ನಟ ಪುನೀತ್
ರಾಜ್ ಕುಮಾರ್ ಇನ್ನಿಲ್ಲ
ಕನ್ನಡದ ಪವರ್ ಸ್ಟಾರ್
ಎಂದೆ ಪ್ರಸಿದ್ದಿಯಾಗಿದ್ದ ಪುನೀತ್ ರಾಜ್ ಕುಮಾರ್ ಇಂದು ( ಅ.29,2021 ) 2: 30 ರ ವೇಳೆಗೆ ಹೃದಯಘಾತದಿಂದ
ಸಾವನ್ನಪ್ಪಿದ್ದಾರೆ. ಇಂದು ಬೆಳಿಗ್ಗೆ ತಮ್ಮ ಮನೆಯ ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿದ್ದ ವೇಳೆ ತೀವ್ರ
ಹೃದಯಘಾತವಾಗಿ ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ 11:30 ರ ವೇಳೆಗೆ ದಾಖಲಾಗಿದ್ದರು. ಸುಮಾರು
3 ಗಂಟೆಗಳ ಕಾಲ ಚಿಕಿತ್ಸೆಯನ್ನು ಪಡೆದು ಚಿಕಿತ್ಸೆ ಫಲಕಾರಿಯಾಗದೆ ಮರಣ ಹೊಂದಿದ್ದಾರೆ.
ವಿಕ್ರಂ ಆಸ್ಪತ್ರೆಯ ಬಳಿ ಸಾವಿರಾರು ಅಭಿಮಾನಿಗಳು
ತಮ್ಮ ನೆಚ್ಚಿನ ನಟ ಆರೋಗ್ಯವಾಗಿ ವಾಪಸ್ಸು ಬರಲಿ ಎಂದು ಬೆಳಿಗ್ಗೆಯಿಂದ ದೇವರಲ್ಲಿ ಪ್ರಾರ್ಥಸಿಕೊಂಡು
ವಿಕ್ರಂ ಆಸ್ಪತ್ರೆಯ ಮುಂದೆ ಕಾಯುತ್ತ ನಿಂತಿದ್ದರು, ಆದರೆ ಅಭಿಮಾನಿಗಳ ಕೂಗು ದೇವರಿಗೆ ಕೇಳಲಿಲ್ಲ,
ಪುನೀತ್ ರವರ ಸಾವಿನ ಸುದ್ದಿ ಕೇಳಿ ನೊಂದು ಕಣ್ಣೀರಿಡುತ್ತಿದ್ದಾರೆ.
ನಟ ಪುನೀತ್ ರವರು ಆಸ್ಪತ್ರೆಗೆ ದಾಖಲಾದ ವಿಷಯ ಮಾದ್ಯಮಗಳಲ್ಲಿ
ಪ್ರಸಾರವಾಗುತ್ತಿದ್ದಂತೆಯೇ ಚಿತ್ರರಂಗದ ಎಲ್ಲಾ ಕಲಾವಿದರು ಆಸ್ಪತ್ರೆಗೆ ಪುನೀತ್ ರವರನ್ನು ನೋಡಲು
ಧಾವಿಸಿ ಬಂದರು, ಆದರೆ ಪುನೀತ್ ರವರ ಸಾವಿನ ಸುದ್ದಿ ಮುಟ್ಟಿದ ಕೂಡಲೇ ಎಲ್ಲರ ಕಣ್ಣಲ್ಲೂ ಕಣ್ಣೀರು
ತುಂಬಿತ್ತು.
ಪುನೀತ್ ರಾಜ್ ಕುಮಾರ್
ರವರು ತಮ್ಮ ವ್ಯಕ್ತಿತ್ವದಿಂದ ಎಲ್ಲರ ಮೆಚ್ಚುಗೆ ಪಡೆದಿದ್ದರು, ಯಾರಿಗೂ ನೋವು ಮಾಡದ ವ್ಯಕ್ತಿ, ಹೊಸ
ಪ್ರತಿಭೆಗಳಿಗೆ ಬೆನ್ನು ತಟ್ಟಿ ಪ್ರೋತ್ಸಾಹ ನೀಡುತ್ತಿದ್ದ ಉತ್ಸಾಹಿ.
