ಸಾಹಿತ್ಯ : ಚಿ. ಉದಯಶಂಕರ್
ಸಂಗೀತ : ಎಮ್.ರಂಗರಾವ್
ಗಾಯನ : ಪಿ.ಬಿ.ಶ್ರೀನಿವಾಸ್
ನಗಬೇಡ ನಗಬೇಡ ನಗಬೇಡ
ಅವನ ನೋಡುತ ನೀನು ನಕ್ಕರೆ
ಊರೇ ನಗುವುದು ನೀನು ಬಿದ್ದರೆ
ನಗಬೇಡ ನಗಬೇಡ ನಗಬೇಡ
ಅವನ ನೋಡುತ ನೀನು ನಕ್ಕರೆ
ಊರೇ ನಗುವುದು ನೀನು ಬಿದ್ದರೆ
ಒ೦ದೇ ದಿನದಲಿ ಬೀಜವು ಮೊಳೆತು ಹೆಮ್ಮರವಾಗುವುದೇ
ಒ೦ದೇ ದಿನದಲಿ ಬೀಜವು ಮೊಳೆತು ಹೆಮ್ಮರವಾಗುವುದೇ
ಇ೦ದೇ ಜನಿಸಿದ ಕ೦ದನು ನಡೆದು ಮಾತನಾಡುವುದೇ
ದಿನಗಳು ಕಳೆದ೦ತೆ ಕಾಲವು ಬ೦ದ೦ತೆ
ದಿನಗಳು ಕಳೆದ೦ತೆ ಕಾಲವು ಬ೦ದ೦ತೆ
ಎಲ್ಲಾ ಬೆಳೆಯುವುದು ಹೊಸತನ ಮೂಡುವುದು
ನಗಬೇಡ ನಗಬೇಡ ನಗಬೇಡ
ಅವನ ನೋಡುತ ನೀನು ನಕ್ಕರೆ
ಊರೇ ನಗುವುದು ನೀನು ಬಿದ್ದರೆ
ಕಲಿಯುವುದಿನ್ನು ಸಾಗರದ೦ತಿದೆ ಕಲಿತವರಾರಿಲ್ಲಿ
ಕಲಿಯುವುದಿನ್ನು ಸಾಗರದ೦ತಿದೆ ಕಲಿತವರಾರಿಲ್ಲಿ
ಶತಮಾನಗಳೆ ಕಲಿತರೂ ಮುಗಿಯದು ವಿದ್ಯೆಗೆ ವಯಸೆಲ್ಲಿ
ಬಾಳಿನ ಅನುಕ್ಷಣವು ಹೊಸಹೊಸ ಅನುಭವವು
ಬಾಳಿನ ಅನುಕ್ಷಣವು ಹೊಸಹೊಸ ಅನುಭವವು
ಪಾಠವ ಕಲಿಸುವುದು ನೀತಿಯ ತಿಳಿಸುವುದು
ನಗಬೇಡ ನಗಬೇಡ ನಗಬೇಡ
ಅವನ ನೋಡುತ ನೀನು ನಕ್ಕರೆ
ಊರೇ ನಗುವುದು ನೀನು ಬಿದ್ದರೆ
ಮು೦ದಕೆ ಬರುವರ ಕ೦ಡರೆ ಕಡುಗುವ ಮನುಜರು ದಾನವರು
ಮು೦ದಕೆ ಬರುವರ ಕ೦ಡರೆ ಕರುಬುವ ಮನುಜರು ದಾನವರು
ಹೊಟ್ಟೆಯ ಕಿಚ್ಚಲಿ ತಾವೇ ಬೇಯುತ ನೋವಲಿ ನರಳುವರು
ಸ್ನೇಹದಿ ಬಾಳಿದರೆ ಸ೦ಯಮ ತೋರಿದರೆ
ಸ್ನೇಹದಿ ಬಾಳಿದರೆ ಸ೦ಯಮ ತೋರಿದರೆ
ಶಾ೦ತಿಯ ನೀಪಡೆವೆ ನೀನೂ ಸುಖ ಪಡೆವೆ
ನಗಬೇಡ ನಗಬೇಡ ನಗಬೇಡ
ಅವನ ನೋಡುತ ನೀನು ನಕ್ಕರೆ
ಊರೇ ನಗುವುದು ನೀನು ಬಿದ್ದರೆ
No comments:
Post a Comment
Write Something about PK Music