ಯಾವುದೇ ವಾಹನದ ಚಾಲಕನಿಗೆ ಡ್ರೈವಿಂಗ್ ಲೈಸೆನ್ಸ್ ಇರಬೇಕೆಂಬುದು ಎಲ್ಲರಿಗೂ
ತಿಳಿದಿರುವ ವಿಷಯ ಆದರೆ ಡ್ರೈವಿಂಗ್ ಲೈಸೆನ್ಸ್ ಹೇಗೆ ಮಾಡಿಸಬೇಕು, ಎಲ್ಲಿ ಮಾಡಿಸಬೇಕು ಎಂಬುದು ಕೆಲವು
ಜನರಿಗೆ ತಿಳಿದಿರುವುದಿಲ್ಲ.
ಈ ಹಿಂದೆ ಕೆಲವಷ್ಟು ಜನರು ಮದ್ಯವರ್ತಿಗಳ ಮೂಲಕ ಅವರು ಕೇಳುವಷ್ಟು ದುಡ್ಡು
ಕೊಟ್ಟು ಡ್ರೈವಿಂಗ್ ಲೈಸೆನ್ಸ್ ಮಾಡಿಸಿಕೊಳ್ಳುತ್ತಿದ್ದರು ಹಾಗೂ ದಾಖಲೆಗಳ ಪರಿಶೀಲನೆಗೆ ಕಚೇರಿಗಳಿಗೆ
ಅಲೆಯಬೇಕಾಗಿತ್ತು, ಈಗ ಕಾಲ ಬದಲಾಗಿದೆ ಈಗ ಎಲ್ಲವೂ ಆನ್ ಲೈನ್ ಮೂಲಕವೇ ಅರ್ಜಿ ಸಲ್ಲಿಸಬಹುದು ಮತ್ತು
ಆನ್ಲೈನ್ ಮೂಲಕವೇ ದಾಖಲೆಗಳ ಪರಿಶೀಲನೆ ಮಾಡಿಸಬಹುದು.
ಬೇಕಾಗುವ
ದಾಖಲೆಗಳು
Age
Proof
Address
Proof
Form
A Declaration Form
Photo
Signature
ಡ್ರೈವಿಂಗ್
ಲೈಸೆನ್ಸ್ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ..?
ಮೊದಲು ರಸ್ತೆ ಸಾರಿಗೆಯ ವೆಬ್ ಸೈಟ್
https://parivahan.gov.in ನ್ನು
ತೆರೆದರೆ Government of India ದ MINISTRY
OF ROAD TRANSPORT & HIGHWAYS ವೆಬ್ ಸೈಟ್ Open ಆಗುತ್ತದೆ.
ನಂತರ “Drivers/ Learners License” ಕ್ಲಿಕ್ ಮಾಡಬೇಕು.
ಕ್ಲಿಕ್ ಮಾಡಿದ ನಂತರ PARIVAHAN
SARATHI ಪೇಜ್ ತೆರೆಯುತ್ತದೆ, ಅದರಲ್ಲಿ ನಿಮ್ಮ ರಾಜ್ಯವನ್ನು ಆಯ್ಕೆ ಮಾಡಿಕೊಳ್ಳಿ.
ನಿಮ್ಮ ಬಳಿ ಲರ್ನರ್ ಲೈಸೆನ್ಸ್ (LL)
ಇದ್ದಲ್ಲಿ Apply for Driving
License ಮೇಲೆ ಕ್ಲಿಕ್ ಮಾಡಿ.
ಇಲ್ಲವಾದಲ್ಲಿ Apply for
Learner License ಮೇಲೆ ಕ್ಲಿಕ್ ಮಾಡಿ.