ಪುನೀತ್ ರಾಜ್ ಕುಮಾರ್ ರವರು ರಾಜಕೀಯ ವ್ಯಕ್ತಿಗಳಿಗೂ
ಕೂಡ ತುಂಬಾ ಹತ್ತಿರವಾಗಿದ್ದವರು, ಪುನೀತ್ ರವರ ಸಾವಿನ ಸುದ್ದಿ ಕೇಳಿ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್,
ಸಿ.ಎಂ ಬಸವರಾಜ ಬೊಮ್ಮಾಯಿ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.
ನಟ ಪುನೀತ್ ರವರ ಪಾರ್ಥೀವ
ಶರೀರವನ್ನು ಸದಾಶಿವನಗರದ ಅವರ ನಿವಾಸಕ್ಕೆ ಅಂತಿಮ ದರ್ಶನಕ್ಕಾಗಿ ಇಡಲಾಗಿದೆ.
_______________________________________
ಸಾವಿನಲ್ಲೂ ಸಾರ್ಥಕತೆ ಮೆರೆದ ಪುನೀತ್ ರಾಜ್ ಕುಮಾರ್.
ನಟ
ಸಾರ್ವಭೌಮ ಎಂದೆನಿಸಿಕೊಂಡ ಡಾ. ರಾಜ್ ಕುಮಾರ್ ತಮ್ಮ ಸಾವಿನ ಬಳಿಕ ಕಣ್ಣಿನ ದಾನ ಮಾಡಿ ಅಂಧರಿಗೆ ದೇವರಾಗಿದ್ದರು,
ರಾಜ್ ಕುಮಾರ್ ಬದುಕಿದ್ದಾಗಲು ಅಂಧರಿಗೆ ಕಣ್ಣಿನ ದಾನ ಮಾಡಿ ಎಂಬ ಸಂದೇಶವನ್ನು ಇಡೀ ನಾಡಿನ ಜನತೆಗೆ
ಸಂದೇಶವನ್ನು ನೀಡಿದ್ದರು.
ಈಗ ಅವರ ಪುತ್ರ ಪುನೀತ್
ರಾಜ್ ಕುಮಾರ್ ಬದುಕಿದ್ದಾಗಲೂ ಅಪ್ಪನ ದಾರಿಯಲ್ಲಿ ನಡೆದು ತೋರಿಸಿ, ತಮ್ಮ ಸಾವಿನಲ್ಲೂ ಸಾರ್ಥಕತೆ ಮೆರೆದು
ತೋರಿಸಿದ್ದಾರೆ. ತಮ್ಮ ಸಾವಿನ ಬಳಿಕ ತಮ್ಮ ಕಣ್ಣಗಳನ್ನು ದಾನ ಮಾಡಿ ಅಂಧರ ಪಾಲಿಗೆ ದೇವರೆನಿಸಿಕೊಂಡಿದ್ದಾರೆ
ಹಾಗೂ ತಮ್ಮ ಅಭಿಮಾನಿಗಳಿಗೆ ಆದರ್ಶವಾಗಿದ್ದಾರೆ.
_____________________________________________________
ಜನನ:
ಡಾ. ರಾಜ್ ಕುಮಾರ್ ಮತ್ತು
ಪಾರ್ವತಮ್ಮ ರವರ ಕಿರಿಯ ಪುತ್ರರಾಗಿ ಪುನೀತ್ ರಾಜ್ ಕುಮಾರ್ ರವರು ಮಾರ್ಚ್ 17 1975 ರಲ್ಲಿ ಚೆನ್ನೈನಲ್ಲಿ
ಜನಿಸಿದರು. ಇವರ ಹಿರಿಯ ಸಹೋದರರುಗಳಾದ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ರವರು ಕೂಡ ಕನ್ನಡ
ಚಿತ್ರರಂಗದ ಪ್ರಸಿದ್ಧ ನಾಯಕ ನಟರು.
