ಸಾಹಿತ್ಯ:- ವಾಣಿ ಪರ್ಕಳ
ಸಂಗೀತ:- ರಾಘವೇಂದ್ರ ಬೀಜಾಡಿ
ಆರ್ಚೆಸ್ಟೇಷನ್:- ಸಮೀರ್ ರಾವ್
ಗಾಯಕ :- ರಾಘವೇಂದ್ರ ಬೀಜಾಡಿ
ಹೃದಯವೇ ಹಗುರಾಗು
ನಗುಮೊಗದ ಮಗುವಾಗು
ನೋವೆಲ್ಲವನು ನುಡಿದು
ಖಾಲಿಯಾಗು
ಹೃದಯವೇ ಹಗುರಾಗು
ನಗುಮೊಗದ ಮಗುವಾಗು
ನೋವೆಲ್ಲವನು ನುಡಿದು
ಖಾಲಿಯಾಗು
ಜೀವವೇ ಹೊಸದಾಗು
ಸತ್ಯ ಚಿಂತಕನಾಗು
ಜೀವವೇ ಹೊಸದಾಗು
ಸತ್ಯ ಚಿಂತಕನಾಗು
ಚಿಂತೆಗಳ ತೊರೆದು ನೀ
ನಿತ್ಯ ಸುಖಿಯಾಗು
ಚಿಂತೆಗಳ ತೊರೆದು ನೀ
ನಿತ್ಯ ಸುಖಿಯಾಗು
ಹೃದಯವೇ ಹಗುರಾಗು
ನಗುಮೊಗದ ಮಗುವಾಗು
ನೋವೆಲ್ಲವನು ನುಡಿದು
ಖಾಲಿಯಾಗು
♬♬♬♬♬♬♬♬♬♬♬♬
ಇನ್ನೆಷ್ಟು ಕಾಡುವಿರಿ
ಯಾತನೆಯ ನಿಮಿಷಗಳೇ
ಮನವಿಂದು ನೆಮ್ಮದಿಯ ನೆಲೆಯಾಗಲಿ
ಇನ್ನೆಷ್ಟು ಕಾಡುವಿರಿ
ಯಾತನೆಯ ನಿಮಿಷಗಳೇ
ಮನವಿಂದು ನೆಮ್ಮದಿಯ ನೆಲೆಯಾಗಲಿ
ಭಾವವೇ ತುಸು ನಿಲ್ಲು
ಅಂತರಂಗವ ಕೇಳು
ಭಾವವೇ ತುಸು ನಿಲ್ಲು
ಅಂತರಂಗವ ಕೇಳು
ಸತ್ಯವೇ ನಿತ್ಯವೂ ಜೊತೆಯಾಗಲಿ
ಸತ್ಯವೇ ನಿತ್ಯವೂ ಜೊತೆಯಾಗಲಿ
ಹೃದಯವೇ ಹಗುರಾಗು
ನಗುಮೊಗದ ಮಗುವಾಗು
ನೋವೆಲ್ಲವನು ನುಡಿದು
ಖಾಲಿಯಾಗು
♬♬♬♬♬♬♬♬♬♬♬♬
ಮಾತುಮಾತಲಿ ಜಗಳ
ಶಬ್ದಗಳೆ ಸಮ್ಮನಿರಿ
ಮಾತಿಂದ ಮೌನದಲಿ ಸೆರೆಯಾಗಲಿ
ಮಾತುಮಾತಲಿ ಜಗಳ
ಶಬ್ದಗಳೆ ಸಮ್ಮನಿರಿ
ಮಾತಿಂದ ಮೌನದಲಿ ಸೆರೆಯಾಗಲಿ
ಬೇಸರದ ಸಮಯದಲಿ
ಬಲಿಯಾದ ಬಂಧಗಳು
ಬೇಸರದ ಸಮಯದಲಿ
ಬಲಿಯಾದ ಬಂಧಗಳು
ಮುನಿಸುಗಳ ತೆರೆಸರಿದು
ಜೊತೆಗೂಡಲಿ
ಮುನಿಸುಗಳ ತೆರೆಸರಿದು
ಜೊತೆಗೂಡಲಿ
♬♬♬♬♬♬♬♬♬♬♬♬
ಎಷ್ಟಿಹರೊ ಜಗದೊಳಗೆ
ನೊಂದಿರುವ ಜೀವಗಳು
ಎಲ್ಲರೊಳಗಿನ ನೋವು ನೀಗಬಹುದೇ
ಎಷ್ಟಿಹರೊ ಜಗದೊಳಗೆ
ನೊಂದಿರುವ ಜೀವಗಳು
ಎಲ್ಲರೊಳಗಿನ ನೋವು ನೀಗಬಹುದೇ
ಸಹಜ ಜೀವನದೊಳಗೆ
ಬಂದುದನು ಸ್ವೀಕರಿಸಿ
ಸಹಜ ಜೀವನದೊಳಗೆ
ಬಂದುದನು ಸ್ವೀಕರಿಸಿ
ನಮ್ಮ ಪಾಲಿನದೆಂದು ಬಾಳಬಹುದೇ
ನಮ್ಮ ಪಾಲಿನದೆಂದು ಬಾಳಬಹುದೇ
ಹೃದಯವೇ ಹಗುರಾಗು
ನಗುಮೊಗದ ಮಗುವಾಗು
ನೋವೆಲ್ಲವನು ನುಡಿದು
ಖಾಲಿಯಾಗು
ಹೃದಯವೇ ಹಗುರಾಗು
ನಗುಮೊಗದ ಮಗುವಾಗು
ನೋವೆಲ್ಲವನು ನುಡಿದು
ಖಾಲಿಯಾಗು
ಜೀವವೇ ಹೊಸದಾಗು
ಸತ್ಯ ಚಿಂತಕನಾಗು
ಜೀವವೇ ಹೊಸದಾಗು
ಸತ್ಯ ಚಿಂತಕನಾಗು
ಚಿಂತೆಗಳ ತೊರೆದು ನೀ
ನಿತ್ಯ ಸುಖಿಯಾಗು
ಚಿಂತೆಗಳ ತೊರೆದು ನೀ
ನಿತ್ಯ ಸುಖಿಯಾಗು
ಹೃದಯವೇ ಹಗುರಾಗು
ನಗುಮೊಗದ ಮಗುವಾಗು
ನೋವೆಲ್ಲವನು ನುಡಿದು
ಖಾಲಿಯಾಗು
No comments:
Post a Comment
Write Something about PK Music