Kannada Songs Lyrics, Bhavageethegalu, Bhakthigeethegalu, Janapadageethegalu

Download

adst

Search This Blog

Aagadu Endu Kai Katti Kulithare Lyrics - Bangaarada Manushya

ಚಿತ್ರ: ಬಂಗಾರದ ಮನುಷ್ಯ


ಆಗದು ಎಂದು
ಕೈಲಾಗದು ಎಂದು
ಕೈಕಟ್ಟಿ ಕುಳಿತರೆ...
ಆಗದು ಎಂದು

ಕೈಕಟ್ಟಿ ಕುಳಿತರೆ
ಸಾಗದು ಕೆಲಸವೂ ಮುಂದೆ
ಮನಸೊಂದಿದ್ದರೆ

ಮಾರ್ಗವು ಉಂಟು
ಕೆಚ್ಛೆದೆ ಇರಬೇಕೆಂದು
ಕೆಚ್ಛೆದೆ ಇರಬೇಕೆಂದೆಂದು
ಆಗದು ಎಂದು
ಕೈಲಾಗದು ಎಂದು
ಕೈಕಟ್ಟಿ ಕುಳಿತರೆ
ಸಾಗದು ಕೆಲಸವೂ ಮುಂದೆ
ಸಾಗದು ಕೆಲಸವೂ ಮುಂದೆ
♬♬♬♬♬♬♬♬♬♬♬♬

ಕೆತ್ತಲಾಗದು ಕಗ್ಗಲ್ಲೆಂದು
ಎದೆಗುಂದಿದ್ದರೆ ಶಿಲ್ಪಿ
ಕೆತ್ತಲಾಗದು ಕಗ್ಗಲ್ಲೆಂದು
ಎದೆಗುಂದಿದ್ದರೆ ಶಿಲ್ಪಿ
ಆಗುತಿತ್ತೇ ಕಲೆಗಳ ಬೀಡು
ಗೊಮ್ಮಟೇಶನ ನೆಲೆನಾಡು
ಬೇಲೂರು ಹಳೇಬೀಡು
ಬೇಲೂರು ಹಳೇಬೀಡು
♬♬♬♬♬♬♬♬♬♬♬♬

ಕೆತ್ತಲಾಗದು ಕಗ್ಗಲ್ಲೆಂದು
ಎದೆಗುಂದಿದ್ದರೆ ಶಿಲ್ಪಿ
ಆಗುತಿತ್ತೇ ಕಲೆಗಳ ಬೀಡು
ಗೊಮ್ಮಟೇಶನ ನೆಲೆನಾಡು
ಬೇಲೂರು ಹಳೇಬೀಡು
ಬೇಲೂರು ಹಳೇಬೀಡು
ಆಗದು ಎಂದು
ಕೈಲಾಗದು ಎಂದು
ಕೈಕಟ್ಟಿ ಕುಳಿತರೆ
ಸಾಗದು ಕೆಲಸವೂ ಮುಂದೆ
ಸಾಗದು ಕೆಲಸವೂ ಮುಂದೆ
♬♬♬♬♬♬♬♬♬♬♬♬

ಕಾವೇರಿಯನ್ನು ಹರಿಯಲು ಬಿಟ್ಟು
ಕಾವೇರಿಯನ್ನು ಹರಿಯಲು ಬಿಟ್ಟು
ವಿಶ್ವೇಶ್ವರಯ್ಯ ಶ್ರಮ ಪಡದಿದ್ದರೆ
ಕನ್ನಂಬಾಡಿಯ ಕಟ್ಟದಿದ್ದರೆ
♬♬♬♬♬♬♬♬♬♬♬♬

ಕಾವೇರಿಯನ್ನು ಹರಿಯಲು ಬಿಟ್ಟು
ವಿಶ್ವೇಶ್ವರಯ್ಯ ಶ್ರಮ ಪಡದಿದ್ದರೆ
ಕನ್ನಂಬಾಡಿಯ ಕಟ್ಟದಿದ್ದರೆ
ಬಂಗಾರ ಬೆಳೆವ ಹೊನ್ನಾಡು
ಆಹಾ ಬಂಗಾರ ಬೆಳೆವ ಹೊನ್ನಾಡು
ಆಗುತಿತ್ತೇ ನಾಡು
ಕನ್ನಡ ಸಿರಿನಾಡು
ನಮ್ಮ ಕನ್ನಡ ಸಿರಿನಾಡು
ಆಗದು ಎಂದು
ಕೈಲಾಗದು ಎಂದು
ಕೈಕಟ್ಟಿ ಕುಳಿತರೆ
ಸಾಗದು ಕೆಲಸವೂ ಮುಂದೆ
ಸಾಗದು ಕೆಲಸವೂ ಮುಂದೆ
♬♬♬♬♬♬♬♬♬♬♬♬

ಕೈ ಕೆಸರಾದರೆ ಬಾಯಿ ಮೊಸರೆಂಬ
ಹಿರಿಯರ ಅನುಭವ ಸತ್ಯ ...
ಇದ ನೆನಪಿಡಬೇಕು ನಿತ್ಯ ...

ಕೈ ಕೆಸರಾದರೆ ಬಾಯಿ ಮೊಸರೆಂಬ
ಹಿರಿಯರ ಅನುಭವ ಸತ್ಯ
ಇದ ನೆನಪಿಡಬೇಕು ನಿತ್ಯ
ದುಡಿಮೆಯ ನಂಬಿ ಬದುಕು…
ದುಡಿಮೆಯ ನಂಬಿ ಬದುಕು
ಅದರಲೇ ದೇವರ ಹುಡುಕು
ಬಾಳಲಿ ಬರುವುದು ಬೆಳಕು
ನಮ್ಮ ಬಾಳಲಿ ಬರುವುದು ಬೆಳಕು
ಆಗದು ಎಂದು
ಕೈಲಾಗದು ಎಂದು
ಕೈಕಟ್ಟಿ ಕುಳಿತರೆ
ಸಾಗದು ಕೆಲಸವೂ ಮುಂದೆ
ಮನಸೊಂದಿದ್ದರೆ ಮಾರ್ಗವು ಉಂಟು
ಕೆಚ್ಛೆದೆ ಇರಬೇಕೆಂದು
ಕೆಚ್ಛೆದೆ ಇರಬೇಕೆಂದೆಂದು
ಆಗದು ಎಂದು
ಕೈಲಾಗದು ಎಂದು
ಕೈಕಟ್ಟಿ ಕುಳಿತರೆ
ಸಾಗದು ಕೆಲಸವೂ ಮುಂದೆ
ಸಾಗದು ಕೆಲಸವೂ ಮುಂದೆ

No comments:

Post a Comment

Write Something about PK Music

new1

new2

new5