Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

Govt Job Alert: SSC ನೇಮಕಾತಿ: 3261 ಹುದ್ದೆಗಳಿಗೆ ಅರ್ಜಿ ಆಹ್ವಾನ


Credits: News 18 Kannada
ಕೃಪೆ: ನ್ಯೂಸ್ 18 ಕನ್ನಡ

ಸ್ಟಾಫ್​ ಸೆಲೆಕ್ಷನ್​ ಕಮಿಷನ್ (Staff Selection Commission- SSC)​ ನಿಂದ ಸುಮಾರು 3261 ಉದ್ಯೋಗಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. 9ನೇ ಹಂತದ (Phase 9) ಉದ್ಯೋಗಗಳು ಖಾಲಿ ಇದ್ದು ಇದರಲ್ಲಿ ಕರ್ನಾಟಕ ಮತ್ತು ಕೇರಳ ವೃಂದದ (KKR) ಸುಮಾರು 117 ಹುದ್ದೆಗೆ ಕೂಡ ಆಯ್ಕೆ ಪ್ರಕ್ರಿಯೆಗೆ ಮುಂದಾಗಲಾಗಿದೆ. ಕೇಂದ್ರ ಸರ್ಕಾರದಲ್ಲಿ ಉದ್ಯೋಗ ಮಾಡುವ ಇಚ್ಛೆ ಹೊಂದಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಆಸಕ್ತ ಅಭ್ಯರ್ಥಿಗಳು ಆನ್ಲೈನ್​ ಮೂಲಕ ​ಅಕ್ಟೋಬರ್​ 25ರೊಳಗೆ ಅರ್ಜಿಯನ್ನು ಸಲ್ಲಿಸಬೇಕು

ಕೆಲಸ ನಿರ್ವಹಣೆ ಸ್ಥಳ: ಭಾರತದಾದ್ಯಂತ ಯಾವುದೇ ಸರ್ಕಾರಿ ಕಚೇರಿಯಲ್ಲಿ ಕೆಲಸ ನಿರ್ವಹಿಸಲು ಸಿದ್ಧರಿರಬೇಕು

ಯಾವ ಹುದ್ದೆಗೆ : 9ನೇ ಹಂತದ ಹುದ್ದೆ ( Phase 9)

ವೇತನ ಶ್ರೇಣಿ: ಎಸ್​ಎಸ್​ಸಿಯ ನಿಯಮಾವಳಿಯಂತೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ವೇತನ ನಿಗದಿ ಮಾಡಲಾಗುವುದು

ಕೆಲಸದ ವಿವರ : ಎಸ್​ಎಸ್​ಸಿಯಿಂದ 3261 ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದ್ದು, ಯಾವ ವೃಂದದಿಂದ ಎಷ್ಟು ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದ ಎಂಬ ಮಾಹಿತಿ ಕೆಳಗಿನಂತಿದೆ.

ಹುದ್ದೆ ಹೆಸರು ಹುದ್ದೆ ಸಂಖ್ಯೆ
SSC ER Region 800
SSC KKR Region (ಕರ್ನಾಟಕ-ಕೇರಳ ಪ್ರದೇಶ) 117
SSC NR Region 1159
SSC NWR Region 618
SSC SR Region 159
SSC WR Region 271

ವಿದ್ಯಾರ್ಹತೆ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10ನೇ ತರಗತಿ, ಪಿಯುಸಿ, ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು

ವಯೋಮಿತಿ: ಎಸ್​ಎಸ್​ಸಿ ನೇಮಕಾತಿ ಅನುಸಾರ ಅಭ್ಯರ್ಥಿಗಳು 18 ವರ್ಷ ಮೇಲ್ಪಟ್ಟು 30 ವರ್ಷದೊಳಗೆ ಇರಬೇಕು.

ವಯೋಮಿತಿ ಸಡಿಲಿಕೆ

ಒಬಿಸಿ ಅಭ್ಯರ್ಥಿಗಳಿಗೆ: 3 ವರ್ಷ

ಎಸ್​ಸಿ, ಎಸ್​ಟಿ ಅಭ್ಯರ್ಥಿಗಳಿಗೆ- 5 ವರ್ಷ

ಪಿಡಬ್ಲ್ಯೂಡಿ ಅಭ್ಯರ್ಥಿಗಳು- 10 ವರ್ಷ

ಪಿಡಬ್ಲ್ಯೂಡಿ ಜೊತೆಗೆ ಒಬಿಸಿ ಅಭ್ಯರ್ಥಿಗಳಿಗೆ 13 ವರ್ಷ ವಿನಾಯಿತಿ ನೀಡಲಾಗಿದೆ.

ಅರ್ಜಿ ಮೊತ್ತ: 

ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ -100 ರೂ

ಎಸ್​ಸಿ, ಎಸ್​​ಟಿ, ಪಿಡ್ಬ್ಯೂಡಿ, ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ

ಅರ್ಜಿ ಮೊತ್ತವನ್ನು ಅಭ್ಯರ್ಥಿಗಳು ಆನ್​ಲೈನ್​ ಅಥವಾ ಆಫ್​ಲೈನ್​ ಚಲನ್​ ಮೂಲಕ ಭರ್ತಿ ಮಾಡಬೇಕು

ಇದನ್ನು ಓದಿ: ಮುಂದಿನ ವರ್ಷದಿಂದ ಉದ್ಯೋಗಿಗಳಿಗೆ ದುಪ್ಪಟ್ಟು ಸಂಬಳ; ಯಾವ್ಯಾವ ಕಂಪನಿಗಳಲ್ಲಿ ಗೊತ್ತಾ!

ಆಯ್ಕೆ ವಿಧಾನ

ಕಂಪ್ಯೂಟರ್​ ಆಧಾರಿತ ಪರೀಕ್ಷೆ ನಡೆಯಲಿದೆ
ತಪ್ಪು ಉತ್ತರಕ್ಕೆ 0.50 ಅಂಕ ಕಡಿತ ಮಾಡಲಾಗುವುದು
ಟೈಪಿಂಗ್​, ಡಾಟಾ ಎಂಟ್ರಿ, ಕಂಪ್ಯೂಟರ್​ ಜ್ಞಾನ ಆಧಾರಿತ ಕೌಶಲ್ಯ ಪರೀಕ್ಷೆ ನಡೆಸಲಾಗುವುದು
ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಕೆ ಪ್ರಾರಂಭ: ಸೆಪ್ಟೆಂಬರ್​ 24 ರಿಂದ

ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ : ಅಕ್ಟೋಬರ್​ 25

ಅರ್ಜಿ ಶುಲ್ಕ ಪಾವತಿಸಲು ಕಡೆಯ ದಿನಾಂಕ ಅಕ್ಟೋಬರ್​ 28

ಎಸ್​ಎಸ್​ಸಿ ಹುದ್ದೆಗೆ ಹೊರಡಿಸಿರುವ ನೋಟಿಫಿಕೇಷನ್​ಗೆ ಇಲ್ಲಿ ಕ್ಲಿಕ್​ ಮಾಡಿ

ಆನ್​ಲೈನ್​ನಲ್ಲಿ ಅರ್ಜಿ ಭರ್ತಿ ಮಾಡಲು ಇಲ್ಲಿ ಕ್ಲಿಕ್​ ಮಾಡಿ

No comments:

Post a Comment

Write Something about PK Music

new1

new2

new5