ಆಆಆಆಆಆಆಆ
ಓ ಎನ್ನ
ದೇಶ ಬಾಂಧವರೇ..
ಉದ್ಘೋಷಿಸಿ
ನಾಡಿನ ಜಯವ
ಇದು ಶುಭದಿನವು
ನಮಗೆಲ್ಲಾ
ಹಾರಿಸಿ
ತ್ರಿವರ್ಣ ಧ್ವಜವ
ಅದೋ ಮರೆಯದಿರಿ
ಕಡೆಎಡೆಯೊಳು
ಯೋಧವರರು
ಪ್ರಾಣಾರ್ಪಿತರು
ಇನಿತಾದರೂ
ಸ್ಮರಿಸಿ ಅವರ
ಇನಿತಾದರೂ
ಸ್ಮರಿಸಿ ಅವರ
ಮರಳಿ
ಮನೆಗೆ ಬರದವರ
ಮರಳಿ
ಮನೆಗೆ ಬರದವರ
ಓ ಎನ್ನ
ದೇಶ ಬಾಂಧವರೇ
ಕಂಬನಿಗಳ
ನೆರಳ ಚಿಮ್ಮಿ
ಪ್ರಾಣಾಹುತಿ
ನೀಡಿದ ಅವರ
ಸಂಸ್ಮರಿಸಿರಿ
ಆ ಬಲಿದಾನ
ನೀವವರನು
ಮರೆಯಲು ಬರಲು
ಅದಕಾಗಿ
ಇದೋ ಈ ಕಥನ
ಪ್ರಾಣಾಹುತಿ
ನೀಡಿದ ಅವರ
ಸಂಸ್ಮರಿಸಿರಿ
ಆ ಬಲಿದಾನ
ಹಿಮಗಿರಿಯು
ಗಾಯಗೊಂಡಿರಲು
ಸ್ವಾತಂತ್ರ್ಯಕೆ
ಬಂತೋ ಎಡರು
ಉಸಿರಿರುವರೆ
ಕಾದುತ ಅವರು
ಉಸಿರಿರುವರೆ
ಕಾದುತ ಅವರು
ತಮ್ಮಯ
ಹೆಣ ತಾವ್ ಹಾಸಿಹರು
ಶಿಲೆ
ಎದೆಯನು ತಪ್ಪಿರೆ ಮೊಗವು
ಚಿರ ನಿದ್ರಿತಾಮರರು
ಅವರು
ಪ್ರಾಣಾಹುತಿ
ನೀಡಿದ ಅವರ
ಸಂಸ್ಮರಿಸಿರಿ
ಆ ಬಲಿದಾನ
ಇವ ಶಿಖ್ಖ
ಇವ ಜಾಟ ಮರಾಠ
ಇವ ಶಿಖ್ಖ
ಇವ ಜಾಟ ಮರಾಠ
ಇವ ಗೂರ್ಖ
ಮೇರ್ ಮದರಾಸಿ
ಇವ ಗೂರ್ಖ
ಮೇರ್ ಮದರಾಸಿ
ಗಡಿ ಎಡೆಯೊಳು
ಮಡಿವವರೆಲ್ಲಾ
ಅಡಿ ಎಡೆಯೊಳು
ಮಡಿವವರೆಲ್ಲಾ
ವರವಾಗಿ
ಭಾರತವಾಸಿ
ಹಿಮಗಿರಿಯೆಡೆ
ಸುರಿದಿಹ ರಕ್ತ
ಅದು ನಮ್ಮೀ
ಭಾರತ ರತ್ನ
ಪ್ರಾಣಾಹುತಿ
ನೀಡಿದ ಅವರ
ಸಂಸ್ಮರಿಸಿರಿ
ಆ ಬಲಿದಾನ
ನೆತ್ತರದಿ
ಸೆಡೆದರು ಕೂಡ
ಕೋವಿನೆತ್ತಿದ
ವೀರಥರ
ಕರೆಯಿತೋ
ಹತ್ತಾರು ಶಿರಗಳ
ಕೊನೆಯಲಿ
ಶೃತಿ ತಪ್ಪುತ ಉರುಳೆ
ಅಂತ್ಯ
ಸಮಯ ತಾ ಬಂತೋ
ಅಂತ್ಯ
ಸಮಯ ತಾ ಬಂತೋ
ನಡೆದರು
ನುಡಿಯುತಲಿ ಇಂತೋ
ಅಂತ್ಯ
ಸಮಯ ತಾ ಬಂತೋ
ನಡೆದರು
ನುಡಿಯುತಲಿ ಇಂತೋ
ಸುಖಿಯಾಗಿರಿ
ಪ್ರಿಯ ಬಾಂಧವರೇ
ಸುಖಿಯಾಗಿರಿ
ಪ್ರಿಯ ಬಾಂಧವರೇ
ಮರಳದ
ಪಯಣವು ಇನ್ನೆಮಗೆ
ಮರಳದ
ಪಯಣವು ಇನ್ನೆಮಗೆ
ಏನೆಂತೋ
ಮರಳರೋ ಅವರು
ಉಜ್ವಲ
ಅಭಿಮಾನದ ಸೊಡರು
ಪ್ರಾಣಾಹುತಿ
ನೀಡಿದ ಅವರ
ಸಂಸ್ಮರಿಸಿರಿ
ಆ ಬಲಿದಾನ
ನೀವವರನು
ಮರೆಯಲು ಬರಲು
ಅದಕಾಗಿ
ಇದೋ ಈ ಕಥನ
ಪ್ರಾಣಾಹುತಿ
ನೀಡಿದ ಅವರ
ಸಂಸ್ಮರಿಸಿರಿ
ಆ ಬಲಿದಾನ
ಜಯ ಹಿಂದ್
ಜಯ ಹಿಂದ್
ಜಯ ಹಿಂದ್
ಜಯ ಹಿಂದ್
ಜಯ ಹಿಂದ್
ಜಯ ಹಿಂದ್
ಜಯ ಹಿಂದ್..
No comments:
Post a Comment
Write Something about PK Music