡಬೇಡ

ಹೀಗೆ ಕಾಡಬೇಡ

 

ಕಾಳಾಗದೆ ನಿನ್ನಾಳದ ಪ್ರೀತಿ ಆಯಿತೇ ಬರಿ ಜೊಳ್ಳು

ಕಾಳಾಗದೆ ನಿನ್ನಾಳದ ಪ್ರೀತಿ ಆಯಿತೇ ಬರಿ ಜೊಳ್ಳು

ಪ್ರೀತಿಯ ಸೇತುವೆಯಂತೆ ತೋರಿ

ಪ್ರೀತಿಯ ಸೇತುವೆಯಂತೆ ತೋರಿ ಮರೆಯಾಯಿತೆ ಮಳೆಬಿಲ್ಲು

 

ಓ ಕೊಲ್ಲುವುದಾದರೆ ಕೊಂದುಬಿಡು ಹೀಗೆ ಕಾಡಬೇಡ

ಹೀಗೆ ಕಾಡಬೇಡ

 

ಇನ್ನೂ ಏಕೀ ಮುಚ್ಚುಮರೆ ತೆರೆಗಳ ನೀ ಸರಿಸು

ಇನ್ನೂ ಏಕೀ ಮುಚ್ಚುಮರೆ ತೆರೆಗಳ ನೀ ಸರಿಸು

ತೊರೆಯುವುದಾದರೆ ತೊರೆದುಬಿಡು

ತೊರೆಯುವುದಾದರೆ ತೊರೆದುಬಿಡು ಇಲ್ಲವೇ ಸ್ವೀಕರಿಸು

 

ಗಾಯಗೊಂಡಿರುವ ಹೃದಯವಿದು

ಗಾಯಗೊಂಡಿರುವ ಹೃದಯವಿದು ಚೆಲ್ಲಾಟವಾಡಬೇಡ

ಕೊಲ್ಲುವುದಾದರೆ ಕೊಂದುಬಿಡು ಹೀಗೆ ಕಾಡಬೇಡ

ಕೊಲ್ಲುವುದಾದರೆ ಕೊಂದುಬಿಡು ಹೀಗೆ ಕಾಡಬೇಡ

ಗಾಯಗೊಂಡಿರುವ ಹೃದಯವಿದು ಚೆಲ್ಲಾಟವಾಡಬೇಡ

ಓ ಕೊಲ್ಲುವುದಾದರೆ ಕೊಂದುಬಿಡು ಹೀಗೆ ಕಾಡಬೇಡ

ಹೀಗೆ ಕಾಡಬೇಡ, ಹೀಗೆ ಕಾಡಬೇಡ

 

 Kolluvudadare kondu bidu Lyrics 

No comments:

Post a Comment

Write Something about PK Music

new1

new2

new5