_________________________________________
ಮರಣ:
ದಿನಾಂಕ 29-10-2021
ರಂದು ತಮ್ಮ 46 ನೇ ವಯಸ್ಸಿಗೆ ತೀವ್ರ ಹೃದಯಾಘಾತದಿಂದ ವಿಕ್ರಂ ಆಸ್ಪತ್ರೆಯಲ್ಲಿ ಮರಣ ಹೊಂದಿದರು.
_______________________________________
ಸಿನಿ ಪಯಣ:
ನಟ ಪುನೀತ್ ರಾಜ್ ಕುಮಾರ್
ರವರು ಬಾಲ ನಟನಾಗಿ ಹಲವು ಚಿತ್ರಗಳನ್ನು ಮಾಡಿ ಪ್ರೇಕ್ಷಕರ ಮೆಚ್ಚುಗೆ ಪಡೆದಿದ್ದರು, ತಮ್ಮ ಬಾಲ್ಯದಲ್ಲೇ
‘ಬೆಟ್ಟದ ಹೂವು’ ಚಿತ್ರದ ರಾಮುವಿನ ಪಾತ್ರಕ್ಕೆ
ರಾಷ್ಟ್ರ ಪ್ರಶಸ್ತಿ ಪಡೆದವರು.
ಅವರ ಬಾಲ್ಯದ ಚಿತ್ರಗಳು
ಇಂದಿಗೂ ಪ್ರೇಕ್ಷಕರಿಗೆ ಮನರಂಜಿಸುತ್ತವೆ.
ಚಿತ್ರಗಳು |
ಬಿಡುಗಡೆಯಾದ ವರ್ಷ |
ಪ್ರೇಮದ ಕಾಣಿಕೆ |
1976 |
ಸನಾದಿ ಅಪ್ಪಣ್ಣ |
1977 |
ಎರಡು ನಕ್ಷತ್ರಗಳು |
1983 |
ಬೆಟ್ಟದ ಹೂವು |
1985 |
ಚಲಿಸುವ ಮೋಡಗಳು |
1982 |
ಯಾರಿವನು |
1984 |
ಪರಶುರಾಮ |
1989 |
ಭಕ್ತ ಪ್ರಹ್ಲಾದ |
1983 |
ಭಾಗ್ಯವಂತ |
1981 |
ಹೊಸ ಬೆಳಕು |
1982 |
ನಂತರ ತಮ್ಮ ಸಿನಿಜೀವನವನ್ನು
ಮುಂದುವರೆಸಿ ನಾಯಕನಟನಾಗಿ ಮೊದಲ ಚಿತ್ರವಾದ ‘ಅಪ್ಪು’
(2002) ಚಿತ್ರದಲ್ಲಿ ನಟಿಸಿ ಅಭಿಮಾನಿಗಳ ಮನ ಗೆದ್ದರು. ಈ ಚಿತ್ರವು ಭರ್ಜರಿ ಯಶಸ್ಸನ್ನು ಕಂಡಿತು.
ಹೀಗೆ ಹಲವಾರು ಚಿತ್ರಗಳಲ್ಲಿ
ನಟಿಸಿ ಅಭಿಮಾನಿಗಳ ಮನಸ್ಸಲ್ಲಿ ಚಿರವಾಗಿದ್ದಾರೆ. ಅವರು ನಾಯಕನಟನಾಗಿ ಅಭಿನಯಿಸಿದ ಚಿತ್ರಗಳು ಕೆಳಗಿನಂತಿವೆ.
