Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ಯಾರಿಗೂ ಹೇಳೋನು ಬ್ಯಾಡ - Yaarigu Helonu beda Lyrics - Shimoga Subbanna - Mysore Ananthaswamy - Bhavageethe


Song: Yaarigu Helonu Byada Program: Helkollakondooru (Msil Vol.3) Singer: Shimoga Subbanna Music Director: Mysore Ananthaswamy Lyricist: Da. Ra. Bendre Music Label : Lahari Music


ಯಾರಿಗೂ ಹೇಳೋನು ಬ್ಯಾಡ

ಯಾರಿಗೂ ಹೇಳೋನು ಬ್ಯಾಡ

ಹಾರಗುದರಿ ಬೆನ್ನ ಏರಿ

ಸ್ವಾರರಾಗಿ ಕೂತು ಹಾಂಗ

ದೂರ ದೂರ ಹೋಗೋಣಾಂತ ಯಾರಿಗೂ

ಯಾರಿಗೂ ಹೇಳೋನು ಬ್ಯಾಡ

ಯಾರಿಗೂ ಯಾರಿಗೂ ಹೇಳೋನು ಬ್ಯಾಡ ಯಾರಿಗೂ

 

ಹಣ್ಣು ಹೂವು ತುಂಬಿದಂಥ

ನಿನ್ನ ತೋಟ ಸೇರಿ ಒಂದ

ತಿನ್ನೋಣಂತ ಅದರ ಹೆಸರ ಯಾರಿಗೂ

ಯಾರಿಗೂ ಹೇಳೋನು ಬ್ಯಾಡ ಯಾರಿಗೂ

ಯಾರಿಗೂ ಹೇಳೋನು ಬ್ಯಾಡ ಯಾರಿಗೂ

 

ಮಲ್ಲಿಗಿ ಮಂಟಪದಾಗ

ಗಲ್ಲ ಗಲ್ಲ ಹಚ್ಚಿ ಕೂತು

ಮೆಲ್ಲ ದನಿಲೆ ಹಾಡೋಣಾಂತ ಯಾರಿಗೂ

ಮಲ್ಲಿಗಿ ಮಂಟಪದಾಗ

ಗಲ್ಲ ಗಲ್ಲ ಹಚ್ಚಿ ಕೂತು

ಮೆಲ್ಲ ದನಿಲೆ ಹಾಡೋಣಾಂತ ಯಾರಿಗೂ

 

ಯಾರಿಗೂ ಹೇಳೋನು ಬ್ಯಾಡ ಯಾರಿಗೂ

ಯಾರಿಗೂ ಹೇಳೋನು ಬ್ಯಾಡ ಯಾರಿಗೂ

ನಿದ್ದೆ ಮಾಡಿ ಮೈಯ ಬಿಟ್ಟು

ಮುದ್ದು ಮಾಟದ ಕನಸಿನೂರಿಗೆ

ಸದ್ದು ಮಾಡದೆ ಸಾಗೋಣಾಂತ

 

ಯಾರಿಗೂ ಹೇಳೋನು ಬ್ಯಾಡ ಯಾರಿಗೂ

ಯಾರಿಗೂ ಹೇಳೋನು ಬ್ಯಾಡ ಯಾರಿಗೂ

 

ಹಾವಿನ ಮರಿಯಾಗಿ ಅಲ್ಲಿ

ನಾವೂನೂ ಹೆಡೆಯಾಡಿಸೋಣ

ಹೂವೆ ಹೂವು ಹಸಿರೇ ಹಸಿರು ಯಾರಿಗೂ

ಹೂವೆ ಹೂವು ಹಸಿರೆ ಹಸಿರು ಯಾರಿಗೂ

 

ಯಾರಿಗೂ ಹೇಳೋನು ಬ್ಯಾಡ ಯಾರಿಗೂ

ಯಾರಿಗೂ ಹೇಳೋನು ಬ್ಯಾಡ ಯಾರಿಗೂ

 

No comments:

Post a Comment

Write Something about PK Music

new1

new2

new5