ಅರ್ಜಿ ಸಲ್ಲಿಸುವಾಗ ಬರುವ ಹಂತಗಳನ್ನು
ತೋರಿಸಲಾಗುತ್ತದೆ, ನಂತರ Continue ಮೇಲೆ ಕ್ಲಿಕ್ ಮಾಡಿ
ನಂತರ Applicant does
not hold Driving/Learner License ಆಯ್ಕೆ ಮಾಡಿಕೊಂಡು Submit ಮೇಲೆ ಕ್ಲಿಕ್ ಮಾಡಿ
ನಂತರ ನಿಮ್ಮ ಮೊಬೈಲ್ ನಂಬರ್
ಕೇಳಲಾಗುತ್ತದೆ, ನಿಮ್ಮ ಮೊಬೈಲ್ ನಂಬರ್ ಹಾಕಿ, ನಿಮ್ಮ ನಂಬರ್ ಗೆ ಒಟಿಪಿ ಬರುತ್ತದೆ, ಓಟಿಪಿ
ಯನ್ನು ನಮೂದಿಸಿ Authenticate with Sarathi ಮೇಲೆ ಕ್ಲಿಕ್ ಮಾಡಿ
ನಂತರ ನಿಮ್ಮ ವಿವರಗಳನ್ನು ಸರಿಯಾಗಿ
ನಮೂದಿಸಿ Submit ಮೇಲೆ ಕ್ಲಿಕ್ ಮಾಡಿ
ನಂತರ ಒಂದು Application Refference Slip ಬರುತ್ತದೆ ಅದನ್ನು ಡೌನ್ ಲೋಡ್
ಮಾಡಿಕೊಂಡು ಪ್ರಿಂಟ್ ತೆಗೆದುಕೊಳ್ಳಬೇಕು, ನಂತರ Next ಮೇಲೆ ಕ್ಲಿಕ್ ಮಾಡಿ.
ನಂತರ Document Upload ಮಾಡಲು Upload
Documents ಆಯ್ಕೆ ಮಾಡಿಕೊಂಡು Proceed ಮೇಲೆ ಕ್ಲಿಕ್ ಮಾಡಿ..
ನಂತರ OK ಮೇಲೆ ಕ್ಲಿಕ್ ಮಾಡಿ.
ನಂತರ Documents Upload ಮಾಡಿ Next ಮೇಲೆ ಕ್ಲಿಕ್ ಮಾಡಿ
ನಂತರ Upload Photo and Signature ಆಯ್ಕೆ ಮಾಡಿಕೊಂಡು Proceed ಮೇಲೆ ಕ್ಲಿಕ್ ಮಾಡಿ
ನಂತರ ಫೋಟೊ ಮತ್ತು ಸಹಿ ಯನ್ನು ಅಪ್ಲೋಡ್
ಮಾಡಿ Save
Photo & Signature Image Files ಮೇಲೆ ಕ್ಲಿಕ್ ಮಾಡಿ, ನಂತರ Next ಮೇಲೆ ಕ್ಲಿಕ್ ಮಾಡಿ
ನಂತರ FEE PAYMENT ಆಯ್ಕೆ ಮಾಡಿಕೊಂಡು Proceed ಮೇಲೆ ಕ್ಲಿಕ್ ಮಾಡಿ
Payment ಮಾಡಿದ ನಂತರ LL STOCK Book
ನ್ನು ನಿಮಗೆ ಅನುಕೂಲವಾಗುವ ದಿನಾಂಕವನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ, ಮುಗಿದ ನಂತರ
Acknowledgement ಪ್ರಿಂಟ್ ತೆಗೆದುಕೊಳ್ಳಬೇಕು LL STOCK Book ಗೆ ಆಯ್ಕೆ ಮಾಡಿಕೊಂಡ
ದಿನಾಂಕದಂದು RTO ಆಫೀಸ್ ಗೆ ಹೋಗಿ LL ಟೆಸ್ಟ್ ನಲ್ಲಿ ಭಾಗವಹಿಸಬೇಕಾಗುತ್ತದೆ,
No comments:
Post a Comment
Write Something about PK Music