ಚಿತ್ರಗಳು |
ಬಿಡುಗಡೆಯಾದ ವರ್ಷ |
ಅಪ್ಪು |
2002 |
ಅಭಿ |
2003 |
ವೀರ ಕನ್ನಡಿಗ |
2004 |
ಮೌರ್ಯ |
2004 |
ಆಕಾಶ್ |
2005 |
ನಮ್ಮ ಬಸವ |
2005 |
ಅಜಯ್ |
2006 |
ಅರಸು |
2007 |
ಮಿಲನ |
2007 |
ಬಿಂದಾಸ್ |
2008 |
ವಂಶಿ |
2008 |
ರಾಜ್ |
2009 |
ರಾಮ್ |
2009 |
ಪೃಥ್ವಿ |
2010 |
ಜಾಕಿ |
2010 |
ಹುಡುಗರು |
2011 |
ಪರಮಾತ್ಮ |
2011 |
ಅಣ್ಣಬಾಂಡ್ |
2012 |
ಯಾರೇ ಕೂಗಾಡಲಿ |
2012 |
ನಿನ್ನಿಂದಲೇ |
2014 |
ಪವರ್ |
2014 |
ಮೈತ್ರಿ |
2015 |
ರಣ ವಿಕ್ರಮ |
2015 |
ಚಕ್ರವ್ಯೂಹ |
2015 |
ದೊಡ್ಮನೆ ಹುಡ್ಗ |
2016 |
ರಾಜಕುಮಾರ |
2017 |
ಅಂಜನಿಪುತ್ರ |
2017 |
ನಟಸಾರ್ವಭೌಮ |
2019 |
ಯುವರತ್ನ |
2021 |
ಜೇಮ್ಸ್ |
- |
ದ್ವಿತ್ವ |
- |
ನಾಯಕನಟರಲ್ಲದೇ ಕನ್ನಡದ
ಕಿರುತೆರೆಯ “ಕನ್ನಡದ ಕೋಟ್ಯಾಧಿಪತಿ”ಯ ಕಾರ್ಯಕ್ರಮದ ನಿರೂಪಣೆಯಲ್ಲೂ ಹೆಚ್ಚಿನ ಖ್ಯಾತಿಗಳಿಸಿದ್ದರು.
ಅಷ್ಟಲ್ಲದೇ ಹಲವು ಸಿನಿಮಾಗಳಲ್ಲಿ ಗಾಯಕರಾಗಿ, ನಿರ್ಮಾಪಕರಾಗಿ ಕನ್ನಡ ಚಿತ್ರರಂಗಕ್ಕೆ ಸೇವೆ ಸಲ್ಲಿಸಿದ್ದಾರೆ.
________________________________________________
ಸಾಂಸಾರಿಕ ಜೀವನ:
ಪುನೀತ್ ರಾಜ್ ಕುಮಾರ್
ರವರು ಸಿನಿಜೀವನವಲ್ಲದೇ ತಮ್ಮ ವೈಯಕ್ತಿಕ ಜೀವನವನ್ನೂ ಬಹಳ ಅಚ್ಚುಕಟ್ಟಾಗಿ ಯಾವುದೇ ರೀತಿಯ ಕಪ್ಪುಚುಕ್ಕೆಯನ್ನು
ಪಡೆಯದೇ ನಡೆಸಿದ್ದಾರೆ.
ತಮ್ಮ 24 ನೇ ವಯಸ್ಸಿನಲ್ಲಿ ಅಶ್ವಿನಿಯವರನ್ನು ಮದುವೆಯಾಗಿ, ಇಬ್ಬರು ಹೆಣ್ಣುಮಕ್ಕಳಾದ ಧೃತಿ ಮತ್ತು ವಂದಿತಾಗೆ ಪ್ರೀತಯ ತಂದೆಯಾಗಿದ್ದಾರೆ.
