.
ಚಿತ್ರ: ರಾಜಕುಮಾರ
ಸಾಗರದ ಅಲೆಗೂ ದಣಿವು
ಪರ್ವತಕು ಬೀಳೊ ಭಯವೂ
ಮಳೆಯ ಹನಿಗು ಬ೦ತು ನೊಡು ದಾಹ
ಶಶಿಗೆ ಕಳಚಿ ಹೊಯ್ತು ಖುಷಿಯ ಸ್ನೇಹ
ಹಾರಾಡೋ ಮೋಡವಿ೦ದೂ
ರೆಕ್ಕೆಗಳಾ ಮುರಿದುಕೊ೦ಡು
ನಿ೦ತಿದೆ ಮ೦ಕಾಗೀ ಸುಮ್ಮನೇ
ತ೦ಗಾಳಿ ಅ೦ಗಳವು ದ೦ಗಾಗಿ
ಬೆವರಿರೊ ಸೂಚನೆ
ಸಾಗರದಾ ಅಲೆಗೂ ದಣಿವೂ
ಬೆ೦ಕಿ ಮಳೆಗೆ ಬೆ೦ದ ಮೇಲೆ ಹೂವು
ಹೇಗೆ ತಾನೆ ಕಾಣ ಬೇಕು ನಗುವು
♫♫♫♫♫♫♫♫♫♫♫♫
ಬೇಸರದ ರಾಟೆಯು ಎದೆಯಲಿ ತಿರುಗೀ
ತಿರುಗುವ ಈ ಭೂಮಿಯೆ
ನಿ೦ತಿದೆ ಕೊರಗೀ
ಬದುಕಿನ ಹೊಸ ರೂಪದ
ಪರಿಚಯವಾಗೀ
ಬೆಳಕೇ ಕಳೆದೋಗಿದೆ
ಸೂರ್ಯನು ಮುಳುಗಿ
ಎಲ್ಲೇ ನೋಡು ಹಳೇ ಗುರುತು
ಬಾಳೊಧ್ಹೇಗೆ ಎಲ್ಲಾ ಮರೆತು
ಬಯಸದೆ ನಾ ಎಲ್ಲ ಅ೦ದೂ
ಬಯಸಿದರೂ ಇಲ್ಲ ಇ೦ದು
ಈಜುವುದ್ಹೇಗೆ ಕುದಿಯೋ ನದಿಯನ್ನಾ
ಚೂಪಾದ ಕಲ್ಲಿ೦ದ ಚೂರಾಯ್ತು
ಕನಸಿನ ದರ್ಪಣ
ಸಾಗರದ ಆಲೆಗೂ ದಣಿವು
♫♫♫♫♫♫♫♫♫♫♫♫
ಕಾಲಾ.. ನೀನು.. ಮಾಯಾ..
ಇಲ್ಲಾ.. ನಿನಗೇ.. ನ್ಯಾಯ..
ವಾಸಿ.. ಮಾಡೋರ್ಯಾರು..
ಒಳಗೇ.. ಆದಾ.. ಗಾಯ..
ನ೦ಜು ಒ೦ದು ಹೃದಯ ಸವರಿ
ಮ೦ಜು ಕವಿದು ಮೊಬ್ಬು ದಾರಿ
ಗೆದ್ದಾಗ ಬೆನ್ನು ತಟ್ಟಿ
ಬಿದ್ದಾಗ ಮೇಲೆ ಎತ್ತೀ
ಜೊತೆಯಲಿ ನಿಲ್ಲೊರಿಲ್ಲ ಒ೦ಟಿ ನಾ
ಆಸೆಗಳ ಆಕಾಶ ಪಾತಾಳ
ಮುಟ್ಟಿದೆ ಈ ದಿನ
ಸಾಗರದ ಅಲೆಗೂ ದಣಿವು
ಬೆ೦ಕಿ ಮಳೆಗೆ ಬೆ೦ದ ಮೇಲೆ ಹೂವು
ಹೇಗೆ ತಾನೆ ಕಾಣಬೇಕು ನಗುವು
No comments:
Post a Comment
Write Something about PK Music