Film: |
Mungaru Male |
Music: |
ManoMurthy |
Dialogue: | Yogaraj Bhat |
Director: |
Yogaraj Bhat |
Artists: |
Golden Star Ganesh, Pooja Gandhi |
Year | 2006 |
ರೀ ಇಂತ ಒಳ್ಳೆ ಸಮಯದಲ್ಲಿ ಟೈಮ್ ಬಗ್ಗೆ ಯಾಕ್ರೀ ಮಾತಾಡ್ತೀರಾ..?
ರೀ ಟೈಮ್ ಅನ್ನೋದು ಪಕ್ಕ 420
ಟೈಮ್ ಇರೋದೆ ಕೈ ಕೊಡೋಕ್ರಿ
ನೋಡಿ ನೀವು ನನಗೆ ಸಿಕ್ಕೇ ಸಿಕ್ತೀರಾ
ನಮಗೂ ನಿಮಗೂ ಮದುವೆ ಆಗಿ
1 ಡಜನ್ ಮಕ್ಕಳಾಗೋ ಟೈಮ್ ಬರುತ್ತೆ ಅನ್ಕೊಂಡೆ
ಆದ್ರೆ ಆ ಟೈಮ್ ಬರ್ಲೇ ಇಲ್ಲ
ನೀವು ನನ್ನ ಗಟ್ಟಿ ಯಾಗಿ ತಬ್ಕೊಂಡು ಒಂದು ವರೆ ಲೀಟರ್ ಕಣ್ಣೀರ್ ಸುರ್ಸಿ
ನಿಮ್ ಬಿಟ್ಟು ಇನ್ಯಾರತ್ರಾನು ತಾಳಿ ಕಟ್ಟಿಸ್ಕೊಳಲ್ಲ
ನೀವೇ ನನಗೆ ಸರಿಯಾದ ಜೋಡಿ ಅಂತ ಹೇಳೋ ಟೈಮ್ ಬರುತ್ತೆ ಅನ್ಕೊಂಡೆ
ಆದ್ರೆ ಆ ಟೈಮ್ ಬರ್ಲೇ ಇಲ್ಲ
ಮನ್ಸಂಗೆ ಬ್ಯಾಡ್ ಟೈಮ್ ಶುರು ಆದ್ರೆ ತಲೆ ಕೆರ್ಕೊಂಡು
ತಲೆಲಿ ಗಾಯ ಆಗಿ ಗಾಯ ಕ್ಯಾನ್ಸರ್ ಆಗಿ, ಡಾಕ್ಟರ್ ತಲೆನೇ ತೆಗೀಬೇಕು ಅಂತಾರೆ ಅಂತದ್ರಲ್ಲಿ ನಾನು ಈ ದಿಲ್, ಹೃದಯ, ಹಾರ್ಟ್ ಅಂತಾರಲ್ಲ, ಅದಕ್ಕೆ ಕೈ ಹಾಕಿ ಪರ ಪರ ಅಂತ ಕೆರ್ಕೊಂಡು ಬಿಟ್ಟಿದೀನಿ ಕಣ್ರೀ.