ಪ್ರಶಸ್ತಿಗಳು:
ನ್ಯಾಶನಲ್ ಫಿಲ್ಮ್ ಅವಾರ್ಡ್ಸ್
ವರ್ಷ |
ಚಿತ್ರ |
1985 |
ಬೆಟ್ಟದ ಹೂವು |
ಕರ್ನಾಟಕ ಸ್ಟೇಟ್ ಫಿಲ್ಮ್ ಅವಾರ್ಡ್ಸ್
ವರ್ಷ |
ಚಿತ್ರ |
ಪ್ರಶಸ್ತಿ |
1982-83 |
ಚಲಿಸುವ ಮೋಡಗಳು |
ಉತ್ತಮ ಬಾಲನಟ |
1983–84 |
ಎರಡು ನಕ್ಷತ್ರಗಳು |
ಉತ್ತಮ ಬಾಲನಟ |
2007–08 |
ಮಿಲನ |
ಬೆಸ್ಟ್ ಆಕ್ಟರ್ |
2010–11 |
ಜ್ಯಾಕೀ |
ಬೆಸ್ಟ್ ಆಕ್ಟರ್ |
ಸೌತ್ ಇಂಡಿಯನ್ ಇಂಟರ್‌ನ್ಯಾಶನಲ್ ಮೂವೀ ಅವಾರ್ಡ್ಸ್
ವರ್ಷ |
ಚಿತ್ರ |
ಪ್ರಶಸ್ತಿ |
2011 |
ಹುಡುಗರು |
ಬೆಸ್ಟ್ ಆಕ್ಟರ್ |
2012 |
ಅಣ್ಣಾ ಬಾಂಡ್ |
ಬೆಸ್ಟ್ ಆಕ್ಟರ್ |
2013 |
ಯಾರೇ ಕೂಗಾಡಲಿ |
ಯೂತ್ ಐಕಾನ್ ಆಫ್ ಸೌತ್ ಇಂಡಿಯನ್
ಸಿನಿಮಾ |
2016 |
ರಣ ವಿಕ್ರಮ |
ಬೆಸ್ಟ್ ಆಕ್ಟರ್ |
2017 |
ದೊಡ್ಡ್ಮನೆ ಹುಡ್ಗ |
ಬೆಸ್ಟ್ ಆಕ್ಟರ್ |
2018 |
ರಾಜಕುಮಾರ |
ಬೆಸ್ಟ್ ಆಕ್ಟರ್ |
2019 |
ನಟಸಾರ್ವಭೌಮ |
ಬೆಸ್ಟ್ ಆಕ್ಟರ್ |
ಫಿಲ್ಮ್ ಫೇರ್ ಅವಾರ್ಡ್ಸ್ ಸೌತ್
ವರ್ಷ |
ಚಿತ್ರ |
ಪ್ರಶಸ್ತಿ |
1985 |
ಬೆಟ್ಟದ ಹೂವು |
ಉತ್ತಮ ಬಾಲ್ಯ ನಟ |
2007 |
ಅರಸು |
ಬೆಸ್ಟ್ ಆಕ್ಟರ್ |
2011 |
ಹುಡುಗರು |
ಬೆಸ್ಟ್ ಆಕ್ಟರ್ |
2012 |
ಅಣ್ಣಾ ಬಾಂಡ್ |
ಬೆಸ್ಟ್ ಆಕ್ಟರ್ |
2014 |
ಪವರ್ |
ಬೆಸ್ಟ್ ಆಕ್ಟರ್ |
2015 |
ರಣ ವಿಕ್ರಮ |
ಬೆಸ್ಟ್ ಆಕ್ಟರ್ |
2016 |
ದೊಡ್ಡ್ಮನೆ ಹುಡ್ಗ |
ಬೆಸ್ಟ್ ಆಕ್ಟರ್ |
2017 |
ರಾಜಕುಮಾರ |
ಬೆಸ್ಟ್ ಆಕ್ಟರ್ |
ಅವರ ಸೇವೆಗಳು:
·
26 – ಅನಾಥಾಶ್ರಮ
·
45- ಉಚಿತ ಶಾಲೆ
·
16- ವೃದ್ಧಾಶ್ರಮ
·
19- ಗೋಶಾಲೆ
·
1800 ಮಕ್ಕಳ
ಸಂಪೂರ್ಣ ಉಚಿತ ಶಿಕ್ಷಣ
·
ಶಕ್ತಿಧಾಮ ಹೆಸರಿನಲ್ಲಿ
ಹೆಣ್ಣುಮಕ್ಕಳಿಗೆ ಶಿಕ್ಷಣ ವ್ಯವಸ್ಥೆ
No comments:
Post a Comment
Write Something about PK Music