Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ಮಾನವನೆದೆಯಲಿ - Maanavanedeyali Lyrics in Kannada - Shimoga Subbanna - N.S. Lakshminarayana Bhatt - Bhavageethe Lyrics


Song: Maanavanedeyali Album/Movie: Abhinandana Singer: Shimoga Subbanna Music Director: Garthikere Raghanna Lyricist: N.S. Lakshminarayana Bhatt Music Label : Lahari Music


ಮಾನವನೆದೆಯಲಿ ಆರದೆ ಉರಿಯಲಿ

ದೇವರು ಹಚ್ಚಿದ ದೀಪ

ಮಾನವನೆದೆಯಲಿ ಆರದೆ ಉರಿಯಲಿ

ದೇವರು ಹಚ್ಚಿದ ದೀಪ

ರೇಗುವ ದನಿಗೂ ರಾಗವು ಒಲಿಯಲಿ

ರೇಗುವ ದನಿಗೂ ರಾಗವು ಒಲಿಯಲಿ

ಮೂಡಲಿ ಮದುರಾಲಾಪ


ಮಾನವನೆದೆಯಲಿ ಆರದೆ ಉರಿಯಲಿ

ದೇವರು ಹಚ್ಚಿದ ದೀಪ


ಕೊಲ್ಲಲು ಎತ್ತಿದ ಕೈಗೂ ಗೊತ್ತಿದೆ

ಕೆನ್ನೆಯ ಸವರುವ ಪ್ರೀತಿ

ಕೊಲ್ಲಲು ಎತ್ತಿದ ಕೈಗೂ ಗೊತ್ತಿದೆ

ಕೆನ್ನೆಯ ಸವರುವ ಪ್ರೀತಿ

ಇರಿಯುವ ಮುಳ್ಳಿನ ನಡುವೆಯೇ ನಗುವುದು

ಇರಿಯುವ ಮುಳ್ಳಿನ ನಡುವೆಯೇ ನಗುವುದು

ಗುಲಾಬಿ ಹೂವಿನ ಪ್ರೀತಿ


ಮಾನವನೆದೆಯಲಿ ಆರದೆ ಉರಿಯಲಿ

ದೇವರು ಹಚ್ಚಿದ ದೀಪ


ಉರಿಯನು ಕಾರುವ ಆಗಸ ತಾರದೆ

ತಂಪನು ತೀಡುವ ಮಳೆಯ

ಉರಿಯನು ಕಾರುವ ಆಗಸ ತಾರದೆ

ತಂಪನು ತೀಡುವ ಮಳೆಯ

ಲಾವಾ ರಸವನು ಕಾರುವ ಧರೆಯೆ

ಲಾವಾ ರಸವನು ಕಾರುವ ಧರೆಯೆ

ನೀಡದೆ ಅನ್ನದ ಬೆಳೆಯ


ಮಾನವನೆದೆಯಲಿ ಆರದೆ ಉರಿಯಲಿ

ದೇವರು ಹಚ್ಚಿದ ದೀಪ


ಹಮ್ಮು ಬಿಮ್ಮುಗಳ ಮರಳುಗಾಡಿನಲಿ

ಎಲ್ಲೋ ತಣ್ಣನೆ ಚಿಲುಮೆ

ಹಮ್ಮು ಬಿಮ್ಮುಗಳ ಮರಳುಗಾಡಿನಲಿ

ಎಲ್ಲೋ ತಣ್ಣನೆ ಚಿಲುಮೆ

ತಾಪವ ಹರಿಸಿ ಕಾಪಾಡುವುದು

ತಾಪವ ಹರಿಸಿ ಕಾಪಾಡುವುದು

ಒಳಗೆ ಸಣ್ಣಗೆ ಒಲುಮೆ


ಮಾನವನೆದೆಯಲಿ ಆರದೆ ಉರಿಯಲಿ

ದೇವರು ಹಚ್ಚಿದ ದೀಪ

ರೇಗುವ ದನಿಗೂ ರಾಗವು ಒಲಿಯಲಿ

ರೇಗುವ ದನಿಗೂ ರಾಗವು ಒಲಿಯಲಿ

ಮೂಡಲಿ ಮದುರಾಲಾಪ

ಮಾನವನೆದೆಯಲಿ ಆರದೆ ಉರಿಯಲಿ

ದೇವರು ಹಚ್ಚಿದ ದೀಪ


Manavanedeyali song Lyrics 

Maanavanedeyali aarade uriyali Lyrics 

Manavanedeyali arade uriyali Lyrics 

No comments:

Post a Comment

Write Something about PK Music

new1

new2

new5