ನಿಮ್ಮ ನಗು, ನಿಮ್ಮ ಬ್ಯೂಟೀ, ನಿಮ್ಮ ವಾಯ್ಸು, ನಿಮ್ಮ ಕೂದ್ಲು, ನಿಮ್ಮ ನೋಟ,
ಈ ಬಿಕನಾಸಿ ಮಳೆ, ನಿಮ್ಮ ಗೆಜ್ಜೆ ಸದ್ದು, ಆ ವಾಚು, ಆ ರಾಸ್ಕಲ್ ದೇವ್ದಾಸ್ ಗಂಟೆ ಸದ್ದು
ಎಲ್ಲ ಮಿಕ್ಸ್ ಆಗಿ ನಂ ಲೈಫ್ ಅಲ್ಲೇ ರಿಪೇರಿ ಮಾಡಕ್ಕಾಗದೆ ಇರೋ ಅಷ್ಟು ದೊಡ್ಡ ಗಾಯ ಮಾಡಿದೆ ಈ ದರಿದ್ರ ಹಾರ್ಟಲ್ಲಿ
ನಂಗೊತ್ತಾಗೋಯ್ತು ಕಣ್ರೀ ನೀವು ನನಗೆ ಸಿಗೋಲ್ಲ ಅಂತ
ಬಿಟ್ಕೊಟ್ಬಿಟ್ಟೆ ಕಣ್ರೀ
ನಿಮ್ಮನ್ನ ಪಟಾಯ್ಸಿ ಲೋಫರ್ ಅನಿಸ್ಕೊಳ್ಳೋದಕ್ಕಿಂತ
ಒಬ್ಬ ಡೀಸೆಂಟ್ ಹುಡುಗನಾಗಿ ಇದ್ಬಿಟ್ರೆ ಸಾಕು ಅನ್ನಿಸ್ಬಿಟ್ಟಿದೆ ಕಣ್ರೀ
ಆದ್ರೆ ಒಂದ್ ವಿಷ್ಯ ತಿಳ್ಕೊಳ್ಳಿ
ನನ್ನಷ್ಟು ನಿಮ್ಮನ್ನ ಇಷ್ಟ ಪಡೋರು ಈ ಭೂಮಿಲೆ ಯಾರು ಸಿಗಲ್ಲ ಕಣ್ರೀ
ಲೈಫಲ್ಲಿ ಈ ಲೆವಲ್ಲಿಗೆ ಕನ್ಫ್ಯೂಸ್ ಆಗಿದ್ದು ಇದೆ ಮೊದಲು ಎಲ್ಲ ನಿಮ್ ಆಶೀರ್ವಾದ.
ಥ್ಯಾಂಕ್ಸ್ ಕಣ್ರೀ ನಂದಿನಿ
ಪ್ರೀತಿ ವಿಷ್ಯದಲ್ಲಿ ನನ್ ಕಣ್ಣ್ ತೆರೆಸಿದ ದೇವತೆ ಕಣ್ರೀ ನೀವು
ಈ ಕಣ್ಣು ಕ್ಲೋಸ್ ಆಗಿ ಮಣ್ಣು ಸೇರಿದ್ ಮೇಲು,
ನಾನ್ ಈ ಉಪಕಾರನ ಮರ್ಯಲ್ಲ ರೀ
ನೀವ್ ಸಿಗಲ್ಲ ಅಂತ ಅಂತ ನಂಗೇನೂ ಬೀಜಾರ್ ಇಲ್ಲ ರೀ
ನಿಮ್ ಜೊತೆ ಕಳೆದೆನಲ್ಲ ಈ ನಾಲಕ್ ದಿವಸ
ಅಷ್ಟು ಸಾಕು ಕಣ್ರೀ....
ಆದನ್ನೇ ರೀವೈಂಡ್ ಮಾಡ್ಕೊಂಡು ಹೇಗೋ ಜೀವನ ತಳ್ಳಿ ಬಿಡ್ತೀನಿ
ತುಂಬಾ ನೋವಾಗುತ್ರಿ
ಆದ್ರೆ ಈ ನೋವಲ್ಲೂ ಒಂಥರಾ ಸುಖ ಇದೆ
ಸ್ವೀಟ್ ಪೇನ್ ಸ್ವೀಟ್ ಮೆಮೊರೀಸ್
ಜೊತೆಗೆ ಈ ಹಾಟ್ ಡ್ರಿಂಕ್ ಲೋಕಲ್
ನೀರ ಕೈ ಅಲ್ಲಿದ್ರೆ ದೂಸ್ರಾ ಮ್ಯಾಟರ್ ಇಲ್ಲ ಕಣ್ರೀ
No comments:
Post a Comment
Write Something about PK Music